ಸೇಡಂ: ತಾಲ್ಲೂಕಿನ ಮಳಖೇಡ ಗ್ರಾಮದ ಉತ್ತರಾದಿ ಮಠದಲ್ಲಿ ಬುಧವಾರ ಜಯತೀರ್ಥರ ಆರಾಧನಾ ಮಹೋತ್ಸವದ ಪೂರ್ವರಾಧನೆ ಸಂಭ್ರಮದಿಂದ ಜರುಗಿತು.

ಬೆಂಗಳೂರು ಉತ್ತರಾದಿ ಮಠದ ಪ್ರಧಾನ ಆಡಳಿತಾಧಿಕಾರಿ ವಿದ್ಯಾಧಿಶಾಚಾರ್ಯರು ಅಶ್ವ ರಥೋತ್ಸವಕ್ಕೆ ಪುಷ್ಪವೃಷ್ಟಿ ಮಾಡಿ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥವನ್ನು ಎಳೆಯುತ್ತಾ, ಭಕ್ತಿಗೀತೆ ಹಾಡುತ್ತಾ ಭಕ್ತಿ ಸಮರ್ಪಿಸಿದರು.

ವಿವಿಧೆಡೆಯಿಂದ ಆಗಮಿಸಿ ಭಕ್ತರು ಕಾಗಿಣಾ ನದಿಯಲ್ಲಿ ಸ್ನಾನ ಮಾಡಿ, ದರ್ಶನ ಪಡೆಯುತ್ತಿರುವುದು ಕಂಡುಬಂತು. ಭಕ್ತರ ಅನುಕೂಲಕ್ಕಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.

ಮಠದ ವ್ಯವಸ್ಥಾಪಕ ವೆಂಕಣ್ಣಾಚಾರ್ಯ, ಸುಧೀಂದ್ರ ಆಚಾರ್ಯ, ಸಂಘರ್ಷಣಾಚಾರ್ಯ ಉಪಸ್ಥಿತರಿದ್ದರು. ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಜುಲೈ 25 ರಂದು ಮಧ್ಯಾರಾಧನೆ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.