ಹಾವೇರಿ: ಇಲ್ಲಿಯ ತಹಶೀಲ್ದಾರ್ ಕಚೇರಿಯು ಹಲವು ವರ್ಷಗಳಿಂದ ಶಿಥಿಲ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಮಸ್ಯೆಯಾಗಿದೆ. ಕಂದಾಯ ದಾಖಲೆಗಳು ಒದ್ದೆಯಾಗುವ ಭೀತಿ ಒಂದೆಡೆಯಿದ್ದರೆ, ಮತ್ತೊಂದೆಡೆ ಬಕೆಟ್ ಇರಿಸಿ ನೀರು ಸಂಗ್ರಹಿಸಿ ಚೆಲ್ಲಬೇಕಿದೆ. ಕೊಡೆ ಹಿಡಿದು ಕೆಲಸ ಮಾಡಬೇಕಿದೆ.

‘ಪ್ರತಿ ವರ್ಷ ಮಳೆಗಾಲದಲ್ಲಿ ಕಟ್ಟಡ ಸೋರುತ್ತದೆ. ಕಚೇರಿ ಸ್ಥಳಾಂತರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಸೋರುವಕಡೆಯಲ್ಲ ಬಕೆಟ್ ಇಡುತ್ತೇವೆ. ಕಂದಾಯ ದಾಖಲೆಗಳು ಒದ್ದೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇವೆ’ ಎಂದು ನೌಕರರು ತಿಳಿಸಿದರು.

‘ಶಾಸಕ ರುದ್ರಪ್ಪ ಲಮಾಣಿ ಅವರು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ತುರ್ತು ದುರಸ್ತಿಗೆ ₹ 8 ಲಕ್ಷ ಅನುದಾನ ಕೊಡುವ ಭರವಸೆ ನೀಡಿದ್ದರು. ಆದರೆ, ನಂತರ ಯಾವ ಪ್ರಕ್ರಿಯೆಯೂ ನಡೆಯಲಿಲ್ಲ’ ಎಂದು ಅವರು ದೂರಿದರು.

‘ಹಿಂದಿನ ಜಿಲ್ಲಾಧಿಕಾರಿ ರಘುನಂದಮೂರ್ತಿ ಅವರು ತಾಡಪತ್ರಿ ಹಾಕಲು ಹೇಳಿದರೆ, ಈಗಿನ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರು ತಗಡು ಹಾಕಲು ತಿಳಿಸಿದ್ದಾರೆ. ಆದರೆ, ಶಾಶ್ವತ ಪರಿಹಾರ ಎಂಬುದು ಸಿಕ್ಕಿಲ್ಲ’ ಎಂದರು.

ಕಟ್ಟಡದ ಚಾವಣಿ ಮೇಲೆ ಸಂಪೂರ್ಣವಾಗಿ ತಗಡಿನ ಶೀಟು ಅಳವಡಿಸುವ ಕೆಲಸ ನಿರ್ಮಿತಿ ಕೇಂದ್ರದಿಂದ ಆರಂಭವಾಗಿದೆ. ನೀರು ಸೋರಿಕೆ ಸಮಸ್ಯೆಗೆ ಪರಿಹಾರ ಸಿಗಲಿದೆ
ಶಂಕರ್ ತಹಶೀಲ್ದಾರ್ ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.