ಶ್ರವಣಬೆಳಗೊಳ: ‘ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಸರ್ಕಾರದಿಂದ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು’ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಗುರುವಾರ ಸರ್ಕಾರಕ್ಕೆ ಒತ್ತಾಯಿಸಿದರು.

ಹೋಬಳಿ ದಮ್ಮನಿಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿ ಆಲದಹಳ್ಳಿಯಲ್ಲಿ ಏರ್ಪಡಿಸಿದ್ದ ನೂತನ ಡೈರಿ ಕಟ್ಟಡ ಮತ್ತು ಶ್ರೀರಾಮಾಂನಜನೇಯ ಸ್ವಾಮಿ ದೇವಸ್ಥಾನದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

‘ನೂತನ ಡೈರಿ ಕಟ್ಟಡಕ್ಕೆ ಹಾಸನ ಡೈರಿ ಮತ್ತು ಕೆಎಂಎಫ್ ಉಚಿತವಾಗಿ ₹8 ಲಕ್ಷ ಅನುದಾನ ಒದಗಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದಲೂ ₹2 ಲಕ್ಷ ಅನುದಾನ ಬರಲಿದೆ’ ಎಂದರು.

ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೆ ₹5 ಲಕ್ಷ ಅನುದಾನ ಒದಗಿಸಲಾಗುವುದು. ಈಗಾಗಲೇ ಶಾಲಾ ಕಟ್ಟಡ ಮತ್ತು ರಂಗ ಮಂಟಪದ ಕಾಮಗಾರಿಗಳು ನಡೆದಿವೆ. ರೈತರು ಜಾನುವಾರುಗಳಿಗೆ ಸುರಕ್ಷತೆಯ ದೃಷ್ಟಿಯಿಂದ ವಿಮೆ ಮಾಡಿಸಿ’ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಪುಷ್ಪಾ ರಾಮಕೃಷ್ಣ, ಬಲರಾಂ, ನಿರ್ದೇಶಕರುಗಳಾದ ಹರೀಶ್, ನಾಗೇಂದ್ರ, ಮಂಜೇಗೌಡ, ಕುಮಾರ, ಸುಬ್ರಹ್ಮಣ್ಯ, ರಾಮಕೃಷ್ಣ, ಅನಂತಕುಮಾರ, ನಾಗರತ್ನ, ಮಂಗಳಾ, ಮುಖಂಡರಾದ ರವಿ, ಹರೀಶ್, ಅಶ್ವತ್, ನಾಗೇಂದ್ರ, ದೇವರಾಜ್, ಕಾರ್ಯದರ್ಶಿ ಶಿವರಾಂ, ಹಾಗು ಶ್ರೀರಾಮಾಂಜನೇಯ ಟ್ರಸ್ಟಿನ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.