ಹುಬ್ಬಳ್ಳಿ: ‘ಮಾತೆತ್ತಿದ್ದರೆ ಕುಟುಂಬ ರಾಜಕಾರಣ ಎನ್ನುತ್ತಿದ್ದ ಬಿಜೆಪಿ, ಈಗ ತಾನೇ ಕುಟುಂಬ ರಾಜಕಾರಣ ನಡೆಸಿದೆ’ ಎಂದು ಸಚಿವ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.

‘ಕುಟುಂಬ ರಾಜಕಾರಣವೆಂದು ಇಂದಿರಾ ಗಾಂಧಿ ಕುಟುಂಬದ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದರು. ಈಗ ಅವರಲ್ಲೇ ಐದಾರು ಕುಟುಂಬಗಳು ರಾಜಕಾರಣ ಮಾಡುತ್ತಿವೆ. ರಾಜಕೀಯದಲ್ಲಿ ಇದು ಸ್ವಾಭಾವಿಕ. ಏನು ಮಾಡಲು ಸಾಧ್ಯವಿಲ್ಲ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಕುಟುಂಬ ರಾಜಕಾರಣವಲ್ಲ: ‘ಯಾವುದೇ ಚುನಾವಣೆಯಾದರೂ ಗೆಲ್ಲುವುದೇ ಮಾನದಂಡ. ಕ್ಷೇತ್ರ ಸಮೀಕ್ಷೆ, ಜನರ ಅಭಿಪ್ರಾಯ ಮತ್ತು ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ ಟಿಕೆಟ್ ನೀಡಬೇಕು. ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಜನರ ಅಭಿಪ್ರಾಯದಂತೆ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಇರಲ್ಲಿ ಕುಟುಂಬ ರಾಜಕಾರಣ ಇಲ್ಲ’ ಎಂದು ಗೋವಿಂದ ಕಾರಜೋಳ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.