ಹುಬ್ಬಳ್ಳಿ: ಜಿಲ್ಲೆಯಾದ್ಯಂತ 476.5 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ 4,339 ಮೆಟ್ರಿಕ್ ಟನ್ ಹೂವುಲಾಕ್ಡೌನ್ ಪರಿಣಾಮ ಹಾಳಾಗಿದೆ. ಹೂವಿನ ವ್ಯಾಪಾರ ಸಂಪೂರ್ಣ ಸ್ಥಗಿತವಾಗಿದೆ. ತೋಟದಲ್ಲಿ ಬೆಳೆದು ನಿಂತಿದ್ದ ಹೂವುಗಳು ಬಾಡಿ, ಉದುರಿವೆ.

ಜಿಲ್ಲೆಯಾದ್ಯಂತ 99.65 ಹೆಕ್ಟೇರ್ನಲ್ಲಿ ಬೆಳೆದಿದ್ದ ಚೆಂಡು, 10 ಹೆಕ್ಟೇರ್ನಲ್ಲಿ ಮಲ್ಲಿಗೆ, ಸೇವಂತಿಗೆ 184.26 ಹೆಕ್ಟೇರ್, ಸುಗಂಧರಾಜ 59.34 ಹೆಕ್ಟೇರ್, ಗಲಾಟಿ 100 ಹೆಕ್ಟೇರ್, 23.35 ಹೆಕ್ಟೇರ್ನಲ್ಲಿ ಬೆಳೆದಿದ್ದ ಗುಲಾಬಿ ಹೂವು ಹಾಳಾಗಿದೆ.

80 ಗುಂಟೆಯಲ್ಲಿ ಸೇವಂತಿ, ಗುಲಾಬಿ 1.8 ಹೆಕ್ಟೇರ್, 1.6 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಜರ್ಬೆರಾ ಹಾಳಾಗಿದೆ. ಹುಬ್ಬಳ್ಳಿ ತಾಲ್ಲೂಕಿನ ರೇವಡಿಹಾಳದ ಮೌಲಾಸಾಬ್ ಮುಲ್ಲಾನವರ ಅವರಿಗೆ ಸೇರಿದ 2 ಎಕರೆಯಲ್ಲಿ ಗುಲಾಬಿ ಹಾಗೂ ಗಲಾಟಿ ಹೂವು ಒಣಗಿದೆ.

‘ಲಾಕ್ಡೌನ್ ಬಳಿಕ ಹೂವಿನ ವಹಿವಾಟಿನಲ್ಲಿ ₹20 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ಕಾಯಿಪಲ್ಲೆ ವಹಿವಾಟಿಗೆ ನೀಡಿರುವಂತೆ ಹೂವಿನ ವ್ಯಾಪಾರಕ್ಕೂ ವಿನಾಯ್ತಿ ನೀಡಿ, ಬೆಳೆಗಾರರು ಹಾಗೂ ವ್ಯಾಪಾರಿಗಳ ಹಿತ ಕಾಯಬೇಕು’ ಎಂದುಹೂವಿನ ವ್ಯಾಪಾರಿಇಮ್ರಾನ್ ಹೇಳಿದರು.

‘ಹೂವಿನ ಬೆಳೆ ನಷ್ಟ ಕುರಿತ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಕಲಘಟಗಿ, ಹುಬ್ಬಳ್ಳಿ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಲಾಬಿ ಹಾಳಾಗಿದೆ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.