ಮಾರುಕಟ್ಟೆಯಲ್ಲಿ ಪಾರದರ್ಶಕ ತೂಕ, ಶೀಘ್ರ ಹಣ ಪಾವತಿ ಮತ್ತು ಗುಣಮಟ್ಟದ ಮೆಣಸಿನಕಾಯಿಗೆ ಅತ್ಯುತ್ತಮ ಬೆಲೆ ನೀಡುವಿಕೆ ರೈತರ ವಿಶ್ವಾಸ ಗಳಿಸಿದೆ. ರಾಜ್ಯದ ವಿವಿಧೆಡೆಯಿಂದ ಅಲ್ಲದೇ ಆಂಧ್ರ ಪ್ರದೇಶದಿಂದ ರೈತರು ಒಣಮೆಣಸಿನಕಾಯಿಯನ್ನು ಮಾರಾಟಕ್ಕೆ ತರುತ್ತಾರೆ.
ಮುದ್ದೆಬಿಹಾಳ, ವಿಜಯಪುರ, ಬಾಗಲಕೋಟಿ, ಸಿಂದಗಿ, ರಾಮದುರ್ಗ ತಾಲ್ಲೂಕುಗಳಲ್ಲಿ ಮೆಣಸಿನಕಾಯಿ ಬೆಳೆಯಲಾಗಿದ್ದು ಉತ್ತಮ ಗುಣಮಟ್ಟದ ಮೆಣಸಿನಕಾಯಿ ಮಾರಾಟಕ್ಕೆ ಬಂದಿದೆ. ಹೀಗಾಗಿ ಉತ್ತಮ ಬೆಲೆ ದೊರೆತಿದೆ.
ವಿ.ಎಸ್.ಮೋರಿಗೇರಿ, ವರ್ತಕರ ಸಂಘದ ಗೌರವ ಕಾರ್ಯದರ್ಶಿಕಾಂಕ್ರೀಟ್ ರಸ್ತೆ ರೈತ ಭವನ ನಿರ್ಮಾಣಗೊಂಡಿದೆ. ಪಟ್ಟಣದ ಸುತ್ತಲೂ ಸುಮಾರು 30ಕ್ಕೂ ಹೆಚ್ಚು ಕೋಲ್ಡ್ ಸ್ಟೋರೇಜ್‌ಗಳು ತಲೆ ಎತ್ತಿವೆ. ಇ–ಟೆಂಡರ್ ಪದ್ಧತಿ ಅಳವಡಿಸಿದ್ದು ಸಂಜೆಯ ವೇಳೆಗೆ ಟೆಂಡರ್ ಡಿಕ್ಲೇರ್ ಮಾಡಲಾಗುತ್ತದೆ.
ಎಚ್.ವೈ.ಸತೀಶ, ಎಪಿಎಂಸಿ ಕಾರ್ಯದರ್ಶಿಮೆಣಸಿನಕಾಯಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಸಿಂಪರಣೆ ಮಾಡುವುದರಿಂದ ಮೆಣಸಿನಕಾಯಿಯ ಗುಣಮಟ್ಟ ಹಾಳಾಗುತ್ತದೆ. ಹಸಿಬಿಸಿ ಇರುವ ಮೆಣಸಿನಕಾಯಿ ಮಾರಾಟಕ್ಕೆ ತರುವುದರಿಂದ ಮೆಣಸಿನಕಾಯಿ ಬೇಗ ಫಂಗಸ್‌ಗೆ ತುತ್ತಾಗುತ್ತದೆ. ಒಣಗಿಸಿದ ಮೆಣಸಿನಕಾಯಿ ಮಾರಾಟಕ್ಕೆ ತರಬೇಕು.
ಸುರೇಶಗೌಡ್ರ, ಪಾಟೀಲ ವರ್ತಕರ ಸಂಘದ ಅಧ್ಯಕ್ಷಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟವಾದ ಮೆಣಸಿನಕಾಯಿಯನ್ನು ಒಣಗಿಸಿ ರವಾನೆ ಮಾಡಲು ಚೀಲದಲ್ಲಿ ತುಂಬುತ್ತಿರುವ ಕಾರ್ಮಿಕರು
ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟವಾದ ಮೆಣಸಿನಕಾಯಿಯನ್ನು ಒಣಗಿಸುತ್ತಿರುವ ಕಾರ್ಮಿಕರು
ಪೌಡರ್ ಮಾಡಿದ ಮೆಣಸಿನಕಾಯಿಯನ್ನು ಚೀಲಗಳಲ್ಲಿ ತುಂಬಿ ಲಾರಿಗಳ ಮೂಲಕ ರವಾನೆ ಮಾಡುತ್ತಿರುವುದು.