ರಾಣೆಬೆನ್ನೂರು: ಮೆಡ್ಲೇರಿಯ ಗ್ರಾಮ ದೇವರಾದ ಬೀರೇಶ್ವರ ಸ್ವಾಮಿಯ ಪಂಚಮಿ ಹಬ್ಬದ ಜಾತ್ರಾ ಮಹೋತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆ ಒಳಗುಡಿಯಿಂದ ಬೀರೇಶ್ವರ ದೇವರ ಮೂರ್ತಿಯನ್ನು ಆಡಳಿತ ಮಂಡಳಿ ಪದಾಧಿಕಾರಿಗಳು, ಬಾಬುದಾರರಾದ ಪೂಜಾರ ಬಂಧುಗಳು, ಕೋಲಕಾರರು, ಬಡಪ್ಪಳವರ, ನಗಾರಿದಾರು, ಕುರುಡಪ್ಪಳವರ, ಕೂನಬೇವು, ಪಾಶಿಗಾರರು, ದೊಡ್ಡ ಬುಡ್ಡಾಳರು, ಜಾಗಟಿದಾರರು ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ್ದರು.

ಭಕ್ತರಿಗೆ ಭಂಡಾರ ವಿತರಿಸಲಾಯಿತು. ‘ಏಳು ಕೋಟಿ ಏಳು ಕೋಟಿಗೋ, ಛಾಂಗಮಲೋ, ಛಾಂಗಮಲೋ, ಛಾಂಗಮಲೋ’ ಎಂದು ಮೂರು ಬಾರಿ ಹೇಳುತ್ತ ಭಕ್ತರು ಉತ್ಸವದಲ್ಲಿ ಜೈ ಘೋಷ ಹಾಕಿದರು. ಛತ್ರ ಚಾಮರ ಬೀಸುವವರು, ಡೊಳ್ಳು ಕುಣಿತಗಾರರು ಮತ್ತು ಸಕಲ ಬಾಜಾ ಭಜಂತ್ರಿಯೊಂದಿಗೆ ಮೆರವಣಿಗೆಯ ಮೂಲಕ ಸಾವಿರಾರು ಭಕ್ತರೊಂದಿಗೆ ತುಂಗಭದ್ರಾ ನದಿಗೆ ಹೋಗಿ ನದಿ ತೀರದಲ್ಲಿ ಬೀರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹೊಳೆ ಚಾಕರಿ ಮುಗಿಸಿಕೊಂಡು ಮತ್ತೆ ಮೆರವಣಿಗೆಯ ಮೂಲಕ ಹೊರ ಗುಡಿ (ಬೀರೇಶ್ವರ ಸ್ವಾಮಿ) ಪ್ರವೇಶ ಮಾಡುವ ಮೂಲಕ ಪ್ರತಿಷ್ಠಾಪನೆ ಮಾಡಲಾಯಿತು.

ಪೂಜಾರ ಬಂಧುಗಳು ಬೀರೇಶ್ವರ ಸ್ವಾಮಿಗೆ ಬಾಳೆ ದಿಂಡಿನ ಮತ್ತು ಹೂಗಳ ಅಲಂಕಾರ ಮಾಡಿ ಪೂಜೆ, ಮಹಾಮಂಗಳಾರತಿ ಮತ್ತು ನೈವೇದ್ಯ ಸಲ್ಲಿಸಿದರು. ಶನಿವಾರ ಭಕ್ತರಿಗೆ ಮೊಸರು ಬಾನ ಪ್ರಸಾದ ವಿತರಣೆ ಮಾಡಲಾಗುವುದು ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ದಿಳ್ಳೆಪ್ಪ ಅಣ್ಣೇರ ತಿಳಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಗೋರಜ್ಜ ಗೋರಮಾಳರ, ನಾಗಪ್ಪ ಪೂಜಾರ, ನೀಲಪ್ಪ ಅಣ್ಣೇರ, ದಿಳ್ಳೆಪ್ಪ ಗುತ್ಯಾಳರ, ಬೀರೇಶ ವ್ಯಾಪಾರಿ, ಮಲ್ಲಪ್ಪ ಪೂಜಾರ, ಮಾಹಾಲಿಂಗಪ್ಪ ಹಾಡೋರ, ಕರಿಯಪ್ಪ ಪೂಜಾರ, ಲಕ್ಕಪ್ಪ ಪಾಲ್ಗೊಂಡರು.

ರಸ್ತೆ ಗುಂಡಿ ಮುಚ್ಚಿಸಿದ ಗ್ರಾ.ಪಂ

ರಾಣೆಬೆನ್ನೂರು: ತಾಲ್ಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಬೀರೇಶ್ವರ ದೇವಸ್ಥಾನದ ಹಿಂಭಾಗದ ರಸ್ತೆ ಸತತ ಮಳೆಗೆ ಹದಗೆಟ್ಟಿದ್ದರಿಂದ ಗುಂಡಿಗಳು ಬಿದ್ದಿದ್ದವು. ಹೀಗಾಗಿ ಬೀರೇಶ್ವರ ಸ್ವಾಮಿಯ ದೇವಸ್ಥಾನದ ಮುಖ್ಯರಸ್ತೆಯ ರೈತ ಸಂಪರ್ಕ ಕೇಂದ್ರದಿಂದ ಬೆಂಕಿ ನಗರದವರೆಗೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು.

ಆ. 7 ರಂದು ಗ್ರಾಮ ಪಂಚಾಯಿತಿಯಿಂದ ಟ್ರ್ಯಾಕ್ಟರ್ ಮೂಲಕ ಗೊರ್ಚು ತುಂಬಿ ತಗ್ಗುಗಳನ್ನು ಮುಚ್ಚಿದ್ದಾರೆ. ರಸ್ತೆ ಬದಿಗೆ ಇದ್ದ ಪಾರ್ಥೇನಿಯ ಮತ್ತು ಕಸ ಕಿತ್ತು ಸ್ವಚ್ಛಗೊಳಿಸಿದ್ದಾರೆ. ಮಳೆ ನೀರು ಸರಾಗವಾಗಿ ಚರಂಡಿ ಮೂಲಕ ಹರಿದು ಹೋಗುವಂತೆ ಕ್ರಮ ಕೈಗೊಂಡಿದ್ದಾರೆ.

ರಸ್ತೆಯ ತಗ್ಗುಗುಂಡಿಗಳನ್ನು ಮುಚ್ಚಿರುವುದರಿಂದ ಆ. 13ರವರೆಗೆ ನಡೆಯುವ ಬೀರೇಶ್ವರ ಸ್ವಾಮಿಯ ಪಂಚಮಿ ಹಬ್ಬದ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಹಾಗೂ ಗ್ರಾಮಸ್ಥರಿಗೆ ಶಾಲೆ– ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ಅನುಕೂಲವಾಗಿದೆ ಭಕ್ತರು ಸಂತೋಷ ವ್ಯಕ್ತ ಪಡಿಸಿದ್ದಾರೆ. ಈ ರಸ್ತೆಯಲ್ಲಿ ಗುಂಡಿಗಳು ಆಗಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಈಚೆಗೆ ವರದಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.