ಸಕಲೇಶಪುರ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವಣಗೂರು–ಜನ್ನಾಪುರ ರಾಜ್ಯ ಹೆದ್ದಾರಿ ಬಾಗರಹಳ್ಳಿ ಬಳಿ ಭೂಮಿ ಕುಸಿದು ಬಿದ್ದಿರುವುದು –ಪ್ರಜಾವಾಣಿ ಚಿತ್ರ/ಜಾನೇಕೆರೆ ಆರ್. ಪರಮೇಶ್.
ಕಂಗೆಟ್ಟ ಕೃಷಿಕರು
ಕಳೆದ ಬಾರಿ ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ರೈತರು ಈ ಬಾರಿ ಅತಿವೃಷ್ಟಿಯಿಂದ ಕಂಗೆಟ್ಟಿದ್ದಾರೆ. ಮುಸುಕಿನ ಜೋಳ ಭತ್ತ ಶುಂಠಿ ಹತ್ತಿ ವಾಣಿಜ್ಯ ಬೆಳೆಯಾದ ತಂಬಾಕು ಎಲ್ಲವೂ ನೀರಿನಲ್ಲಿ ಮುಳುಗಿ ಹೋಗಿವೆ. ಈ ಬಾರಿ ಬಹಳಷ್ಟು ರೈತರು ಶುಂಠಿ ಬೆಳೆದಿದ್ದಾರೆ. ಆದರೆ ಅತಿಯಾದ ಮಳೆಯಿಂದ ಶುಂಠಿಗೆ ಕೊಳೆರೋಗದ ಬಾಧೆ ಶುರುವಾಗಿದೆ. ಬಿತ್ತಿದ ಬೆಳೆಗಳು ಮೇಲೇಳದೇ ಉತ್ಪಾದನೆಯೂ ಕುಂಠಿತವಾಗುವ ಆತಂಕ ಎದುರಾಗಿದೆ. ಇತ್ತ ಮಲೆನಾಡು ಭಾಗದಲ್ಲಿ ಕಾಫಿ ಕಾಳುಮೆಣಸು ಏಲಕ್ಕಿ ಬೆಳೆಗಳಿಗೂ ಮಳೆ ಸಂಕಷ್ಟ ತಂದೊಡ್ಡಿದ್ದು ಈ ಬಾರಿ ಉತ್ಪಾದನೆ ಶೇ 50ಕ್ಕಿಂತ ಹೆಚ್ಚು ಕಡಿಮೆಯಾಗಲಿದೆ ಎನ್ನುತ್ತಿದ್ದಾರೆ ಬೆಳೆಗಾರರು.
ಕುಸಿದ ಉತ್ಪಾದನೆ
ಮಳೆಯಿಂದಾಗಿ ಬೆಳೆ ಪ್ರತಿ ವರ್ಷದಂತೆ ಬೆಳವಣಿಗೆಯೂ ಆಗದೇ ಉತ್ಪಾದನೆ ಕುಸಿದಿದೆ. ಧಾವಂತದಲ್ಲಿ ಕೃಷಿ ಚಟುವಟಿಕೆ ಮಾಡಿದ್ದು ಕೂಲಿ ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಸೀಬಳ್ಳಿ ಯೋಗಣ್ಣ ರೈತ ಸಂಘದ ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷ ಬಾಡಿಗೆ ಇಲ್ಲದೇ ಪರದಾಟ ಸಕಲೇಶಪುರ ತಾಲ್ಲೂಕಿನಲ್ಲಿ ತಿಂಗಳಿಂದ ಪ್ರವಾಸಿಗರೇ ಬರುತ್ತಿಲ್ಲ. ಕಾರುಗಳಿಗೆ ಬಾಡಿಗೆ ಇಲ್ಲದಂತಾಗಿದೆ. ಜೀವನಕ್ಕೆ ಇದೇ ಕಸುಬನ್ನು ನಂಬಿಕೊಂಡಿದ್ದು ಜೀವನ ನಿರ್ವಹಣೆ ಮಾಡುವುದೂ ದುಸ್ತರವಾಗಿದೆ. ರಮೇಶ್ ಕಾರು ಮಾಲೀಕರ–ಚಾಲಕರ ಸಂಘದ ಮಾಜಿ ಅಧ್ಯಕ್ಷ ಶಿರಾಡಿ ಘಾಟ್ ಬಂದ್ ಮಾಡಲ್ಲ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲು ಆಗಲ್ಲ. ವಾಹನಗಳು ಜನರ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಕೆ.