ವಕ್ಫ್ ಸಚಿವರು ಮತ್ತು ಮೇಲಧಿಕಾರಿಗಳ ಆದೇಶದಂತೆ ರೈತರಿಗೆ ನೋಟಿಸ್ ನೀಡಿ ವಿಚಾರಣೆ ಕೈಗೊಳ್ಳಲಾಗಿತ್ತು. ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ, ವಕ್ಫ್ ಸಚಿವರು ಹೇಳಿದ್ದರಿಂದ ನೋಟಿಸ್ ನೀಡುವ, ವಿಚಾರಣೆ ಮಾಡುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ
–ನಾಗಯ್ಯ ಹಿರೇಮಠ, ತಹಶೀಲ್ದಾರ್, ಚಿತ್ತಾಪುರ
ಅನೇಕ ರೈತರು ಜಮೀನು ಖರೀದಿಸಿ ತಮ್ಮ ಹೆಸರಿಗೆ ಹಕ್ಕು ಬದಲಾಯಿಸಿಕೊಂಡ ನಂತರ ನೋಟಿಸ್ ನೀಡದೆ, ಯಾವುದೇ ರೀತಿಯ ಮಾಹಿತಿ ನೀಡದೆ ಪಹಣಿ ಪತ್ರಿಕೆಯಲ್ಲಿ ವಕ್ಫ್ ಮಂಡಳಿ ಹೆಸರು ನಮೂದಿಸಿದ್ದು ನಿಯಮ ಬಾಹಿರ
–ಮಲ್ಲಿಕಾರ್ಜುನ ಎಮ್ಮೆನೊರ್, ಬಿಜೆಪಿ ಮುಖಂಡ
ಹಳೆ ಪಹಣಿ ಪತ್ರಿಕೆಗಳನ್ನು ನೋಡಿ 2014ರಲ್ಲಿ ಮೂರೂವರೆ ಎಕರೆ ಜಮೀನು ಖರೀದಿಸಿದ್ದೇವೆ. ಆಗ ವಕ್ಫ್ ಮಂಡಳಿ ಹೆಸರು ಇರಲಿಲ್ಲ. ಈಗ ವಕ್ಫ್ ಮಂಡಳಿ ಆಸ್ತಿ ಎಂದು ನಮಗೆ ನೋಟಿಸ್ ನೀಡಿದ್ದಾರೆ. ಸರ್ಕಾರ ನಮಗೆ ನ್ಯಾಯ ಒದಗಿಸಬೇಕು