ಧಾರವಾಡ: ನಾಡೋಜ ಮತ್ತು ಪಂಪ ಪ್ರಶಸ್ತಿಗಳಲ್ಲೇ ಎರಡು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್‌ಗಳಿಗೆ ಭಾಜನರಾದ, ಕವಿ ಕಣವಿಯವರು ಸರಳ, ಸಜ್ಜನಿಕೆಯ ಮೃದು ಹೃದಯದ ಶ್ರೇಷ್ಠ ಕವಿ.

ವಿಜಯಪುರದ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಡಾ. ಕಣವಿ ಅವರನ್ನು ಹೋಲಿಸಿ ಮಾತನಾಡಿರುವುದನ್ನು ಕೇಳಿದ್ದೇನೆ. 28 ಜೂನ್ 1928ರಲ್ಲಿ ಜನಿಸಿದ ಕಣವಿ ಅವರು 75ನೇ ವರ್ಷ, 80ನೇ ವರ್ಷ ಹಾಗೂ 85ನೇ ವರ್ಷದ ಹುಟ್ಟುಹಬ್ಬ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಚರಿಸಿದಾಗ ಡಾ. ಗುರುಲಿಂಗ ಕಾಪಸೆ ಅವರೊಂದಿಗೆ ಸಿದ್ದೇಶ್ವರ ಸ್ವಾಮೀಜಿ ಅವರೂ ಹಾಜರಿದ್ದರು.

ಆಗ ಕಣವಿ ಅವರನ್ನು ಹೂವಿಗೆ ಹೋಲಿಸಿದ್ದನ್ನು ಇಲ್ಲಿ ಸ್ಮರಿಸುವೆನು. ಕಣವಿ ಅವರ ಕವಿ ಹೃದಯ ಹೂವಿನಂತೆ ಸೂಕ್ಷ್ಮ. ಹೂವಿನಷ್ಟು ಮೃದು, ಅವರ ಹೃದಯ ಸಮೀಪದ ಜೇಬಿನಲ್ಲಿ ಗುಲಾಬಿ ಹೂವು ಒಂದನ್ನು ಇಟ್ಟಿದ್ದರು. ನಂತರ ಅವರು ಹೇಳಿದ್ದನ್ನು ಕೇಳಲೇಬೇಕು.

ಹೂವಿನ ದೇಟಿಗೆ ಇರುವ ಮುಳ್ಳಿನಷ್ಟೇ ಅವರು ಕಠಿಣ ಸ್ವಭಾವದವರು ಎಂದಿದ್ದರು. ಎಂದಿಗೂ ಅನ್ಯಾಯಗಾವುದನ್ನು ಸಹಿಸದ ಕಣವಿ ಅವರು ತಮ್ಮ ಹೋರಾಟಗಳಲ್ಲಿ ಎಂದಿಗೂ ಹಿಂದೆ ಸರಿಯದೇ ಯಶಸ್ಸುಗಳಿಸಿರುವರು. ಕನ್ನಡ ನಾಡು, ನುಡಿ, ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಶ್ರಮಿಸಿದವರು ಕಣವಿಯವರು. ಗೋಕಾಕ್ ಚಳವಳಿ ಯಶಸ್ಸಿಗೆ ಇವರು ಕಾರಣವೆಂದಿರುವರು. ಬೆಳಗಾವಿಯಲ್ಲಾದ ವಿಶ್ವ ಕನ್ನಡ ಸಮ್ಮಳೇನದಲ್ಲಿಯ ಇವರ ಭಾಷಣ ಮರಾಠಿಗರನ್ನು ಹಿಮ್ಮೆಟ್ಟಿಸಿತ್ತು.

ಕಲ್ಯಾಣನಗರ ನಿವಾಸಿ ಕಣವಿ ಅವರು ಸುತ್ತಲಿನ ವಾತಾವರಣವನ್ನು ಶುದ್ಧ, ಸ್ವಚ್ಛವಾಗಿಟ್ಟವರು. ವಾರ್ಡ್‌ಗೆ ಶಿವು ಹಿರೇಮಠ ಸದಸ್ಯರಾಗಿ ಆಯ್ಕೆಯಾಗಿ ಭೇಟಿ ಮಾಡಿದಾಗ, ಆಶೀರ್ವದಿಸಿ ನಂತರ ವಾರ್ಡ್‌ನಲ್ಲಿ ಉತ್ತಮೋತ್ತಮ ಉದ್ಯಾನಗಳು ನಿರ್ಮಾಣವಾಗುವ ಅವಶ್ಯಕತೆ ತಿಳಿಸಿದ್ದರು. ಅಷ್ಟಕ್ಕೇ ಬಿಡದೆ ಕಲ್ಯಾನಗರದ ಸಮಸ್ಯೆಗಳೊಂದಿಗೆ ಆಯುಕ್ತ ಪಿ.ಮಣಿವಣ್ಣನ್ ಅವರನ್ನೂ ಕಂಡು ಉದ್ಯಾನಗಳನ್ನು ನಿರ್ಮಿಸಿದರು ಎಂದು ಶಿವು ಹಿರೇಮಠ ಅವರೇ ಬಣ್ಣಿಸಿದರು.

ಕಲ್ಯಾಣಗರದ ಕ.ಕಾ.ಕು. (ಕಲಬುರ್ಗಿ, ಕನವಳ್ಳಿ, ಕಾಪಸೆ) ಶ್ರೇಷ್ಠ ಸಾಹಿತಿಗಳನ್ನು ಪ್ರೋತ್ಸಾಹಿಸಿ ತಾವೂ ಒಬ್ಬ ಕಕಾ ಬಳ್ಳಿ ಸದಸ್ಯರೇ ಎಂದಿರುವರು.

ಇತ್ತೀಚಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಕಾಪಸೆ ಅವರು ಕಣವಿ ಅವರ ಗರಡಿಯಲ್ಲೇ ಪಳಗಿದವರು. 1978ರಲ್ಲಿ ಹಲಸಂಗಿಯಲ್ಲಿ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯದ ವಿಸ್ತರಣ ವ್ಯಾಸಂಗ ಉಪನ್ಯಾಸದಲ್ಲಿ ಕನ್ನಡ ಶಾಲಾ ಮಾಸ್ತರರಾಗಿ 22 ವರ್ಷ ಸೇವೆಯಲ್ಲಿದ್ದ ಕಾಪಸೆ ಅವರು ವಿದ್ವತ್ ಅನ್ನು ಮೆಚ್ಚಿನದ ಕಣವಿ ಅವರು, ಅವರನ್ನೂ ಹಲಸಂಗಿಯಿಂದ ಧಾರವಾಡಕ್ಕೆ ಕರೆತಂದರು. ಬಿ.ಎ. ಹಾಗೂ ಎಂ.ಎ. ಪದವಿ ಪೂರೈಸಲು ಸಹಕರಿಸಿದ್ದ ಪರಿಣಾಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಪಿಎಚ್‌ಡಿ ಪೂರೈಸಿದರು.

ಹಿರಿಯ ಸಾಹಿತಿಗಳಾಗಿ ಕಣವಿ ಅವರು ಸೋದರರಾಗಿದ್ದರು. ಇದು ಡಾ. ಚೆನ್ನವೀರ ಕಣವಿ ಅವರ ಮಾನವೀಯತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.