ಒಂದೂವರೆ ಶತಮಾನ ಇತಿಹಾಸದ ಕಾರಾಗೃಹ
ಬೆಳಗಾವಿ– ಬೆಂಗಳೂರು ಹೆದ್ದಾರಿ ಬದಿಯ ಈ ಕಾರಾಗೃಹ ಬ್ರಿಟಿಷರ ಕಾಲದ್ದು. 1858ರಲ್ಲಿ ಆರಂಭವಾಗಿರುವ ಈ ಕಾರಾಗೃಹವು 166 ವರ್ಷಗಳ ಚರಿತ್ರೆ ಹೊಂದಿದೆ. 1931ರಲ್ಲಿ ಈ ಕಟ್ಟಡದ ಆವರಣದಲ್ಲಿ ತರುಣ ಬಂದೀಖಾನೆ ಪ್ರಾರಂಭಿಸಲಾಗಿತ್ತು. 1963ರಲ್ಲಿ ಇಲ್ಲಿ ಬಾಲಪರಾಧಿ ಶಾಲೆ ತೆರೆಯಲಾಗಿತ್ತು. 2007ರಲ್ಲಿ ಈ ಜಿಲ್ಲಾ ಉಪ ಕಾರಾಗೃಹವನ್ನು ಕೇಂದ್ರ ಕಾರಾಗೃಹವನ್ನಾಗಿ ಮೇಲ್ದರ್ಜೆಗೇರಿಸಲಾಯಿತು. ಪ್ರಸ್ತುತ ಎರಡು ಜಿಲ್ಲಾ ಕಾರಾಗೃಹ ಒಂದು ಉಪಕಾರಾಗೃಹ ಇದರ ವ್ಯಾಪ್ತಿಯಲ್ಲಿವೆ. 575 ಪುರುಷ ಹಾಗೂ 100 ಮಹಿಳಾ ಒಟ್ಟು 675 ಕೈದಿಗಳನ್ನು ಇಡುವ ಸ್ಥಳಾವಕಾಶ ಇದೆ.