ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಭಸವಾಗಿ ಹರಿಯುತ್ತಿರುವ ಬೆಣ್ಣೆಹಳ್ಳದಲ್ಲಿ ಸಿಲುಕಿದ ರೈತ: ರಕ್ಷಣೆಗೆ ಕಾರ್ಯಾಚರಣೆ

Published : 12 ಅಕ್ಟೋಬರ್ 2024, 8:19 IST
Last Updated : 12 ಅಕ್ಟೋಬರ್ 2024, 8:19 IST
ಫಾಲೋ ಮಾಡಿ
Comments

ನವಲಗುಂದ (ಧಾರವಾಡ ಜಿಲ್ಲೆ): ತಾಲ್ಲೂಕಿನ ಕಾಲವಾಡದ ಸಮೀಪ ಬೆಣ್ಣೆಹಳ್ಳದ ಪಕ್ಕದ ದೇಗುಲದ ಆವರಣದಲ್ಲಿ ರೈತ ಲಕ್ಷ್ಮಣ ಹಣಮಂತಪ್ಪ ಬಾರಕೇರ ಸಿಲುಕಿಕೊಂಡಿದ್ಧಾರೆ. ಹಳ್ಳ ರಭಸವಾಗಿ ಹರಿಯುತ್ತಿದ್ದು ರೈತನ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ.

ಲಕ್ಷ್ಮಣ ಅವರು ಹೊಲದ ಬದಿಯ ಕಲ್ಯಾಣ ಬಸವೇಶ್ವರ ದೇವಸ್ಥಾನದ ಕಟ್ಟೆ ಏರಿ ಕುಳಿತಿದ್ಧಾರೆ. ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

‘ನೀರಿನ ರಭಸ ಜಾಸ್ತಿ ಇರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ಹಗ್ಗ ಬಳಸಿ, ಅಥವಾ ಈಜು ಪರಿಣತರ ನೆರವಿನಲ್ಲಿ ರೈತನನ್ನು ಹಳ್ಳ ದಾಟಿಸಲು ಸಿದ್ಧತೆ ನಡೆಸಿದ್ಧೇವೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಬರಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರು ದಿನಗಳಿಂದ ಸುರಿದ ಬಾರಿ ಮಳೆಗೆ ತಾಲೂಕಿನಾದ್ಯಂತ ಬೆಣ್ಣೆಹಳ್ಳ, ತುಪ್ಪರಿಹಳ್ಳ ಸಹಿತ ವಿವಿಧ ಹಳ್ಳಗಳು ಭಾರಿ ರಭಸವಾಗಿ ಹರಿಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT