ಮಹಾ ಸ್ವಚ್ಛತಾ ಅಭಿಯಾನದ ಅಂಗವಾಗಿ ಹುಬ್ಬಳ್ಳಿಯ ಕೊಠಾರಿ ಲೇಔಟ್‌ನಲ್ಲಿ ಸ್ವಯಂ ಸೇವಕರು ಕಸ ಗುಡಿಸಿದರು
ಮಹಾ ಸ್ವಚ್ಛತಾ ಅಭಿಯಾನದ ಅಂಗವಾಗಿ ಹುಬ್ಬಳ್ಳಿಯ ಗೋಕುಲ ರಸ್ತೆಯ ಲೋಟಸ್ ಗಾರ್ಡನ್‌ನಲ್ಲಿ ನಡೆದ ಸಭಾಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಕೆಲವರು ಕರ್ನಾಟಕ–ಮಹಾರಾಷ್ಟ್ರ ಕನ್ನಡ–ಮರಾಠಿ ಎಂದು ಬಡಿದಾಡುತ್ತಾರೆ. ಆದರೆ ನೀವು ಮಹಾರಾಷ್ಟ್ರದಿಂದ ಇಲ್ಲಿಗೆ ಬಂದು ಸ್ವಚ್ಛತೆ ಮಾಡಿ ದೇಶದ ಏಕತೆ ಅಖಂಡತೆ ಸಾರಿದ್ದೀರಿ
ಪ್ರಲ್ಹಾದ ಜೋಶಿ ಕೇಂದ್ರ ಸಚಿವ
‘ಬೈಯದಿದ್ದರೆ ಸಚಿವ ಸ್ಥಾನಕ್ಕೆ ಕುತ್ತು’
ಹುಬ್ಬಳ್ಳಿ: ‘ಕಾಂಗ್ರೆಸ್ ಶಾಸಕರೇ ಭ್ರಷ್ಟಾಚಾರದ ಕುರಿತು ಮಾತನಾಡಿದ್ದಾರೆ. ಮುಖ್ಯಮಂತ್ರಿ–ಉಪ ಮುಖ್ಯಮಂತ್ರಿ ನಡುವೆ ಜಗಳ ಇದೆ. ಹೀಗೆ ತಮ್ಮ ಸರ್ಕಾರವನ್ನು ಕಾಂಗ್ರೆಸ್ ಪಕ್ಷವೇ ಅಭದ್ರಗೊಳಿಸುತ್ತಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು. ಸರ್ಕಾರವನ್ನು ಅಭದ್ರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ಸಚಿವ ಸಂತೋಷ್ ಲಾಡ್ ಹೇಳಿಕೆಗೆ ಭಾನುವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ‘ಸರ್ಕಾರವನ್ನು ಯಾರೂ ಅಭದ್ರಗೊಳಿಸುವ ಅಗತ್ಯವೇ ಇಲ್ಲ. ಸ್ವತಃ ಕಾಂಗ್ರೆಸ್‌ನವರೇ ಆ ಕೆಲಸ ಮಾಡುತ್ತಿದ್ದಾರೆ. ಅದನ್ನು ಬಿಜೆಪಿ ಮೇಲೆ ಹಾಕುತ್ತಿದ್ದಾರೆ’ ಎಂದರು. ‘ಬಿಜೆಪಿ ಮೋದಿ ಜೋಶಿ ಅವರನ್ನು ಬೈದಿಲ್ಲ ಎಂದಾದರೆ ಸಚಿವ ಸ್ಥಾನದಿಂದ ಕೆಳಗಿಳಿಸುವ ಬೆದರಿಕೆ ಲಾಡ್ ಅವರಿಗಿದೆ. ಹೀಗಾಗಿ ಹೆಚ್ಚು ಮಳೆ ಆದರೂ ಬಿಜೆಪಿ ಕಾರಣ ಎಂದು ಅವರು ಹೇಳುತ್ತಾರೆ. ಬೈದುಕೊಳ್ಳಲಿ ಬಿಡಿ’ ಎಂದು ವ್ಯಂಗ್ಯವಾಡಿದರು. ಸಂಸದ ಡಿ.ಕೆ. ಸುರೇಶ್ ಅವರ ಪ್ರತ್ಯೇಕ ದೇಶದ ಹೇಳಿಕೆ ಕುರಿತು ‘ಅವರ ಮನಸ್ಥಿತಿಯೇ ಭಾರತೀಯತೆ ಹಿಂದೂ ವಿರೋಧಿಯಾಗಿದೆ. ತುಷ್ಟೀಕರಣ ರಾಜಕಾರಣದ ಫಲವಾಗಿ ಅವರು ಹೀಗೆಲ್ಲ ಮಾತನಾಡುತ್ತಾರೆ’ ಎಂದು ಕುಟುಕಿದರು. ‘ಸುರೇಶ್ ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆ ಕುರಿತು ಪರಿಶೀಲನೆ ನಡೆಯುತ್ತಿದೆ. ಆದರೆ ನೀತಿ ಸಮಿತಿಗೆ ಶಿಫಾರಸು ಮಾಡುವಂತೆ ನಾನು ಸ್ಪೀಕರ್‌ಗೆ ಮನವಿ ಮಾಡಿದ್ದೇನೆ’ ಎಂದರು. ‘ಹಿಂದೂ’ ಪದದ ಕುರಿತು ಸತೀಶ ಜಾರಕಿಹೊಳಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿ ‘ಹಿಂದೂ ಅಸ್ಮಿತೆಯನ್ನು ವಿರೋಧಿಸುವುದು ಅಪಮಾನ ಮಾಡುವುದು ಕಾಂಗ್ರೆಸ್ ಪಕ್ಷದ ನೀತಿ’ ಎಂದು ಲೇವಡಿ ಮಾಡಿದರು. ‘ಭಾರತ ಹಿಂದೂ ಎಂಬ ವಿಚಾರಗಳನ್ನು ವಿರೋಧಿಸುವುದು ಹಾಗೂ ಬಾಹ್ಯ ಶಕ್ತಿಗಳನ್ನು ಬೆಂಬಲಿಸುವುದು ಕಾಂಗ್ರೆಸ್ ನಿಲುವು. ಇದೇ ಕಾರಣಕ್ಕೆ ದೇಶ ವಿಭಜನೆ ಆಯಿತು’ ಎಂದೂ ಆರೋಪಿಸಿದರು.