ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಯಿಂದ ಕುಟುಂಬ ರಾಜಕಾರಣ: ಸಿದ್ದರಾಮಯ್ಯ

Published : 6 ನವೆಂಬರ್ 2024, 0:56 IST
Last Updated : 6 ನವೆಂಬರ್ 2024, 0:56 IST
ಫಾಲೋ ಮಾಡಿ
Comments
ಶಿಗ್ಗಾವಿ ಕ್ಷೇತ್ರದ ಹಿರೇಮಣಿಕಟ್ಟಿ ಗ್ರಾಮದಲ್ಲಿ ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮನೆ ಎದುರು ಸಂಸದ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಚಿತ್ರ ಕ್ಲಿಕ್ಕಿಸಿಕೊಂಡರು
ಶಿಗ್ಗಾವಿ ಕ್ಷೇತ್ರದ ಹಿರೇಮಣಿಕಟ್ಟಿ ಗ್ರಾಮದಲ್ಲಿ ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮನೆ ಎದುರು ಸಂಸದ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಚಿತ್ರ ಕ್ಲಿಕ್ಕಿಸಿಕೊಂಡರು
ಬಸವರಾಜ ಬೊಮ್ಮಾಯಿ ಶಕುನಿಯೆಂದು ಎಲ್ಲರೂ ಹೇಳುತ್ತಾರೆ. ಮುಖ್ಯಮಂತ್ರಿಯಾಗಲು ಯಡಿಯೂರಪ್ಪಗೆ ಟಾಂಗ್ ಕೊಟ್ಟರು. ಅವರನ್ನು ರಾಜಕೀಯವಾಗಿ ಮುಗಿಸಲು ತಂತ್ರ ರೂಪಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ
ಉಪಮುಖ್ಯಮಂತ್ರಿಯನ್ನಾಗಿ ಮಾಡಿ ರಾಜಕೀಯವಾಗಿ ಬೆಳೆಸಿದ್ದ ದೇವೇಗೌಡರಿಗೆ ಕೈಕೊಟ್ಟು ಕಾಂಗ್ರೆಸ್‌ಗೆ ಹೋದ ಸಿದ್ದರಾಮಯ್ಯ ಅವರು ನಿಜವಾದ ಶಕುನಿ ಎಂದು ಜನರು ಹೇಳುತ್ತಾರೆ.
ಬಸವರಾಜ ಬೊಮ್ಮಾಯಿ ಸಂಸದ
ಫಲಾನುಭವಿ ಮನೆ ಎದುರು ಬೊಮ್ಮಾಯಿ ಚಿತ್ರ
ಶಿಗ್ಗಾವಿ (ಹಾವೇರಿ ಜಿಲ್ಲೆ): ‘ಶಿಗ್ಗಾವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಒಂದು ಮನೆಯನ್ನೂ ಕಟ್ಟಿಸಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಆರೋಪವನ್ನು ಅಲ್ಲಗೆಳೆದಿರುವ ಸಂಸದ ಬಸವರಾಜ ಬೊಮ್ಮಾಯಿ ಅವರು ಫಲಾನುಭವಿಯೊಬ್ಬರ ಮನೆ ಎದುರು ನಿಂತು ಚಿತ್ರ ಕ್ಲಿಕ್ಕಿಸಿಕೊಂಡರು. ಶಿಗ್ಗಾವಿ ತಾಲ್ಲೂಕಿನ ಹಿರೇಮಣಕಟ್ಟಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಬಸವರಾಜ ಬೊಮ್ಮಾಯಿ ಅವರು ಪ್ರವಾಹದ ಸಂದರ್ಭದಲ್ಲಿ ಹಾನಿ ಅನುಭವಿಸಿದ್ದ ಫಲಾನುಭವಿಗೆ ₹ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಮನೆಗೆ ತೆರಳಿ ಭೇಟಿಯಾದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ ‘ಸಿದ್ದರಾಮಯ್ಯ ಅವರೇ ಶಿಗ್ಗಾವಿಯಲ್ಲಿ ಒಂದೂ ಮನೆ ಕಟ್ಟಿಲ್ಲ ಅಂತ ಹೇಳಿದ್ದೀರಿ. ನಿಮ್ಮದು ಹಸಿ ಸುಳ್ಳು. ಇಲ್ಲಿ ನೋಡಿ ನಾನು ಕಟ್ಟಿಸಿದ ಮನೆ ಕಣ್ಣೆದುರು ಇದೆ. ಬಸವಣ್ಣೆಮ್ಮಾ ಮಾಳಪ್ಪನವರ ಮನೆ ಇದು. ಹಿರೇಮಣಕಟ್ಟಿ ಗ್ರಾಮದಲ್ಲಿ 300 ಮನೆ ಕಟ್ಟಿಸಿದ್ದೇವೆ. ಮನೆಯ ಮೇಲೆ ತಂದೆ-ತಾಯಿ ಆಶೀರ್ವಾದ ಜೈ ರಾಯಣ್ಣ ಅಂತ ಬರೆಸಿದ್ದಾರೆ. ನಾವೂ ಜೈ ರಾಯಣ್ಣ ಎನ್ನುತ್ತೇವೆ’ ಎಂದರು. ‘ಬಿಜೆಪಿ ಸರ್ಕಾರ ಇದ್ದಾಗ 2021-22ರಲ್ಲಿ ಶಿಗ್ಗಾವಿ ಕ್ಷೇತ್ರದಲ್ಲಿ 12500 ಮನೆಗಳನ್ನು ಕಟ್ಟಿದ್ದೇವೆ. ನಾವು ಕಟ್ಟಿಸಿದ ಮನೆಗಳ ಮುಂದೆ ನಿಂತು ಚಿತ್ರಗಳನ್ನು ಕ್ಲಿಕ್ಕಿಸಿ ನಿಮಗೆ ಕಳುಹಿಸುತ್ತೇವೆ. ನೀವು ಹಸಿ ಸುಳ್ಳು ಹೇಳುವುದು ಬಿಡಿ. ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಇರಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT