ರಾಣೆಬೆನ್ನೂರು: ರಸ್ತೆ ಅತಿಕ್ರಮಣ ಮಾಡಿ ಕಟ್ಟಿದ್ದರಿಂದ ರಸ್ತೆ ಕಿರಿದಾಗಿ ವಾಹನ ಓಡಾಡಲು ಅನಾನುಕೂಲವಾಗಿದೆ. ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಇಲ್ಲಿನ ಕಾಕಿ ಗಲ್ಲಿಯ ನಿವಾಸಿಗಳು ನಗರಸಭೆ ಕಚೇರಿಗೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿದರು.

ಕಾಕಿ ಜನಸೇವಾ ಸಂಸ್ಥೆ ಶ್ರೀನಿವಾಸ ಕಾಕಿ ಮಾತನಾಡಿ, ನಗರದ ಕುರುಬಗೇರಿ ಕಾಕಿ ಗಲ್ಲಿಯ ಪ್ರವೇಶ ದ್ವಾರದಲ್ಲಿಯೇ ಅವೈಜ್ಞಾನಿಕವಾಗಿ ನಿರ್ಮಿಸಿರುವ ಸಿಡಿಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಚರಂಡಿಗಳು ಕಸದಿಂದ ತುಂಬಿವೆ. ಮಳೆಯಿಂದಾಗಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಕೆಟ್ಟ ವಾಸನೆ ಬೀರುತ್ತಿದೆ. ಮೊದಲೇ ಇಲ್ಲಿನ ರಸ್ತೆಗಳು ಕಿರಿದಾಗಿದ್ದು, ಅತಿಕ್ರಮಣ ಮಾಡಿ ಕಟ್ಟಡ ಕಟ್ಟಿದ್ದರಿಂದ ಮೊತ್ತಷ್ಟು ರಸ್ತೆ ಕಿರಿದಾಗಿ ಅಡ್ಡಾಡಲು ತೊಂದರೆಯಾಗಿದೆ ಎಂದು ದೂರಿದರು.

ರಸ್ತೆಯ ಎರಡೂ ಬದಿಗೆ ಮಹಿಳೆಯರು ಮತ್ತು ಮಕ್ಕಳು ಕೆಲವರು ಮುಸುರೆ ಸಾಮಾನು ತೊಳೆಯುವುದು. ಬಟ್ಟೆಗಳನ್ನು ಸೆಳೆಯುವುದು ಮಾಡುತ್ತಾರೆ. ಇದರಿಂದ ಗಣೇಶ ದೇವಸ್ಥಾನಕ್ಕೆ ಹೋಗುವ ಭಕ್ತರು ಗಲೀಜು ನೀರಿನ ರಸ್ತೆಯಲ್ಲಿಯೇ ನಡೆದಾಡುವಂತಾಗಿದೆ. ಇನ್ನು ಕೆಲವರು ತಮ್ಮ ಕಟ್ಟಡದ ಎರಡೂ ಕಡೆ ರಸ್ತೆಯನ್ನು ಅತಿಕ್ರಮಿಸಿ ನಗರಸಭೆಯಿಂದ ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ ಎಂದರು.

ಈ ಬಗ್ಗೆ ನಗರ ಸಭೆ ಪೌರಾಯುಕ್ತರು ಹಾಗೂ ಸಂಬಂಧಿಸಿದ ಎಂಜಿನಿಯರ್ ಹಾಗೂ ಪೊಲೀಸರ ಗಮನಕ್ಕೆ ತಂದರೂ ಇದುವರೆಗೂ ಏನೂ ಕ್ರಮ ಕೈಗೊಂಡಿಲ್ಲ ಎಂದರು.

ಜಿಲ್ಲಾಧಿಕಾರಿ ತಾವೇ ಸದ್ಯಕ್ಕೆ ಅಧ್ಯಕ್ಷರಾಗಿದ್ದರಿಂದ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.

ಅತಿಕ್ರಮಣ ತೆರವುಗೊಳಿಸಲು ನಗರಸಭೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಮನವಿಯಲ್ಲಿ ಆಗ್ರಹಿಸಿದರು.

ನಗರಸಭೆ ಪೌರಾಯುಕ್ತ ಎಫ್.ವೈ. ಇಂಗಳಗಿ ಹಾಗೂ ಕಾಕಿ ಗಲ್ಲಿಯ ಶಿವಾನಂದ ಬಗಾದಿ, ಶ್ರೀನಿವಾಸ ಸುರಹೊನ್ನೆ, ರಾಜು ಬೂದನೂರ, ನಿತ್ಯಾನಂದ ಕುಂದಪುರ, ಶಿವಕುಮಾರ ಜಾಧವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.