ಚಿಂಚೋಳಿ: ವೃದ್ಧೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಮಾಡಿ ನಗದು ಮತ್ತು ಚಿನ್ನ ದೋಚಿ ಪರಾರಿಯಾದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಭೋವಿ ಸಮಾಜ ಒತ್ತಾಯಿಸಿದೆ.

ಸಮಾಜದ ಜಿಲ್ಲಾ ಅಧ್ಯಕ್ಷ ಗುಂಡಪ್ಪ ಸಾಳುಂಕೆ, ತಾಲ್ಲೂಕು ಅಧ್ಯಕ್ಷ ಜಗನ್ನಾಥ ರಾಜಾಪುರ ನೇತೃತ್ವದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಸೌಧದ ಎದುರು ಪ್ರತಿಭಟನಾ ಧರಣಿ ನಡೆಸಿ ಒತ್ತಾಯಿಸಿದರು.

‘ಈ ಘಟನೆ ಮಾನವ ಕುಲಕ್ಕೆ ಕಳಂಕ ತರುವಂತಹದ್ದಾಗಿದೆ. ಯಾವುದೇ ಕಾರಣಕ್ಕೂ ಆರೋಪಿಯನ್ನು ಬಿಡಬಾರದು. ತಕ್ಷಣ ಬಂಧಿಸಿ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸರ್ಕಾರ ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರ ನೀಡಬೇಕು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ, ಪುರಸಭೆ ಸದಸ್ಯ ಜಗನ್ನಾಥ ಗುತ್ತೇದಾರ, ಮುಖಂಡ ವಿಠಲನೆಲೋಗಿ, ವಿಠಲ ಕುಸಾಳೆ, ಹಣಮಂತ ಭೋವಿ ಗಾರಂಪಳ್ಳಿ, ಬಸವರಾಜ ವಾಡಿ, ಶ್ರೀಕಾಂತ ಪಿಟ್ಟಲ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೇಂಗಟಿ, ಪ್ರಧಾನ ಕಾರ್ಯದರ್ಶಿ ರಾಮರೆಡ್ಡಿ ಪಾಟೀಲ, ಗಿರಿರಾಜ ನಾಟಿಕಾರ, ನಾಗೇಶ ಹಿರೇವಡ್ಡರ, ಗೋಪಾಲ ಹಿರೇವಡ್ಡರ, ಹಣಮಂತ ಪೋಲಕಪಳ್ಳಿ, ಶ್ರೀಹರಿ ಕಾಟಾಪುರ, ರೇವಣಸಿದ್ದ ಮೋಘಾ, ಮಾರುತಿ ಗಂಜಗಿರಿ, ಮಾರುತಿ ಪಿಟ್ಟಲ, ಶಂಕರ ಕುಸಾಳೆ, ಗೋಪಾಲ ಚಂದ್ರಂಪಳ್ಳಿ, ಲಕ್ಷ್ಮೀಕಾಂತ ಚಂದ್ರಂಪಳ್ಳಿ ಮೊದಲಾದವರು ಇದ್ದರು. ತಹಶೀಲ್ದಾರ ಮೂಲಕ ಮುಖ್ಯಂತ್ರಿಗಳಿಗೆ ಮನವಿ ಸಲ್ಲಿಸಿದರು.

ಡಿವೈಎಸ್ಪಿ ಸಂಗಮನಾಥ ಹಿರೇಮಠ ಹಾಗೂ ಪೊಲೀಸರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.