ಮುಂಡರಗಿ: ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ಮಂಗಳವಾರ ಸಂಜೆ ನದಿಯಲ್ಲಿ ಮುಳುಗಿದ್ದ ತಾಲ್ಲೂಕಿನ ಮಕ್ತುಂಪುರ ಗ್ರಾಮದ ನಾಲ್ವರ ಮೃತ ದೇಹಗಳು ಪತ್ತೆಯಾಗಿದ್ದು ಗುರುವಾರ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಯಿತು.

ಬಾಲಕ ವೇದಾಂತ್ ಮೃತ ದೇಹ ಬುಧವಾರ ಸಂಜೆ ಪತ್ತೆಯಾಗಿತ್ತು. ಮಕ್ಕಳನ್ನು ನದಿಗೆ ತಳ್ಳಿ ತಾನೂ ನದಿಗೆ ಹಾರಿದ್ದ ಮಂಜುನಾಥ ಅರಕೇರಿ, ಅವರ ಮಕ್ಕಳಾದ ಧನ್ಯಾ ಹಾಗೂ ಪವನ್ ಅವರ ಮೃತದೇಹಗಳು ಗುರುವಾರ ಪತ್ತೆಯಾದವು. ಪಟ್ಟಣದ ಅಗ್ನಿ ಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳೀಯ ಮೀನುಗಾರರ ನೆರವಿನಿಂದ ಎರಡು ದಿನ ಶೋಧ ಕಾರ್ಯ ನಡೆಸಿದರು.

ಎಲ್ಲ ಮೃತ ದೇಹಗಳನ್ನು ಮುಂಡರಗಿ ಸಾರ್ವಜನಿಕ ಆಸ್ಪತ್ರೆಗೆ ತಂದು ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮೃತ ದೇಹಗಳು ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮಕ್ಕಳ ಮೃತದೇಹ ಕಂಡು ಗ್ರಾಮಸ್ಥರು ಮಮ್ಮಲ ಮರುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.