ಸಕಲೇಶಪುರ: ತಾಲ್ಲೂಕಿನ ಮಂಜರಾಬಾದ್ ಕೋಟೆಯ ಮೇಲೆ ಭಾನುವಾರ ಸ್ವಚ್ಛತೆ ಹಾಗೂ ಮಾನವ ಸರಪಳಿ ಮಾಡುವ ಮೂಲಕ ಶಾಸಕರ ಸಮ್ಮುಖದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿವಸ ಹಾಗೂ ‘ಸ್ವಚ್ಛತಾ ಹೀ ಸೇವಾ ಅಭಿಯಾನ’ ವಿಶೇಷವಾಗಿ ನಡೆಸಲಾಯಿತು.

ತಾಲ್ಲೂಕು ಪಂಚಾಯಿತಿ, ಪಂಚಾಯತ್ ರಾಜ್ ಇಲಾಖೆ, ಆನೇಮಹಲ್ ಗ್ರಾಮ ಪಂಚಾಯಿತಿಯಿಂದ ಹಮ್ಮಿಕೊಂಡಿದ್ದ ಈ ಅಭಿಯಾನದಲ್ಲಿ ಶಾಸಕ ಸಿಮೆಂಟ್ ಮಂಜು ಮಾತನಾಡಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಹಕ್ಕುಗಳು, ಅವುಗಳ ರಕ್ಷಣೆಯಿಂದ ಸ್ವತಂತ್ರವಾಗಿ ಜೀವನ ನಡೆಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 2007ರಂದು ವಿಶ್ವ ಸಂಸ್ಥೆ ಪ್ರತಿವರ್ಷ ಸೆ. 15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಮಾಡಲು ಜಾರಿಗೆ ತಂದಿದೆ’ ಎಂದರು.

‘ಮನುಷ್ಯ ಎಷ್ಟೇ ಬುದ್ಧಿವಂತನಾದರೂ, ತಂತ್ರಜ್ಞಾನ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆದರೂ ಸಹ, ಉಳ್ಳವರು, ಅಧಿಕಾರ ಇರುವವರು, ಬಡವರು, ಅನಕ್ಷರಸ್ಥರನ್ನು ಶೋಷಣೆ ಮಾಡುವುದು, ಅವರ ಬದುಕುವ ಹಕ್ಕು ಕಿತ್ತುಕೊಳ್ಳುವುದು ನಡೆಯುತ್ತಲೇ ಇರುವುದು ದೊಡ್ಡ ದುರಂತ’ ಎಂದರು.

‘ಡಾ.ಬಿ.ಆರ್.ಅಂಬೇಡ್ಕರ್ ಬರೆದಿರುವ ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನ ಆಗಿದೆ. ಈ ಸವಿಂಧಾನದ ಬಲದಿಂದಲೇ, ನಮ್ಮ ದೇಶ ಹಲವು ವೈವಿಧ್ಯತೆಗಳ ನಡುವೆ ಏಕತೆ ಇರಲು ಕಾರಣ’ ಎಂದರು.

ಇದೆ ಸಂದರ್ಭದಲ್ಲಿ ಅರಣ್ಯ ಇಲಾಖೆ ಮತ್ತು ಆನೆಮಹಲ್ ಗ್ರಾಮ ಪಂಚಾಯಿತಿಯಿಂದ ಮಂಜರಾಬಾದ್ ಕೋಟೆ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಡಲಾಯಿತು. ಕೋಟೆಯ ಒಳಭಾಗ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಬೃಹತ್ ಮಾನವ ಸರಪಳಿ ನಿರ್ಮಿಸಿ, ಸಂವಿಧಾನ ಪೀಠಿಕೆ ಓದಲಾಯಿತು. ಕೋಟೆಯ ಆವರಣವನ್ನು ಸ್ವಯಂ ಸೇವಕರ ನೆರವಿನೊಂದಿಗೆ ಸ್ವಚ್ಛಗೊಳಿಸಲಾಯಿತು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಡಿ. ಗಂಗಾಧರನ್, ಸಹಾಯಕ ನಿರ್ದೇಶಕರಾದ ಎಚ್.ಎ. ಆದಿತ್ಯ ಕೆ.ಹರೀಶ್, ಆನೆಮಹಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಹಾರಾ ಸಲೀಂ, ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಆನೆಮಹಲ್ ಗ್ರಾಮ ಪಂಚಾಯಿತಿ ಸದಸ್ಯರು, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸ್ವಸಹಾಯ ಸಂಘಗಳ ಸದಸ್ಯರುಗಳು, ಎನ್‌ಆರ್‌ಎಲ್‌ಎಂ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.