ಹಲವು ನಕಾರಾತ್ಮಕ ಕಾರಣಗಳಿಂದಲೇ ಹಾಸನ ಜಿಲ್ಲೆ ಸದ್ಯ ಸುದ್ದಿಯಲ್ಲಿದೆ. ಇಂತಹ ಸುದ್ದಿಗಳ ನಡುವೆಯೂ, ಹಾಸನದಲ್ಲಿ ಹಲವು ವ್ಯಕ್ತಿಗಳು ಸಮಾಜದಲ್ಲಿ ಧನಾತ್ಮಕ ಪರಿಣಾಮ ಬೀರುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಎಲೆಮರೆಯ ಕಾಯಿಗಳಂತೆ ಕೆಲಸ ಮಾಡುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಸಂತೋಷ್ ದಿಂಡಗೂರು.

ಸ್ವಂತ ಊರಿನಲ್ಲಿ ಅಸ್ಪೃಶ್ಯತೆಗೆ ಬಲಿಪಶುವಾಗಿದ್ದ ಸಂತೋಷ್, ಇದನ್ನು ವಿರೋಧಿಸಿ ನಡೆಸಿದ ಹೋರಾಟ 2021ರಲ್ಲಿ ಪ್ರಮುಖ ಸುದ್ದಿಯಾಗಿತ್ತು. ತಮ್ಮ ಜೀವನದುದ್ದಕ್ಕೂ ಜಾತಿ ತಾರತಮ್ಯವನ್ನು ಅನುಭವಿಸಿದ ಸಂತೋಷ್, ಅದರ ವಿರುದ್ಧ ಹೋರಾಡುತ್ತಲೇ ಸಾಂಸ್ಕೃತಿಕವಾಗಿ ತಮ್ಮನ್ನು ಸಬಲರನ್ನಾಗಿ ಮಾಡಿಕೊಂಡರು. ದಲಿತರು ಆರ್ಥಿಕವಾಗಿ ಸಬಲರಾದರೆ ಬಹುತೇಕ ಕಷ್ಟಗಳು ನೀಗುತ್ತವೆ ಎಂಬ ಕಾರಣದಿಂದ, ಕಲಾ ಪ್ರದರ್ಶನದಲ್ಲಿ ಬದುಕು ಕಟ್ಟಿಕೊಳ್ಳುತ್ತಾ, ತಮ್ಮ ಸಮುದಾಯವನ್ನೂ ಸಬಲರನ್ನಾಗಿ ಮಾಡಿದರು. ಅವರ ಬದುಕಿನ ಸ್ಫೂರ್ತಿದಾಯಕ ಪಯಣ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.