ದಾವಣಗೆರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪ್ರಸಕ್ತ ಸಾಲಿನಿಂದ ತನ್ನ ವ್ಯಾಪ್ತಿಯ ಸರ್ಕಾರಿ ಎಂಜಿನಿಯರಿಂಗ್ ಘಟಕ ಕಾಲೇಜುಗಳಲ್ಲಿ ಪೇಮೆಂಟ್ ಕೋಟಾದ ಅಡಿ ಸೀಟು ಹಂಚಿಕೆ ಮಾಡುವ ಪದ್ಧತಿಗೆ ಚಾಲನೆ ನೀಡಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ದಾವಣಗೆರೆಯ ಯುಬಿಡಿಟಿ ಹಾಗೂ ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈ ವರ್ಷದಿಂದ ಪದವಿ ವಿಭಾಗ ಆರಂಭಿಸಿರುವ ವಿ.ವಿ, ಶೇ 50ರಷ್ಟು ಸೀಟುಗಳನ್ನು ಪೇಮೆಂಟ್ ಕೋಟಾದ ಅಡಿ ನೀಡಲು ನಿರ್ಧರಿಸಿದೆ.

ಸರ್ಕಾರ ಅಗತ್ಯ ಅನುದಾನ ನೀಡದ್ದರಿಂದ ಮುಂದಿನ ವರ್ಷದಿಂದ ಕಲಬುರಗಿ ಹಾಗೂ ಬೆಳಗಾವಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಘಟಕ ಕಾಲೇಜುಗಳಲ್ಲೂ ಈ ಪದ್ಧತಿ ಅಳವಡಿಸುವ ಚಿಂತನೆ ನಡೆದಿದೆ ಎಂದು ವಿ.ವಿ.ಯ ಮೂಲಗಳು ತಿಳಿಸಿವೆ.

ಬಡ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಆಶಾಕಿರಣವಾಗಿ 73 ವರ್ಷಗಳ ಹಿಂದೆ ಆರಂಭವಾಗಿರುವ ದಾವಣಗೆರೆಯ ಕಾಲೇಜಿನಲ್ಲಿ ವಾರ್ಷಿಕ 504 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇದೆ. ಈ ವರ್ಷದಿಂದ ಮೆರಿಟ್ ಆಧಾರದ 250 ಸೀಟುಗಳಿಗೆ ವಾರ್ಷಿಕ ₹ 43,000 ಶುಲ್ಕ, ಇನ್ನುಳಿದ 254 ಸೀಟುಗಳಿಗೆ ಪೇಮೆಂಟ್ ಕೋಟಾ ಅಡಿ ವಾರ್ಷಿಕ ₹ 97,000 ಶುಲ್ಕ ಆಕರಿಸಲಾಗುತ್ತಿದೆ.

‘ಕಳೆದ ವರ್ಷದವರೆಗೂ ಕಾಲೇಜಿನ ವಿವಿಧ ಬ್ರ್ಯಾಂಚ್ಗಳಲ್ಲಿ ಒಟ್ಟು 360 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇತ್ತು. ಈ ಬಾರಿ ಹೊಸದಾಗಿ, 60 ಸೀಟುಗಳ ಕೃತಕ ಬುದ್ದಿಮತ್ತೆ (ಎಐ) ವಿಭಾಗ ಆರಂಭಿಸಲಾಗಿದೆ. ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ತಲಾ 60 ಸೀಟುಗಳನ್ನು ಹೆಚ್ಚಿಸಲಾಗಿದೆ. ಪೇಮೆಂಟ್ ಕೋಟಾ ಅಡಿ 254 ಸೀಟುಗಳನ್ನು ಹಂಚಿಕೆ ಮಾಡಲಾಗುತ್ತಿದೆ’ ಎಂದು ಕಾಲೇಜಿನ ಪ್ರಾಚಾರ್ಯ ಡಿ.ಪಿ. ನಾಗರಾಜಪ್ಪ ತಿಳಿಸಿದರು.

‘ದಾವಣಗೆರೆಯ ಯುಬಿಡಿಟಿ ಹಾಗೂ ಚಿಂತಾಮಣಿಯ ಕಾಲೇಜುಗಳಲ್ಲಿ ಪೇಮೆಂಟ್ ಕೋಟಾ ಆರಂಭಿಸಲಾಗಿಲ್ಲ. ಬದಲಿಗೆ, ಸಿಇಟಿ ರ್ಯಾಂಕ್ ಆಧರಿಸಿ ₹ 97,000ಕ್ಕೆ ಇಂತಿಷ್ಟು ಸೀಟು ಹಂಚಲು ನಿರ್ಧರಿಸಲಾಗಿದೆ’ ಎಂದು ವಿವಿಯ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಸ್ಪಷ್ಟಪಡಿಸಿದರು.

