ಅಸ್ಪೃಶ್ಯ ಪದ ಬಳಕೆ: ಎಚ್‌ಡಿಕೆ ವಿರುದ್ಧ ದೂರು, ಸಾಮಾಜಿಕ ಮಾಧ್ಯಮದಲ್ಲೂ ಟೀಕೆ
ಪ್ರಜಾವಾಣಿ ವಾರ್ತೆ
ದೊಡ್ಡಬಳ್ಳಾಪುರ: ‘ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ನಮ್ಮ ಪಕ್ಷದ ಸಿ.ಎಂ. ಇಬ್ರಾಹಿಂ ಏಕೆ ಮುಖ್ಯಮಂತ್ರಿ ಆಗಬಾರದು. ಅವರೇನು ಅಸ್ಪೃಶ್ಯರೆ’ ಎಂದು ಪ್ರಶ್ನಿಸಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಛಲವಾದಿ ಮಹಾಸಭಾ ಮಂಗಳವಾರ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದೆ.
‘ಅಸ್ಪೃಶ್ಯತೆ ಶಬ್ದ ಬಳಸುವ ಮೂಲಕ ಕುಮಾರಸ್ವಾಮಿ ಅವರು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳಿಗೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ
ಎಸ್.ಸಿ/ಎಸ್.ಟಿ ವಿರುದ್ಧದ ದೌರ್ಜನ್ಯ
ತಡೆ ಕಾಯ್ದೆ ಅಡಿ ದೂರು ದಾಖಲಿಸಿ
ಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮಹಾಸಭಾ ದೂರಿನಲ್ಲಿ ಹೇಳಿದೆ.Last Updated 29 ನವೆಂಬರ್ 2022, 19:58 IST