ಕುಂದಗೋಳ: ಮೊಬೈಲ್ ಫೋನ್‌ಗೆ ಯಾವುದೇ ಮೆಸೆಜ್ ಬಂದಿಲ್ಲ; ಒಟಿಪಿ ಕೇಳಿಲ್ಲ. ಆದರೂ ತಾಲ್ಲೂಕಿನ ಯರಿನಾರಾಯಣಪುರ ಗ್ರಾಮದ ಮಹಿಳೆ ಮಲ್ಲವ್ವ ಅಶೋಕ ಮುಳ್ಳಹಳ್ಳಿ ಅವರ ಯರಗುಪ್ಪಿ ಗ್ರಾಮದ ಕೆ.ವಿ.ಜಿ ಬ್ಯಾಂಕಿನ ಖಾತೆಯಲ್ಲಿದ್ದ ₹64 ಸಾವಿರ ಹಣ ಅವರ ಗಮನಕ್ಕೆ ಬರದೆ ಆನ್‍ಲೈನ್‍ನಲ್ಲಿ ವರ್ಗಾವಣೆಯಾಗಿದೆ. ಈ ಕುರಿತು ಕುಂದಗೋಳದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜಾಗೆ ಖರೀದಿಗೆ ಸಂಬಂಧಿಸಿದಂತೆ ಕುಂದಗೋಳದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಹೆಬ್ಬೆರಳು ಗುರುತು ನೀಡಿದ ಮೇಲೆ ಮತ್ತೆಲ್ಲೂ ಹೆಬ್ಬೆರಳ ಗುರುತು ನೀಡಿಲ್ಲ. ಯಾವುದೇ ಸಂಶಯಸ್ಪಾದ ಕರೆಗಳೂ ಬಂದಿಲ್ಲ. ಒಟಿಪಿ ಕೇಳಿ ಕರೆಗಳೂ ಸಹಿತ ಬಂದಿಲ್ಲ’ ಎನ್ನುತ್ತಾರೆ ಮಲ್ಲವ್ವ.

ಸಂತ್ರಸ್ತ ಮಹಿಳೆಯ ಖಾತೆಯಿಂದ ಅ.24 ರಿಂದ ನ. 3ರವರೆಗೆ ಒಟ್ಟು ಏಳು ಬಾರಿ ಹಣ ವರ್ಗಾವಣೆಯಾಗಿದೆ. ಹಣ ವರ್ಗಾವಣೆ ಆಗಿರುವ ಯಾವುದೇ ಸಂದೇಶ ಬ್ಯಾಂಕಿನಿಂದ ಬಂದಿಲ್ಲ. ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆದ ಸಂದೇಶ ಮಾತ್ರ ಬಂದಿದೆ. ಈ ಹಣವನ್ನು ಪಡೆಯಲು ಬ್ಯಾಂಕಿಗೆ ಹೋದಾಗಲೇ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇವರಿಗೆ ಜಾಗ ಮಾರಿದ ಬಸವರಾಜ ಹೊರಟ್ಟಿ ಎಂಬುವವರ ಖಾತೆಯಿಂದಲೂ ₹1,500 ಹಣ ವರ್ಗಾವಣೆ ಆಗಿದ್ದು ಇವರಿಗೂ ಯಾವುದೇ ತರಹದ ಮೇಸೆಜ್ ಬಂದಿಲ್ಲ. ಇಬ್ಬರ ಖಾತೆಯಿಂದ ವರ್ಗಾವಣೆ ಆಗಿದೆ.

ಮಲ್ಲವ್ವ ಹಾಗೂ ಅವರ ಪತಿ ಅಶೋಕ ಬ್ಯಾಂಕ್‍ಗೆ ಹೋಗಿ ವಿಚಾರಿಸಿದಾಗ, ‘ಈ ವಿಷಯ ಎಲ್ಲಿಯೂ ಹೇಳಬೇಡಿ, ನಿಮ್ಮ ಹಣ ನಿಮ್ಮ ಖಾತೆಗೆ ಬರುತ್ತದೆ’ ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದರು. ಕಷ್ಟಪಟ್ಟು ದುಡಿದ ಹಣ ಕಳೆದುಕೊಂಡು ಬದುಕು ದಿಕ್ಕು ತಪ್ಪಿದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸುಣ್ಣದ ಕಲ್ಲಿನ ವ್ಯಾಪಾರ, ಕೂಲಿ ಮಾಡಿ ಸಂಗ್ರಹಿಸಿದ ಹಣ ಈಗ ನಮ್ಮ ಖಾತೆಯಲ್ಲಿ ಇಲ್ಲ ಎನ್ನುವುದನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಎಂದು ಮಲ್ಲವ್ವ ಮುಳ್ಳಹಳ್ಳಿ ಅಲವತ್ತುಕೊಂಡರು.

ತ್ವರಿತ ಗತಿಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಆದಷ್ಟು ಬೇಗ ಸಂತ್ರಸ್ತರಿಗೆ ನ್ಯಾಯ ಸಿಗಲಿದೆ
ಶಿವಾನಂದ ಅಂಬಿಗೇರ ಕುಂದಗೋಳ ಸಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.