ಶುಲ್ಕ ಹೆಚ್ಚಳ ನಿರ್ಧಾರ ಕೈಬಿಟ್ಟ ಕಾಲೇಜು:

ಪ್ರಸಕ್ತ ವರ್ಷದಿಂದ 3 ಮತ್ತು 4ನೇ ವರ್ಷದ ವಿದ್ಯಾರ್ಥಿಗಳ ವಾರ್ಷಿಕ ಶುಲ್ಕವನ್ನೂ ಕ್ರಮವಾಗಿ ₹ 4,000 ಹಾಗೂ ₹ 6,000ದಷ್ಟು ಹೆಚ್ಚಿಸಲಾಗಿತ್ತು. ಶುಲ್ಕ ಹೆಚ್ಚಳ ಮತ್ತು ಪೇಮೆಂಟ್ ಕೋಟಾವನ್ನು ವಿರೋಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ)ಯು ಪ್ರತಿಭಟನೆ ನಡೆಸಿದ್ದರಿಂದ ಶುಲ್ಕ ಹೆಚ್ಚಳ ನಿರ್ಧಾರ ಕೈಬಿಡಲಾಗಿದೆ. ಆದರೆ, ಪೇಮೆಂಟ್ ಕೋಟಾದಡಿ ಸೀಟು ಹಂಚಿಕೆ ಮಾಡುವ ನಿರ್ಧಾರವನ್ನು ಹಿಂದೆ ಪಡೆಯಲಾಗಿಲ್ಲ.

ಇದನ್ನು ವಿರೋಧಿಸಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿರುವ ಎಐಡಿಎಸ್ಒ, ಸಾರ್ವಜನಿಕರ ಸಹಿ ಸಂಗ್ರಹ ಮಾಡಿದ್ದು, ಇದೇ 16ರಂದು ದಾವಣಗೆರೆ ಬಂದ್ಗೆ ಕರೆ ನೀಡಿದೆ.

ಸಿಬ್ಬಂದಿಯಿಂದಲೂ ಧರಣಿ:

ಸೇವ ಹಿರಿತನದ ಆಧಾರದಲ್ಲಿ ವೇತನ ಹೆಚ್ಚಿಸಬೇಕು, ಸಕಾಲಕ್ಕೆ ವೇತನ ಪಾವತಿ ಮಾಡಬೇಕು, ನೇರ ನೇಮಕಾತಿ ವ್ಯವಸ್ಥೆ ಜಾರಿಗೊಳಿಸಬೇಕು, ಹೊರ ಗುತ್ತಿಗೆ ಪದ್ಧತಿ ರದ್ದುಪಡಿಸಬೇಕು ಎಂದು ಆಗ್ರಹಿಸಿ ಯುಬಿಡಿಟಿ ಕಾಲೇಜಿನ ‘ಸಿ’ ಮತ್ತು ‘ಡಿ’ ಗ್ರೂಪ್ನ ಹೊರಗುತ್ತಿಗೆ ನೌಕರರು ಸೆ. 23ರಂದು ಧರಣಿ ಆರಂಭಿಸಿದ್ದರು.

ಅಭಿವೃದ್ಧಿ ವಿನೂತನ ತಂತ್ರಜ್ಞಾನ ಅಳವಡಿಕೆ ಸಂಶೋಧನೆ ಸಂಬಳ ಮತ್ತು ನಿರ್ವಹಣೆಗಾಗಿ ಸರ್ಕಾರವು ವಿ.ವಿ.ಗೆ ಅಗತ್ಯ ಅನುದಾನ ನೀಡುತ್ತಿಲ್ಲ. ದಾವಣಗೆರೆಯ ಕಾಲೇಜೊಂದಕ್ಕೇ ವಾರ್ಷಿಕ ₹ 75 ಕೋಟಿ ಅನುದಾನದ ಅಗತ್ಯವಿದೆ. ಆದರೆ ಸರ್ಕಾರ ಈ ಕುರಿತು ಕ್ರಮ ಕೈಗೊಂಡಿಲ್ಲ
ಪ್ರೊ.ಎಸ್.ವಿದ್ಯಾಶಂಕರ್ ಕುಲಪತಿ ವಿಟಿಯು

ಸದ್ದಿಲ್ಲದೇ ಹೆಚ್ಚುತ್ತಿರುವ ಶುಲ್ಕ!

