ಚಾಕಲಬ್ಬಿ (ಗುಡಗೇರಿ): ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಕುಂದಗೋಳ ತಾಲ್ಲೂಕಿನ ಚಾಕಲಬ್ಬಿ ವ್ಯಾಪ್ತಿಯಲ್ಲಿ ಬೆಳೆದ ಬೆಳೆ ಹಾನಿಯಾದ ಹತ್ತಿ, ಮೆಣಸಿನಕಾಯಿ, ಶೇಂಗಾ, ಈರುಳ್ಳಿ ಬೆಳೆಗಳನ್ನು ಗ್ರಾಮ ಲೆಕ್ಕಾಧಿಕಾರಿ ಕೆ.ಎನ್.ಸಿದ್ಧೇಶ ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಮಂಜುನಾಥ ಜಂಗಣ್ಣವರ ಮತ್ತು ತೋಟಗಾರಿಕೆ ಇಲಾಖೆ ಸಹಾಯಕಿ ಅಧಿಕಾರಿ ನೀಲಮ್ಮ ಮಲ್ಲಿಗವಾಡ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಚಾಕಲಬ್ಬಿ ಗ್ರಾಮದ ರತ್ನ ಭಾರತ ರೈತ ಸಂಘದ ಅಧ್ಯಕ್ಷ ವಿರೂಪಾಕ್ಷ ಗಣಿ ಮಾತನಾಡಿ, ‘ರೈತರು ಕಡಲೆ ಬಿತ್ತನೆ ಮಾಡಿದ ಬೀಜ ಭೂಮಿಯಲ್ಲೇ ಮೊಳಕೆ ಒಡೆದು ಅಲ್ಲೆ ಕಮರಿ ಹೋಗಿದೆ ಇದರಿಂದ ರೈತರಿಗೆ ಹಾನಿಯಾಗಿದ್ದು ಪರಿಹಾರ ನೀಡಬೇಕು’ ಎಂದು ಹೇಳಿದರು.

‘ಮಳೆಯಿಂದ ಹಳ್ಳದ ಹತ್ತಿರದ ಅಲ್ಲದೇ ಎಲ್ಲ ಭಾಗದಲ್ಲಿ ಬೆಳೆ ಹಾನಿಯಾಗಿದೆ, ಪರಿಹಾರ ಮತ್ತು ಬೆಳೆ ವಿಮೆ ನೀಡಬೇಕು, ಬೆಳೆ ಪರಿಹಾರ ನೀಡುವಲ್ಲಿ ಯಾವುದೇ ತಾರತಮ್ಯ ಮಾಡದೆ ಆದಷ್ಟು ಬೇಗನೆ ಪರಿಹಾರ ಒದಗಿಸಬೇಕು ಎಂದು ಅಗ್ರಹಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ವಿಠ್ಠಲ್ ಘಾಟಗೆ, ಗುರುನಾಥ ಹೊನ್ನಿಹಳ್ಳಿ, ರೈತ ಮುಖಂಡ ಯಲ್ಲಪ್ಪ ಬಾರಕೇರ, ಕೃಷ್ಣ್ನಗೌಡ ಪಾಟೀಲ, ಸುರೇಶ ಇಟಗಿ, ಯಲ್ಲಪ್ಪ ಗಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.