ಅಂಗಾಂಗಗಳಿಗೆ ಕಾದಿರುವ ರೋಗಿಗಳು ಮತ್ತು ದಾನಿಗಳ ಸಂಖ್ಯೆ ತುಲನೆ ಮಾಡಿದರೆ ಅಜಗಜಾಂತರ ಇದೆ. ಇವೆರಡರ ನಡುವಿನ ಅಂತರ ಕಡಿಮೆ ಆಗಬೇಕಿದೆ. ಅನಸ್ತೇಷಿಯಾ ಸರ್ಜನ್ ಯೂರಾಲಜಿಸ್ಟ್ ನೆಫ್ರಾಲಜಿಸ್ಟ್ ವೈದ್ಯರ ತಂಡ ಸಿದ್ಧವಾದರೆ ಕಡಿಮೆ ಖರ್ಚಿನಲ್ಲಿ ಅಂಗಾಂಗ ಕಸಿ ಸೌಲಭ್ಯ ಸಿಗಲಿದೆ
-ಡಾ. ಬಸವರಾಜ ಬೊಮ್ಮನಹಳ್ಳಿ ಜಿಮ್ಸ್ ನಿರ್ದೇಶಕ
ಅಂಗಾಂಗ ದಾನ ಮತ್ತು ನಿರೀಕ್ಷೆಯಲ್ಲಿರುವ ರೋಗಿಗಳ ನಡುವಿನ ಅಂತರ ಕಡಿಮೆ ಮಾಡುವಲ್ಲಿ ಮಹತ್ವದ ಮೊದಲ ಹೆಜ್ಜೆ ಎಂದರೆ ಸಾರ್ವಜನಿಕರಲ್ಲಿ ಅರಿವು ಮತ್ತು ಶಿಕ್ಷಣ ಹೆಚ್ಚಿಸುವುದು. ಶಾಲೆಗಳಲ್ಲಿನ ಜಾಗೃತಿ ಕಾರ್ಯಕ್ರಮಗಳು ಅಂತರ ಬದಲಾಯಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