ಸಕಲೇಶಪುರ (ಹಾಸನ): ತಾಲ್ಲೂಕಿನ ಕ್ಯಾನಹಳ್ಳಿ ಬಳಿ, ಮೈಸೂರು ಮರ್ಕೆಂಟೈಲ್ ಕಂಪನಿ ಜಲ ವಿದ್ಯುತ್ ಘಟಕದ ಸಮೀಪ ಶನಿವಾರ ಎತ್ತಿನಹೊಳೆ ನೀರಿನ ಪೈಪ್‌ಲೈನ್‌ನಲ್ಲಿ ಭಾರೀ ಸೋರಿಕೆಯಾಗಿದ್ದು, ರಸ್ತೆ ಹಾಗೂ ಕಟ್ಟಡಕ್ಕೆ ನೀರು ನುಗ್ಗಿ ಹಾನಿ ಉಂಟಾಗಿದೆ.

15 ದಿನಗಳ ಹಿಂದೆಯೂ ಇದೇ ಸ್ಥಳದಲ್ಲಿ ಸೋರಿಕೆಯಾಗಿತ್ತು. ಮತ್ತೆ ಸೋರಿಕೆಯಿಂದ ಅಪಾರ ನಷ್ಟ ಉಂಟಾಗಿದೆ. ಸೆ. 6ರಂದು ಮೊದಲ ಹಂತದ ನೀರೆತ್ತುವ ಏತ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ನಂತರ 5 ಚೆಕ್‌ಡ್ಯಾಂಗಳಿಂದ ನಿರಂತರವಾಗಿ ನೀರನ್ನು ಹೆಬ್ಬನಹಳ್ಳಿ ಚೆಕ್‌ಡ್ಯಾಂಗೆ ಹರಿಸಲಾಗುತ್ತಿದೆ.

‘ಸತತವಾಗಿ ಹರಿಯುತ್ತಿರುವ ನೀರಿನ ಒತ್ತಡದಿಂದ ಪೈಪ್‌ಲೈನ್ ಒಡೆದಿದೆ. ತಗ್ಗು ಪ್ರದೇಶದ ಮನೆ, ಜಮೀನುಗಳಿಗೂ ನೀರು ನುಗ್ಗಿದ್ದು, ಎಸ್ಟೇಟ್‌ಗೆ ನೀರು ನುಗ್ಗಿದ್ದರಿಂದ ಅಪಾರ ಹಾನಿಯಾಗಿದೆ. ಕಳಪೆ ಕಾಮಗಾರಿಯಿಂದ ಪೈಪ್‌ಲೈನ್ ಒಡೆದಿದೆ’ ಎಂದು ಸ್ಥಳೀಯರು ಆರೋಪಿಸಿದ್ದು, ‘ನಷ್ಟಕ್ಕೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.