ರಾಣೆಬೆನ್ನೂರು: ಸ್ಥಳೀಯ ಯುವ ಕಲಾವಿದರು ಹಾಗೂ ವಿವಿಧ ಕ್ಷೇತ್ರದಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಕಲಾಪೋಷಕ ಕಾಕಿ ಜನಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಾಕಿ ಹೇಳಿದರು.

ಇಲ್ಲಿನ ಸಿದ್ದೇಶ್ವರ ನಗರದ ಕಾಕಿ ಜನಸೇವಾ ಸಂಸ್ಥೆಯ ಗಣೇಶೋತ್ಸವ ಮಹಾಮಂಟಪದಲ್ಲಿ ಕುರುಹಿನಶೆಟ್ಟಿ ಸೇವಾ ಸಮಾಜ, ಸೇವಾ ಸಂಘ, ಜೆಸಿಐ, ಜೆಸಿಸ್ ಕ್ಷೇಮಾಭಿವೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಾಗೂ ಕಾಕಿ ಸೌಹಾರ್ದ ಸಹಕಾರಿ ನಿಯಮಿತದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಕರೋಕೆ ಚಲನಚಿತ್ರ ಗೀತೆಗಳ ಸ್ಪರ್ಧೆಯಲ್ಲಿ ಮಾತನಾಡಿದರು.

50ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ರಮ್ಯಾರಾಣಿ ಆರ್. ಎಂ. ಅವರು ಪ್ರಥಮ , ಮುತ್ತುರಾಜ್ ಸಾವಕ್ಕನವರ– ದ್ವಿತೀಯ ಹಾಗೂ ಸುನಿಲ್ ಎಲ್. ಜೆ ತೃತೀಯ ಸ್ಥಾನ ಪಡೆದರು. ಖಂಡೆಪ್ಪ ಪೂಜಾರ ಸಮಾಧಾನಕರ ಬಹುಮಾನ ಪಡೆದರು. ವಿಜೇತರಿಗೆ ನಗದು ಬಹುಮಾನ, ಆಕರ್ಷಕ ಪಾರಿತೋಷಕ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.

ಜಾನಪದ ಹಾಗೂ ಕರೋಕೆ ಚಲನಚಿತ್ರ ಗಾಯಕರಾದ ಡಾ. ಕೆ.ಸಿ.ನಾಗರಜ್ಜಿ, ಪ್ರಕಾಶ ಗಚ್ಚಿನಮಠ, ಕೆ.ಎಸ್.ನಾಗರಾಜ, ಎ. ಎ.ಕಿಲ್ಲೇದಾರ ತೀರ್ಪುಗಾರರಾಗಿದ್ದರು.

ಹನುಮಂತಪ್ಪ ಕಾಕಿ, ಹನುಮಂತಪ್ಪ ಅಮಾಸಿ, ಶಿವಾನಂದ ಸಾಲಗೇರಿ, ಡಾ. ಶಿವಾನಂದ ಹಿತ್ತಲಮನಿ, ಪ್ರೊ.ಅರುಣಚಂದನ, ದೊಡ್ಡ ಹನುಮಂತಪ್ಪ, ವಿಜಯಲಕ್ಷ್ಮಿ, ವೆಂಕಟೇಶ, ಲಕ್ಷ್ಮಿ ಕಾಕಿ, ರೂಪಾ ಕಾಕಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.