ಹಾಸನ: ಕಳೆದ ವರ್ಷ ಬರದ ಬವಣೆಯಿಂದ ನಲುಗಿದ್ದ ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆ ಬೀಳುತ್ತಿದ್ದು, ಜಿಲ್ಲೆಯ ಜೀವನದಿ ಹೇಮಾವತಿ ಮತ್ತೆ ಮೈದುಂಬಿ ಹರಿಯುತ್ತಿದೆ. ಸಕಲೇಶಪುರ ತಾಲ್ಲೂಕಿನ ಸಂಪೂರ್ಣ ಬತ್ತಿ ಹೋಗಿದ್ದ ಹೇಮಾವತಿ ನದಿಯಲ್ಲಿ ಇದೀಗ ಅಪಾರ ಪ್ರಮಾಣ ಜಲರಾಶಿ ಹರಿದು ಬರುತ್ತಿದೆ.

ಮೂರು ದಿನಗಳಿಂದ ಜಿಲ್ಲೆಯ ಹಾಸನ, ಆಲೂರು, ಸಕಲೇಶಪುರ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಜೊತೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲೂ ಹೆಚ್ಚಿನ ಮಳೆಯಾಗುತ್ತಿದ್ದು, ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ. ಹೇಮಾವತಿ ನದಿಯಲ್ಲಿ ಮಂಗಳವಾರ 14 ಸಾವಿರ ಕ್ಯುಸೆಕ್ ಒಳಹರಿವು ದಾಖಲಾಗಿದೆ. ಜಿಲ್ಲೆಯ ವಾಟೆಹೊಳೆ, ಯಗಚಿ ಜಲಾಶಯಗಳಲ್ಲೂ ನೀರಿನ ಸಂಗ್ರಹ ಏರಿಕೆಯಾಗುತ್ತಿದ್ದು, ನೀರು ಸಂಗ್ರಹ ಹೆಚ್ಚಾಗುತ್ತಿದೆ.

ಮಲೆನಾಡು ಭಾಗದಲ್ಲಿ ಮಳೆ ಸುರಿಯುತ್ತಿರುವುದರಿಂದ ಸಕಲೇಶಪುರ ತಾಲ್ಲೂಕಿನ ಹೇಮಾವತಿ ಉಪನದಿಗಳಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಹೆತ್ತೂರು ಸಮೀಪದ ಹುಲ್ಲಗತ್ತೂರು ಗ್ರಾಮದಲ್ಲಿ ಹೇಮಾವತಿ ನದಿ ನೀರು ಭತ್ತದ ಗದ್ದೆಗಳಿಗೆ ನುಗ್ಗಿದೆ.

ಸೋಮವಾರ ರಾತ್ರಿಯಿಂದಲೂ ವಿಪರೀತ ಮಳೆ ಸುರಿಯುತ್ತಿದ್ದು, ಬೆಳಿಗ್ಗೆಯೂ ಬಹುತೇಕ ತಾಲ್ಲೂಕಿನಲ್ಲಿ ತುಂತುರು ಮಳೆಯಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಹಲವೆಡೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ.

ಧರೆಗುರುಳಿದ ಮರ, ವಿದ್ಯುತ್ ಕಂಬ: ಸಕಲೇಶಪುರ ತಾಲ್ಲೂಕಿನ ಮಾವಿನೂರು, ಕಾಗಿನೆರೆ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ವಿಪರೀತ ಮಳೆ–ಗಾಳಿಯಿಂದ ಮರದ ಕೊಂಬೆಗಳು, ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು, ಇನ್ನೂ ಕೆಲವೇ ವಿದ್ಯುತ್ ಕಂಬ ಧರೆ ಗುರುಳಿದೆ. ಸುತ್ತಲಿನ ಗ್ರಾಮಗಳಿಗೆ ವಿದ್ಯುತ್ ಕಡಿತವಾಗಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.

ಮತ್ತೊಂದೆಡೆ ಸಕಲೇಶಪುರ ತಾಲ್ಲೂಕಿನ ಗಡಿ ಗ್ರಾಮ ತಂಬಲಗೇರಿಯಲ್ಲಿ ಮನೆಯ ಕಾಂಪೌಂಡ್ ಕುಸಿದು ಬಿದ್ದಿದ್ದು, ಪುಟ್ಟೇಗೌಡ ಎಂಬುವವರಿಗೆ ಸೇರಿದ್ದ ಮನೆ ನೆಲಕ್ಕುರುಳಿದೆ. ತಂಬಲಗೇರಿ ಗ್ರಾಮದ ಲೋಕೇಶ್ ಹಾಗೂ ಇತರರಿಗೆ ಸೇರಿದ ಭತ್ತದ ಗದ್ದೆಗಳಿಗೆ ಮಣ್ಣು ಕುಸಿದಿದೆ. ಮಣ್ಣಿನಡಿ ಭತ್ತದ ಸಸಿಗಳು ಸಿಲುಕಿದ್ದು, ಇದರ ಮೇಲೆ ನದಿಯ ನೀರು ತುಂಬಿ ಹರಿಯುತ್ತಿದೆ.

ಬೇಲೂರು ತಾಲ್ಲೂಕಿನ ಮಾಜಿ ಶಾಸಕ ದಿವಂಗತ ವೈ.ಎನ್. ರುದ್ರೇಶ್ ಗೌಡರಿಗೆ ಸೇರಿದ ಮನೆ ಸಂಪೂರ್ಣ ಜಖಂ ಆಗಿದ್ದು, ರಾತ್ರಿಯಿಂದ ವಿದ್ಯುತ್ ಸಂಪರ್ಕ ಕಡಿತವಾಗಿದೆ. ವಿದ್ಯುತ್ ತಂತಿ ಹಾಗೂ ಮನೆಯ ಮೇಲೆ ತೆಂಗಿನ ಮರ ಬಿದ್ದಿದ್ದು, ಹಾನಿ ಸಂಭವಿಸಿದೆ. ಘಟನೆ ನಂತರ ಸುತ್ತಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಪರದಾಡುವಂತಾಗಿದೆ. ಕೂಡಲೇ ಮರ ತೆರವುಗೊಳಿಸಿ, ವಿದ್ಯುತ್ ಪೂರೈಕೆ ಮಾಡುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಯಸಳೂರು ಪೊಲೀಸ್ ಠಾಣೆ ಎದುರು ನಿಲುಗಡೆ ಮಾಡಿದ್ದ ಆಮ್ನಿ ವಾಹನದ ಮೇಲೆ ತೆಂಗಿನಮರ ಕಾರಿನ ಮೇಲೆ ಬಿದ್ದು ಜಖಂಗೊಂಡಿದೆ. ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜು.21 ರವರೆಗೆ ಯಲ್ಲೋ ಅಲರ್ಟ್

ಜಿಲ್ಲೆಯ ಹಲವು ತಾಲ್ಲೂಕಿನಲ್ಲಿದೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯಿಂದ ಮಳೆಯ ಮುನ್ಸೂಚನೆ ನೀಡಲಾಗಿದ್ದು ಜು.17 ರ ಬೆಳಿಗ್ಗೆ 8.30 ರವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ಜು.17 ರಿಂದ ಜು.21 ರವರೆಗೆ ಜಿಲ್ಲೆಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.