‘5 ವರ್ಷಗಳ ಹಿಂದೆ ವಾರ್ಷಿಕ ₹ 18000 ಇದ್ದ ಶುಲ್ಕವನ್ನು ಪ್ರತಿ ವರ್ಷವೂ ಹೆಚ್ಚಿಸುತ್ತಲೇ ಬರಲಾಗಿದ್ದು ಇದೀಗ ₹ 43000ಕ್ಕೆ ತಲುಪಿದೆ. ಮೊದಲಿದ್ದ ಶುಲ್ಕ ಭರಿಸುವುದೇ ಅಸಾಧ್ಯ ಎಂಬ ಸ್ಥಿತಿಯಲ್ಲಿದ್ದ ಬಡ ವಿದ್ಯಾರ್ಥಿಗಳಿಗೆ ಪೇಮೆಂಟ್ ಕೋಟಾ ಆರಂಭಿಸಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಎಐಡಿಎಸ್ಒ ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಸ್. ಸುಮನ್ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು. ‘ಕಾಲೇಜಿನಲ್ಲಿದ್ದ ಇಂಡಸ್ಟ್ರಿಯಲ್ ಆ್ಯಂಡ್ ಪ್ರೊಡಕ್ಷನ್ ಎಂಜಿನಿಯರಿಂಗ್ ವಿಭಾಗವನ್ನು ಈ ವರ್ಷ ಬಂದ್ ಮಾಡಲಾಗಿದ್ದು ಅದರ ಬದಲಿಗೆ ಎ.ಐ ವಿಭಾಗ ಆರಂಭಿಸಲಾಗಿದೆ. ಕಾಲೇಜಿಗಿದ್ದ ಜಿಬಿಡಿಟಿ (ಸರ್ಕಾರಿ ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ್) ಎಂಬ ಹೆಸರನ್ನು ತೆಗೆದು ಯುಬಿಡಿಟಿ ಎಂದು ಮರು ನಾಮಕರಣ ಮಾಡಲಾಗಿದೆ. ಶಿಕ್ಷಣ ಅತ್ಯಂತ ದುಬಾರಿ ಆಗಿರುವ ಕಾಲದಲ್ಲಿ ಬಡ ವಿದ್ಯಾರ್ಥಿಗಳ ನೆರವಿಗಿದ್ದ ಈ ಕಾಲೇಜಿಗೆ 2011ರಿಂದ ಸರ್ಕಾರ ಅಗತ್ಯ ಅನುದಾನ ನೀಡುವುದನ್ನು ಸ್ಥಗಿತಗೊಳಿಸಿದೆ. ಈ ಸಂಬಂಧ ಸಂಘಟನೆಯ ನಿಯೋಗ 3 ದಿನಗಳ ಹಿಂದಷ್ಟೇ ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೆ ಅವರಿಂದ ಸೂಕ್ತ ಸ್ಪಂದನೆಯೇ ವ್ಯಕ್ತವಾಗಲಿಲ್ಲ’ ಎಂದು ದೂರಿದರು.

‘ಅನುದಾನ ಸಿಗುತ್ತಿಲ್ಲ’

ಅಭಿವೃದ್ಧಿ, ವಿನೂತನ ತಂತ್ರಜ್ಞಾನ ಅಳವಡಿಕೆ, ಸಂಶೋಧನೆ, ಸಂಬಳ ಮತ್ತು ನಿರ್ವಹಣೆಗಾಗಿ ಸರ್ಕಾರವು ವಿ.ವಿ.ಗೆ ಅಗತ್ಯ ಅನುದಾನ ನೀಡುತ್ತಿಲ್ಲ. ದಾವಣಗೆರೆಯ ಕಾಲೇಜೊಂದಕ್ಕೇ ವಾರ್ಷಿಕ ₹75 ಕೋಟಿ ಅನುದಾನದ ಅಗತ್ಯವಿದೆ. ಆದರೆ, ಸರ್ಕಾರ ಈ ಕುರಿತು ಕ್ರಮ ಕೈಗೊಂಡಿಲ್ಲ ಎಂದು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ತಿಳಿಸಿದರು.

ಸರ್ಕಾರಿ ಸೀಟಿಗೆ ಖಾಸಗಿ, ಡೀಮ್ಡ್ ವಿವಿ ಶುಲ್ಕ

ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್ಗಳ ಶುಲ್ಕವನ್ನು ಇದೇ ಜುಲೈನಲ್ಲಿ ಶೇ 10ರಷ್ಟು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಸಮ್ಮತಿಸಿತ್ತು.

2023-24ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ₹38,200, ಅಲ್ಪಸಂಖ್ಯಾತ ಕಾಲೇಜುಗಳು ಸೇರಿದಂತೆ ಖಾಸಗಿ ಕಾಲೇಜುಗಳಲ್ಲಿ ₹98,984, ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ₹91,796 ಇತ್ತು.

ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆರಿಟ್ ಆಧಾರದ ಸೀಟುಗಳಿಗೆ ಸರ್ಕಾರಿ ಕಾಲೇಜುಗಳ ಶುಲ್ಕ ಹಾಗೂ ಉಳಿದ ಸೀಟುಗಳಿಗೆ ಖಾಸಗಿ ಕಾಲೇಜು ಹಾಗೂ ಡೀಮ್ಡ್ ವಿಶ್ವ
ವಿದ್ಯಾಲಯಗಳಿಗೆ ನಿಗದಿ ಮಾಡಿದ ಶುಲ್ಕ ಪಡೆಯಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.