ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತೇಬೆನ್ನೂರು: ಕೃಷಿಗೆ ನೆರವಾದ ಹದ ಮಳೆ

Published 13 ಜೂನ್ 2024, 13:42 IST
Last Updated 13 ಜೂನ್ 2024, 13:42 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಹದ ಮಳೆ ಬಿದ್ದಿದ್ದು, ಸಾವಿರಾರು ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದ್ದ ಮೆಕ್ಕೆಜೋಳದ ಬೆಳೆಗೆ ಅನುಕೂಲವಾಗಿದೆ. 

ಕಳೆದ ವಾರ ಸುರಿದ ಹದ ಮಳೆಯಿಂದ ಸಂತಸಗೊಂಡಿದ್ದ ಕೃಷಿಕರು, ಬಿತ್ತನೆ ಕಾರ್ಯ ಕೈಗೊಂಡಿದ್ದರು. ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಪಾಪ್ ಕಾರ್ನ್ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬೀಜ ಮೊಳಕೆಯೊಡೆದು ಒಂದೆರಡು ಎಲೆ ಮೂಡಿದ್ದ ಸಾಲು ಕಾಣುತ್ತಿದ್ದವು. ಬಿತ್ತನೆ ನಂತರ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದ್ದುದು ರೈತರು ಮುಗಿಲತ್ತ ಮುಖಮಾಡುವಂತೆ ಮಾಡಿತ್ತು.

ಶೀತ ಗಾಳಿ, ಮಳೆ ಸುರಿಸದೇ ತೇಲಿ ಹೋಗುವ ಮೋಡ, ಆಗಾಗ ಇಣುಕುವ ಬಿಸಿಲಿನ ವಾತಾವರಣ ಮುಂದುವರಿದಿತ್ತು. ಈಗಾಗಲೇ ರೈತರು ಬಿತ್ತನೆಗೆ ಸಾಕಷ್ಟು ಹಣ ವ್ಯಯಿಸಿದ್ದಾರೆ. ಬೀಜಗಳು ಮೊಳಕೆಯೊಡೆದು ಚಿಗುರು ಮೂಡಲು ಇನ್ನೂ ಮಳೆ ಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಈಗಾಗಲೇ ಚಿಗುರೊಡೆದಿರುವ ಎಲೆಗಳು ಬಾಡದಂತೆ ಇರಲೂ ಮಳೆಯ ಅಗತ್ಯವಿದೆ ಎಂದು ರೈತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT