ಶಿಗ್ಗಾವಿ (ಹಾವೇರಿ ಜಿಲ್ಲೆ): ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ‘ರೌಡಿಪಟ್ಟಿ’ ವಿಷಯದಲ್ಲಿ ಬಿಜೆಪಿ–ಕಾಂಗ್ರೆಸ್ ನಡುವೆ ವಾಕ್ಸಮರ ನಡೆಯಿತು.

‘ಕ್ಷೇತ್ರದಲ್ಲಿನ 184 ರೌಡಿಗಳನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು, ಮುಚ್ಚಳಿಕೆ ಬರೆಸಿಕೊಳ್ಳ ಲಾಗಿದೆ. ರೌಡಿಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ ಹೆಸರು ಇದೆ. ಪರಿ ಶೀಲಿಸಿ ಮಾಹಿತಿ ನೀಡುವೆ’ ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ್ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದರ ಬೆನ್ನಲ್ಲೇ ಸುದ್ದಿಗಾರರ ಜೊತೆ ಕೇಂದ್ರ ಸಚಿವ ಪ್ರಲ್ದಾದ ಜೋಶಿ ಮಾತ ನಾಡಿ, ‘ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹ ಮದ್ ಖಾನ್ ಪಠಾಣ ಅವರ ಹೆಸರು ರೌಡಿ ಪಟ್ಟಿಯಲ್ಲಿ ಇರುವುದನ್ನು ಪೊಲೀ ಸರು ಸ್ಪಷ್ಟಪಡಿಸಬೇಕು’ ಎಂದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಕಳೆದ ಚುನಾವಣೆಯಲ್ಲಿ 16ರಿಂದ 17 ಅಪರಾಧ ಪ್ರಕರಣಗಳಿರುವ ಬಗ್ಗೆ ಯಾಸೀರ ಅಹಮದ್ ನಮೂದಿಸಿದ್ದರು. ದರ್ಗಾ ಗುರುಗಳಾದ ಅಜ್ಜಂಪೀರ ಖಾದ್ರಿ ಸಹ ‘ರೌಡಿಶೀಟರ್ಗೆ ಟಿಕೆಟ್ ಕೊಟ್ಟಿದ್ದಾರೆ’ ಎಂದಿದ್ದರು. ಗುರುಗಳು ಯಾವಾಗಲೂ ಸುಳ್ಳು ಹೇಳುವುದಿಲ್ಲ. ಆದರೆ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಅಫಿಡ್ವಿಟ್ನಲ್ಲಿ ಯಾವುದೇ ಪ್ರಕರಣ ನಮೂದಿಸಿಲ್ಲ. ಈ ಸಂಗತಿಯನ್ನು ಚುನಾವಣಾಧಿಕಾರಿಯೂ ಪರಿಶೀಲಿಸಿಲ್ಲ. ಜನರನ್ನು ವಂಚಿಸಲು ಅಪರಾಧ ಪ್ರಕರಣಗಳ ಮಾಹಿತಿ ಮುಚ್ಚಿಟ್ಟಿರುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು’ ಎಂದರು.

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ ಯಾಸೀರ ಅಹಮದ್ ಖಾನ್ ಪಠಾಣ, ‘ನನ್ನ ವಿರುದ್ಧ ಯಾವುದೇ ಪ್ರಕರಣ ಇಲ್ಲ. ರೌಡಿಪಟ್ಟಿಯಲ್ಲೂ ನನ್ನ ಹೆಸರಿಲ್ಲ. 2023ರ ಸೆಪ್ಟೆಂಬರ್ ನಲ್ಲೇ ರೌಡಿಪಟ್ಟಿಯಿಂದ ನನ್ನ ಹೆಸರು ತೆಗೆಯಲಾಗಿದೆ’ ಎಂದರು.

‘ಬಿಜೆಪಿಯವರಿಗೆ ಉಪಚುನಾವಣೆಯಲ್ಲಿ ಸೋಲುವ ಭೀತಿ ಕಾಡುತ್ತಿದೆ.ಈ ಮೊದಲು ಆಕ್ಷೇಪಣೆ ಸಲ್ಲಿಸದವರು ಈಗ ಮತದಾನಕ್ಕೆ ಎರಡು ದಿನ ಬಾಕಿ ಇರುವಾಗ ಈ ರೀತಿ ಆರೋಪಿಸಿದ್ದಾರೆ’ ಎಂದರು.

ಪೊಲೀಸ್ ಕಚೇರಿಯಲ್ಲಿರುವ ದಾಖಲೆ ಪರಿಶೀಲಿಸಲಾಗಿದ್ದು, ರೌಡಿಪಟ್ಟಿಯಲ್ಲಿ ಯಾಸೀರ ಅಹಮದ್ ಖಾನ್ ಪಠಾಣ ಹೆಸರು ಇಲ್ಲ.
ಅಂಶುಕುಮಾರ್, ಹಾವೇರಿ ಜಿಲ್ಲಾ ಎಸ್ಪಿ (ಸೋಮವಾರ ರಾತ್ರಿ ನೀಡಿದ ಸ್ಪಷ್ಟನೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.