ಶಿಗ್ಗಾವಿ: ಮನೆ ಹಿತ್ತಲಿನಲ್ಲಿ ಚೀಲಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಅಂದಾಜು ₹1.34 ಲಕ್ಷ ಮೊತ್ತದ 26ಕೆ.ಜಿ 920ಗ್ರಾಂ ತೂಕದ ಶ್ರೀಗಂಧದ ತುಂಡುಗಳನ್ನು ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಬಂಕಾಪುರ ಪುರಸಭೆ ಸದಸ್ಯ ರಮೇಶ ಪಾಂಡುರಂಗ ಸಿದ್ದುನವರ (38) ಎಂದು ಗುರುತಿಸಲಾಗಿದೆ.

ಹುಬ್ಬಳ್ಳಿ ವಿಶೇಷ ಅರಣ್ಯ ಸಂಚಾರಿದಳದ ಸಿ.ಐ.ಡಿ. ಪ್ರಸಾದ ಪಣೀಕರ ನೇತೃತ್ವದ ತಂಡ ತನಿಖೆ ನಡೆಸಿದೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ ₹ 520 ವಶ

ರಾಣೆಬೆನ್ನೂರು: ಇಲ್ಲಿನ ಸಿದ್ದೇಶ್ವರ ನಗರದ ಶೆಟ್ಟರ್ ಪೆಟ್ರೋಲ್ ಬಂಕ್ ಬಳಿ ನ.2 ರಂದು ಜೂಜಾಟ ಆಡುತ್ತಿದ್ದ ವೇಳೆ ನಗರ ಠಾಣೆ ಪಿಎಸ್ಐ ಗಡ್ಡೆಪ್ಪ ಜುಂಜಟಗಿ ಹಾಗೂ ಅವರ ತಂಡ ದಾಳಿ ನಡೆಸಿ ಜೂಜುಕೋರರಿಂದ ₹ 520 ವಶಪಡಿಸಿಕೊಂಡಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಳು ಅಕ್ರಮ ಸಾಗಾಟ: ದೂರು ದಾಖಲು

ರಾಣೆಬೆನ್ನೂರು: ತುಂಗಭದ್ರಾ ನದಿ ತೀರ ಪ್ರದೇಶದಿಂದ ಲಾರಿಯಲ್ಲಿ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಗ್ರಾಮೀಣ ಪೊಲೀಸರು ದಾಳಿ ನಡೆಸಿ, ಲಾರಿ ಮತ್ತು ಮರಳನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಕುದರಿಹಾಳ ಗ್ರಾಮದ ಮಂಜುನಾಥ ಗೋವಿಂದಪ್ಪ ಅಡವಿನಾಯ್ಕರ್ ಎಂಬಾತನ ವಿರುದ್ಧ ಗ್ರಾಮೀಣ ಪಿಎಸ್ಐ ಜೆ.ಎನ್. ಹೆಳವರ ದೂರು ದಾಖಲಿಸಿಕೊಂಡಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.