ಕುಂದಗೋಳ: ಬೆಳೆ ವಿಮೆ ಪರಿಹಾರದಲ್ಲಿ ಅಧಿಕಾರಿಗಳು ವಿಮಾ ಕಂಪನಿಯವರು, ಏಜೆಂಟರು 50-50ಯಲ್ಲಿ ವಿಮಾ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಡಿಪಿ ನಾಮ ನಿರ್ದೇಶಿತ ಸದಸ್ಯ ವೆಂಕನಗೌಡ ಪಾಟೀಲ ಗಂಭೀರ ಆರೋಪ ಮಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿ ಮಂಗಳವಾರ ಕೆಡಿಪಿ ಸಭೆಯಲ್ಲಿ ಕೃಷಿ ಸಹಾಯಕ ಅಧಿಕಾರಿ ಭಾರತಿ ಮೆಣಸಿನಕಾಯಿ ಇಲಾಖಾ ವರದಿಯನ್ನು ಮಂಡಿಸುತ್ತಿರುವಾಗ ವೆಂಕನಗೌಡ ಪಾಟೀಲ ಮಾತನಾಡಿ, ‘ರೈತರು ಸಲ್ಲಿಸಿದ ಬೆಳೆ ವಿಮೆಗೆ ಒಂದು ಪೈಸೆಗೂ ಪರಿಹಾರ ಬರುವುದಿಲ್ಲಾ. ಏಜೆಂಟರ ಮೂಲಕ ಮಾತ್ರ ಬೆಳೆ ವಿಮೆ ಪರಿಹಾರ ಬರುತ್ತಿದೆ. ಇದು ಹೇಗೆ’ ಎಂದು ಪ್ರಶ್ನಿಸಿದರು.

ಈ ಕುರಿತು ನಮಗೆ ಮಾಹಿತಿ ಇಲ್ಲಾ. ವಿಮಾ ಕಂಪನಿಯವರನ್ನೆ ಕೇಳಬೇಕೆಂದು ಅಧಿಕಾರಿ ಹೇಳಿದಾಗ ಗ್ಯಾರಂಟಿ ಯೋಜನೆಯ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಬೆಂತೂರ ಮಧ್ಯ ಪ್ರವೇಶಿಸಿ ವಿಮಾ ಕಂಪನಿಯವರನ್ನು ಸಭೆಗೆ ಏಕೆ ಕರೆಸಿಲ್ಲಾ ಎಂದು ಪ್ರಶ್ನಿಸಿದರು.

ತಾಲ್ಲೂಕು ಪಂಚಾಯಿತಿ ಜಗದೀಶ ಕಮ್ಮಾರ ಮುಂದಿನ ಸಭೆಗೆ ಕರೆಸುವುದಾಗಿ ಹೇಳಿದಾಗ, ಕೆಡಿಪಿ ಸದಸ್ಯರು ‘ಈಗ ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೆ ವಿಮಾ ಕಂಪನಿಯವರು, ಅಣೆವಾರಿ ಮಾಡಿದವರು, ಕೃಷಿ, ಕಂದಾಯ, ತೋಟಗಾರಿಕಾ ಇಲಾಖೆಯ ಒಳಗೊಂಡು ಕೂಡಲೆ ಸಭೆ ಮಾಡಬೇಕು’ ಎಂದು ಒತ್ತಾಯಿಸಿದರು.

ಶಾಸಕ ಎಂ.ಆರ್.ಪಾಟೀಲ ಮಾತನಾಡಿ, ‘ಕೃಷಿ ಇಲಾಖೆಯವರು ಮಳೆಯಿಂದ ಬೆಳೆಹಾನಿ ಪ್ರದೇಶದ ಬೆಳೆ ತಪ್ಪಾಗಿ ನಮೂದಿಸಿದ್ದು ಇದರಿಂದ ಅನೇಕ ರೃತರು ತಮ್ಮ ಬೆಳೆಗೆ ಬೆಳೆ ವಿಮೆ ಪಾವತಿ ಮಾಡಿದರೂ ಪರಿಹಾರ ಬರದಂತಾಗಿದೆ. ಇಲಾಖೆಯವರು ಇದನ್ನು ಸರಿಪಡಿಸಬೇಕು’ ಎಂದು ಕೃಷಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ಈಗಾಗಲೇ ಇಂಥ ಸಮಸ್ಯೆಗಳ 400 ತಕರಾರು ಅರ್ಜಿಗಳು ಬಂದಿದ್ದು, ಪರಿಶೀಲಿಸಲಾಗುವುದು ಎಂದು ಸಹಾಯಕ ಕೃಷಿ ಅಧಿಕಾರಿ ಭಾರತಿ ಮೆಣಸಿನಕಾಯಿ ಹೇಳಿದರು.

ಪಟ್ಟಣದ ಶಂಭುಲಿಂಗೇಶ್ವರ ಹತ್ತಿರದ ಸರ್ಕಾರಿ ಶಾಲೆಯಲ್ಲಿ ಕಲಿಕಾ ಗುಣಮಟ್ಟವೂ ಕಡಿಮೆಯಾಗುತ್ತಿದೆ. ಜತೆಗೆ ಮಕ್ಕಳ ಹಾಜರಾತಿ ಸಂಖ್ಯೆ ಏಕೆ ಕಡಿಮೆ ಆಗುತ್ತಿದೆ ಶಾಸಕರು ಬಿಇಒ ಅವರನ್ನು ಪ್ರಶ್ನಿಸಿದರು.

ತಹಶೀಲ್ದಾರ್ ರಾಜು ಮಾವರಕರ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಾನಂದ ಬೆಂತೂರ, ಕೆಡಿಪಿ ಸದಸ್ಯರು, ಅಧಿಕಾರಿಗಳು, ಪಿಡಿಒ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.