ಹೊಳೆನರಸೀಪುರ: ಪಟ್ಟಣದ ಹೃದಯ ಭಾಗ ಚಿಟ್ಟನಹಳ್ಳಿ ರಸ್ತೆಯಿಂದ ಮಲ್ಲಪ್ಪನಹಳ್ಳಿ ಮಾರ್ಗವಾಗಿ ಹಾದು ಹೋಗಿರುವ ಹೇಮಾವತಿ ನಾಲೆಯ ಡೆಕ್ನ ತೊಟ್ಟಿ ಹಾಗೂ ತಡೆಗೋಡೆ ಶಿಥಿಲಗೊಂಡು ಬೀಳುವ ಹಂತದಲ್ಲಿದೆ.

‘ಈ ನಾಲೆಗೆ ಅನೇಕರು ಕಸ ಸುರಿಯುತ್ತಿರುವುದರಿಂದ ನಾಲೆಯ ನೀರು ಮುಂದಕ್ಕೆ ಹರಿಯಲು ಸಾಧ್ಯವಾಗದೆ ಬಡಾವಣೆಗೆಲ್ಲಾ ಕೆಟ್ಟ ವಾಸನೆ ಬೀರುತ್ತಿದೆ. ಹಾಗೂ ಇಲ್ಲೆಲ್ಲಾ ಸೊಳ್ಳೆಗಳು ಹೆಚ್ಚಾಗಿದ್ದು ರೋಗ ಹರಡುವ ಭೀತಿ ಇದೆ’ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು.

ಈ ನಾಲೆಯ ನೀರು ಮಲ್ಲಪ್ಪನಹಳ್ಳಿ ಮಾರ್ಗವಾಗಿ ಮುಂದಿನ ಜಮೀನುಗಳಿಗೂ ಹರಿಯಬೇಕಾಗಿದ್ದು ಕಸಕಡ್ಡಿ ತುಂಬಿ ನೀರು ಹರಿಯದ ಕಾರಣ ರೈತರಿಗೂ ತೀವ್ರ ತೊಂದರೆ ಆಗುತ್ತಿದೆ ಎಂದು ರೈತ ಸಂಘದ ಜವರೇಶ್ ಹಾಗೂ ಕೃಷಿಕ ಕೃಷ್ಣೇಗೌಡ ದೂರಿದರು.

ಸಂಬಂಧ ಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳು ಈ ನಾಲೆಯ ಕಸಕಡ್ಡಿ ಹಾಗೂ ಹೂಳನ್ನು ತೆಗೆಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.