ಎನ್. ರಾಜಣ್ಣ ಜಿಲ್ಲಾ ಉಸ್ತುವಾರಿ ಸಚಿವ ಮನೆ ಹಾನಿಗೆ ಪರಿಹಾರ ಜಿಲ್ಲೆಯಲ್ಲಿ ಒಟ್ಟು 25 ಮನೆಗಳಿಗೆ ಹಾನಿಯಾಗಿದ್ದು ಉಳಿದಂತೆ 135 ಮನೆಗಳು ಅಲ್ಪಸ್ವಲ್ಪ ಹಾನಿಯಾಗಿವೆ. ಸೂಕ್ತ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಿ.ಸತ್ಯಭಾಮಾ ಜಿಲ್ಲಾಧಿಕಾರಿ ಅವೈಜ್ಞಾನಿಕ ಕಾಮಗಾರಿಯಿಂದ ಭೂಕುಸಿತ ಸಕಲೇಶಪುರ ತಾಲ್ಲೂಕಿನಲ್ಲಿ ಆಗುತ್ತಿರುವ ಭೂಕುಸಿತ ನೈಸರ್ಗಿಕ ವಿಕೋಪದಿಂದಲ್ಲ. ಬದಲಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಚತುಷ್ಪಥ ಕಾಮಗಾರಿಯೇ ಕಾರಣ. ಸಿಮೆಂಟ್ ಮಂಜು ಶಾಸಕ ಶಾಶ್ವತ ಪರಿಹಾರಕ್ಕೆ ಕ್ರಮ ನದಿ ಪಾತ್ರದಲ್ಲಿ ವಾಸ ಮಾಡುವ ಜನರಿಗೆ ಬೇರೆ ಬಡಾವಣೆ ನಿರ್ಮಿಸಿ ಕೊಡಬೇಕು. ಈ ಬಗ್ಗೆ ನಾನೂ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಶ್ರೇಯಸ್ ಪಟೇಲ್ ಸಂಸದ
ಪಟ್ಟಣಗಳೂ ಜಲಾವೃತ
ಹೇಮಾವತಿ ನದಿಯ ಒಳಹರಿವು ಏರಿಕೆಯಾದ ಹಿನ್ನೆಲೆಯಲ್ಲಿ ನದಿಗೆ ಬಿಡುವ ನೀರಿನ ಪ್ರಮಾಣವೂ ಹೆಚ್ಚಾಗಿತ್ತು. ಹೀಗಾಗಿ ತಾಲ್ಲೂಕು ಕೇಂದ್ರಗಳಾದ ಹೊಳೆನರಸೀಪುರ ಸಕಲೇಶಪುರ ಕೂಡ ಜಲಾವೃತಗೊಂಡಿದ್ದವು. ಹೊಳೆನರಸೀಪುರದ ಪ್ರಮುಖ ರಸ್ತೆಗಳೇ ಹೊಳೆಯಂತಾಗಿದ್ದವು. ಇನ್ನೊಂದೆಡೆ ಪ್ರಮುಖ ಬಡಾವಣೆಗಳಿಗೆ ನೀರು ನುಗ್ಗಿದ್ದರಿಂದ ಜನರೂ ತೊಂದರೆ ಅನುಭವಿಸುವಂತಾಯಿತು. ಹೊಳೆನರಸೀಪುರದ ಕುವೆಂಪು ಬಡಾವಣೆ ಸಕಲೇಶಪುರದ ಆಜಾದ್ ರಸ್ತೆಗಳಲ್ಲಿ ನೀರು ನಿಂತು ಅಕ್ಷರಶಃ ನಡುಗಡೆಗಳಾಗಿದ್ದವು.