ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನವಲಗುಂದ | ಉತ್ತಮ ಮಳೆ: ಬಿತ್ತನೆಗೆ ಸಜ್ಜಾದ ಅನ್ನದಾತ

ಅಬ್ದುಲರಝಾಕ ನದಾಫ್
Published : 23 ಮೇ 2024, 5:50 IST
Last Updated : 23 ಮೇ 2024, 5:50 IST
ಫಾಲೋ ಮಾಡಿ
Comments
ನವಲಗುಂದ ವ್ಯಾಪ್ತಿಯಲ್ಲಿ ರೈತರೊಬ್ಬರು ಬಿತ್ತನೆಗಾಗಿ ಭೂಮಿಯನ್ನು ಹದಗೊಳಿಸಿದರು
ನವಲಗುಂದ ವ್ಯಾಪ್ತಿಯಲ್ಲಿ ರೈತರೊಬ್ಬರು ಬಿತ್ತನೆಗಾಗಿ ಭೂಮಿಯನ್ನು ಹದಗೊಳಿಸಿದರು
ರೋಹಿಣಿ ಮಳೆ ನಿರೀಕ್ಷೆಯಲ್ಲಿ ರೈತರು ಅಗತ್ಯದಷ್ಟು ಬೀಜ, ಗೊಬ್ಬರ ದಾಸ್ತಾನು ತೊಗರಿ, ಉದ್ದು, ಅಲಸಂದಿ ಬೆಳೆಗೂ ಆದ್ಯತೆ
ರೈತರಿಗೆ ಬೀಜ ರಸಗೊಬ್ಬರದ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದ್ದು ರಿಯಾಯಿತಿ ದರದಲ್ಲಿ ಬೀಜ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೆ ರೋಗಬಾಧೆ ತಡೆಗಟ್ಟಬಹುದು
ಶಿವಕುಮಾರ ಬೀರಣ್ಣವರ ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ನವಲಗುಂದ
ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು
–ಎನ್.ಎಚ್. ಕೋನರಡ್ಡಿ ಶಾಸಕ 
27ರಿಂದ ಬಿತ್ತನೆ ಬೀಜ ವಿತರಣೆ
ನವಲಗುಂದ ಅಣ್ಣಿಗೇರಿ ಮೊರಬ ಹಾಗೂ ಶಲವಡಿ ಗ್ರಾಮಗಳಲ್ಲಿನ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬೀಜ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದ್ದು ಮೇ 27ರಿಂದ ವಿತರಣೆ ಆರಂಭವಾಗಲಿದೆ. ರೈತರು ಅಗತ್ಯ ದಾಖಲೆಗಳನ್ನು ನೀಡಿ ಬೀಜ ಖರೀದಿಸಬಹುದಾಗಿದೆ. ಹೆಸರು ಬೀಜಕ್ಕೆ ಸಾಮಾನ್ಯ ರೈತರಿಗೆ ಒಂದು ಪ್ಯಾಕೆಟ್‍ಗೆ ₹805 ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಪ್ಯಾಕೆಟ್‍ಗೆ ₹742.50 ನಿಗದಿಪಡಿಸಲಾಗಿದೆ. 153 ಕ್ವಿಂಟಲ್ ಹೆಸರು ಬೀಜ  ದಾಸ್ತಾನು ಮಾಡಲಾಗಿದ್ದು ರೈತರು ನಕಲಿ ಬೀಜಗಳನ್ನು ಖರೀದಿಸದೆ ಪ್ರಮಾಣೀಕರಿಸಿದ ಬೀಜಗಳನ್ನು ಮಾತ್ರ ಖರೀದಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಡಿಎಪಿ ಗೊಬ್ಬರ 120 ಮೆಟ್ರಿಕ್ ಟನ್ ಹಾಗೂ 20-20-0-13 ಗೊಬ್ಬರ 285 ಮೆಟ್ರಿಕ್ ಟನ್  ದಾಸ್ತಾನು ಮಾಡಲಾಗಿದೆ.
‘ನಕಲಿ ಬೀಜ ಹಾವಳಿ ತಡೆಯಿರಿ’
ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗದೆ ರೈತರು ನಷ್ಟ ಅನುಭವಿಸಿದ್ದಾರೆ. ರೋಹಿಣಿ ಮಳೆ ಉತ್ತಮವಾಗಿ ಸುರಿಯಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಬಿತ್ತನೆಗಾಗಿ ಹೊಲಗಳನ್ನು ಹದಗೊಳಿಸುತ್ತಿದ್ದಾರೆ. ನಕಲಿ ಬಿತ್ತನೆ ಬೀಜ ಹಾವಳಿ ಹೆಚ್ಚಾಗಿದ್ದು ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಶಿವಾನಂದ ಕೊಳಲಿನ ಪ್ರಗತಿಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT