ಮುಂಡರಗಿ | ನೆಲಕಚ್ಚಿದ ನಾಟಕ ಮಂದಿರ: ನೆರವಿನ ನಿರೀಕ್ಷೆಯಲ್ಲಿ ಕಲಾವಿದರು
₹10 ಲಕ್ಷ ಹಾನಿಯ ಅಂದಾಜು; ಪ್ರದರ್ಶನಗಳು ರದ್ದು– ಕಲಾವಿದರಿಗೆಲ್ಲಾ ರಜೆ
ಕಾಶೀನಾಥ ಬಿಳಿಮಗ್ಗದ
Published : 21 ಅಕ್ಟೋಬರ್ 2024, 6:06 IST
Last Updated : 21 ಅಕ್ಟೋಬರ್ 2024, 6:06 IST
ಫಾಲೋ ಮಾಡಿ
Comments
ಧರೆಗುರುಳಿರುವ ನಾಟಕ ಮಂದಿರದ ಮುಂದೆ ಪಳೆಯುಳಿಕೆಯಂತೆ ಸ್ಥಿರವಾಗಿ ನಿಂತಿರುವ ನಾಟಕ ಮಂದಿರದ ಮುಖ್ಯದ್ವಾರ
ನೆಲಕ್ಕುರುಳಿರುವ ನಾಟಕ ಮಂದಿರದ ಅವಶೇಷಗಳನ್ನು ತೆರವುಗೊಳಿಸುತ್ತಿರುವ ಕಾರ್ಮಿಕರು
ತಪ್ಪಿದ ಭಾರಿ ಅನಾಹುತ
ಗಣೇಶ ಚತುರ್ಥಿ ದಸರಾ ಮೊದಲಾದ ಹಬ್ಬಗಳ ಪ್ರಯುಕ್ತ ನಾಟಕ ಕಂಪನಿಯ ಜನಪ್ರಿಯ ಕಲಾವಿದರು ನಾಡಿನ ವಿವಿಧ ಭಾಗಗಳಲ್ಲಿ ಕಾರ್ಯಕ್ರಮ ನೀಡಲು ಬೇರೆಡೆಗೆ ತೆರಳಿದ್ದರು. ಹೀಗಾಗಿ ಕೆಲವು ದಿನಗಳಿಂದ ನಾಟಕ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಎಲ್ಲ ಕಲಾವಿದರಿಗೆ ರಜೆ ನೀಡಲಾಗಿತ್ತು. ಒಂದು ವೇಳೆ ನಾಟಕ ಪ್ರದರ್ಶನಗೊಳ್ಳುವ ಸಂದರ್ಭದಲ್ಲಿ ನಾಟಕ ಮಂದಿರ ಧರೆಗುರುಳಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ನಾಟಕ ಪ್ರದರ್ಶನವಿಲ್ಲದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಯಿತು ಎಂದು ಕಂಪನಿಯ ಮಾಲೀಕ ಮಂಜುನಾಥ ಜಾಲಿಹಾಳ ತಿಳಿಸಿದರು.
ಖರ್ಚು ನಿಭಾಯಿಸುವುದೇ ಕಷ್ಟ
‘ನಾಟಕ ಕಂಪನಿಗಳು ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಎಲ್ಲ ಸಮಸ್ಯೆಗಳನ್ನು ಎದುರಿಸಿ ನಾಟಕ ಕಂಪನಿಯನ್ನು ಮುನ್ನಡೆಸುವುದು ಇಂದು ಸವಾಲಿನ ಕೆಲಸವಾಗಿದೆ’ ಎನ್ನುತ್ತಾರೆ ಕಂಪನಿಯ ಮಾಲೀಕ ಮಂಜುನಾಥ ಜಾಲಿಹಾಳ. ಕಲಾವಿದರ ವೇತನ ನಾಟಕ ಮಂದಿರದ ನಿರ್ವಹಣೆ ಪ್ರಚಾರ ಮೊದಲಾದವುಗಳಿಗೆ ನಿತ್ಯ ಹಣ ಹೊಂದಿಸಬೇಕಾಗುತ್ತದೆ. ಕಲಾವಿದರಿಗೆ ಹಾಗೂ ಸಿಬ್ಬಂದಿಗೆ ಯಾವ ಕೊರತೆಯೂ ಉಂಟಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ನಿತ್ಯ ಎರಡು ಪ್ರದರ್ಶನಗಳನ್ನು ಏರ್ಪಡಿಸಿದರೂ ನಿರೀಕ್ಷಿತ ಆದಾಯ ದೊರೆಯುವುದಿಲ್ಲ. ಬರುವ ಆದಾಯವು ಕಂಪನಿಯ ನಿರ್ವಹಣೆಗೆ ಸಾಕಾಗುತ್ತಿದ್ದು ನಾಟಕಗಳಿಂದ ಲಾಭ ನಿರೀಕ್ಷಿಸುವುದು ಕಷ್ಟಸಾಧ್ಯ. ನಾಟಕ ಪ್ರದರ್ಶನಗಳಿಂದ ಬರುವ ಆದಾಯಕ್ಕೂ ನಾಟಕದ ಖರ್ಚು ವೆಚ್ಚಕ್ಕೂ ಸರಿಯಾಗುತ್ತಿದ್ದು ಎಲ್ಲರಿಗೂ ಎರಡು ಹೊತ್ತು ಊಟ ದೊರೆಯುತ್ತದೆ ಎನ್ನುವ ಸಮಾಧಾನಕ್ಕಾಗಿ ನಾಟಕ ಕಂಪನಿಯನ್ನು ನಡೆಸಬೇಕಾಗಿದೆ ಎಂದು ಹೇಳಿದರು.
ದೀಪಾವಳಿಗೆ ಪುನರಾರಂಭ?
ನಾಟಕ ಮಂದಿರ ಬಿದ್ದೊಡನೆ ಪಟ್ಟಣದ ಕಲಾ ಪೋಷಕರು ಅಭಿಮಾನಿಗಳು ಹಾಗೂ ಪ್ರೇಕ್ಷಕರು ನೀಡಿದ ಭರವಸೆಯು ಮಾಲೀಕ ಮಂಜುನಾಥ ಜಾಲಿಹಾಳ ಅವರಲ್ಲಿ ಧೈರ್ಯ ಮೂಡಿಸಿದೆ. ಇಲ್ಲಿಯ ಕಲಾಭಿಮಾನಿಗಳು ಕಲಾವಿದರನ್ನು ಕೈಬಿಡುವುದಿಲ್ಲ ಎನ್ನುವ ನಂಬಿಕೆಯ ಮೇಲೆ ಮುರಿದು ಬಿದ್ದಿರುವ ನಾಟಕ ಮಂದಿರದ ಪುನರ್ ನಿರ್ಮಾಣಕ್ಕೆ ಕೈಹಾಕಿದ್ದಾರೆ. ನಾಟಕ ಮಂದಿರವನ್ನು ಪುನರ್ ನಿರ್ಮಿಸುವ ಸಲುವಾಗಿ ಕಡಕೋಳ ಗ್ರಾಮದ ನುರಿತ ಕಾರ್ಮಿಕರನ್ನು ಕರೆಯಿಸಿದ್ದಾರೆ. ಸುಮಾರು 15 ಜನ ಕಾರ್ಮಿಕರು ಮಂದಿರದ ಪುನರ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು ಸದ್ಯದಲ್ಲಿಯೇ ನಾಟಕ ಮಂದಿರ ಪಟ್ಟಣದಲ್ಲಿ ಪುನಃ ತಲೆ ಎತ್ತಲಿದೆ. ದೀಪಾವಳಿ ಪಾಡ್ಯದಂದು ‘ಸಂದಿಮನಿ ಸಂಗವ್ವ’ ನಾಟಕದ ಮೂಲಕ ನಾಟಕ ಕಂಪನಿಯು ಪುನರಾರಂಭಗೊಳ್ಳಲಿದೆ.