‘ಕಾರು ಬೆನ್ನತ್ತಿ ಆರೋಪಿ ಬಂಧನ’
ಕುಸನೂರು ರಸ್ತೆಯಲ್ಲಿ ನವೆಂಬರ್ ತಡರಾತ್ರಿ ಬೈಕ್ಗೆ ಡಿಕ್ಕಿ ಹೊಡೆದ ಕಾರು ಚಾಲಕ ವೇಗವಾಗಿ ಹೋಗುತ್ತಿದ್ದರು. ಭಂಕೂರ ಕ್ರಾಸ್ನಲ್ಲಿ ನಿಂತಿದ್ದ ಹೈವೇ ಪೆಟ್ರೋಲಿಂಗ್ ಸಿಬ್ಬಂದಿ ಅನುಮಾನಾಸ್ಪದವಾಗಿ ಹೋಗುತ್ತಿದ್ದ ಕಾರು ಬೆನ್ನತ್ತಿ ಆರೋಪಿಯನ್ನು ಬಂಧಿಸುವಲ್ಲಿ ನೆರವಾಗಿದ್ದಾರೆ’ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು. ‘ವೇಗವಾಗಿ ಬರುತ್ತಿದ್ದ ಕಾರು ಚಾಲಕನಿಗೆ ಭಂಕೂರ ಕ್ರಾಸ್ನಲ್ಲಿ ಕಾಳಗಿ ಠಾಣೆಯ ಎಎಸ್ಐ ಎಫ್.ಎ ಖಾನ್ ಹಾಗೂ ಕಾನ್ಸ್ಟೆಬಲ್ ಶಿವಾಜಿ ಅವರು ನಿಲ್ಲುವಂತೆ ಕೈ ಮಾಡಿದರು. ಕೈ ಸನ್ನೆಯನ್ನು ಲೆಕ್ಕಿಸದೆ ಅದೇ ವೇಗದಲ್ಲಿ ಕಾರು ಚಲಾಯಿಸಿದನು. ಅನುಮಾನದಿಂದ ಕಾರು ಚೇಸ್ ಮಾಡಿ ವಾಡಿ ಸಮೀಪದ ಶಂಕರವಾಡಿ ರಸ್ತೆಯಲ್ಲಿ ಕಾರು ಚಾಲಕನನ್ನು ಹಿಡಿದರು. ತಕ್ಷಣವೇ ಕಂಟ್ರೋಲ್ ರೂಂಗೆ ಕರೆ ಮಾಡಿದಾಗ ಬೈಕ್ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಗೊತ್ತಾಗಿದೆ’ ಎಂದರು.