ಧಾರವಾಡ: ‘ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಮಸೂದೆ’ಯ ಕರಡನ್ನು ಮುಖ್ಯಮಂತ್ರಿಗಳಿಗೆ ಶೀಘ್ರವೇ ಸಲ್ಲಿಸಲಾಗುವುದು. ಆದರೆ ಈ ಮಸೂದೆಯ ಅನುಷ್ಠಾನ ಕುರಿತು ನನಗೂ ಅನುಮಾನಗಳಿವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.

ಕನ್ನಡ ಭಾಷಾ ಅನುಷ್ಠಾನ ಕುರಿತು ಶನಿವಾರ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅವರ ನೇತೃತ್ವದಲ್ಲಿ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಮಸೂದೆ-2022ರ ಕರಡನ್ನು ಸಿದ್ಧಪಡಿಸಲಾಗಿದೆ. ಇದು ಅನುಷ್ಠಾನಗೊಂಡಲ್ಲಿ ಸರೋಜಿನಿ ಮಹಿಷಿ ವರದಿಯೂ ಸೇರಿದಂತೆ ಕನ್ನಡ ಅನುಷ್ಠಾನಕ್ಕೆ ಕಾನೂನು ಬಲ ಸಿಗಲಿದೆ’ ಎಂದರು.

‘ಕನ್ನಡ ಉಳಿಸುವ ಕುರಿತು ಸರ್ಕಾರ ಉತ್ಸಾಹ ತೋರಿಸುತ್ತದೆ. ಆದರೆ ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳಿಂದ ಆ ಮಟ್ಟದ ಸಹಕಾರ ಸಿಗುತ್ತಿಲ್ಲ. ಹೀಗಾಗಿ ಯಾವುದೇ ಅಧಿವೇಶನದಲ್ಲಿ ಮಂಡನೆಯಾಗಬಹುದಾದ ಈ ಮಸೂದೆಯ ಸಮರ್ಪಕ ಜಾರಿ ಕುರಿತು ಸಂದೇಹಗಳಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.