ಕಲಬುರ್ಗಿ: ಏರ್ ಇಂಡಿಯಾದ ಅಂಗ ಸಂಸ್ಥೆ ಅಲಯನ್ಸ್ ಏರ್ ಮಾರ್ಚ್ 25ರಿಂದ ಕಲಬುರ್ಗಿ–ಮುಂಬೈ ಮಧ್ಯೆ ವಾರದ ಎಲ್ಲ ದಿನವೂ ನೇರ ವಿಮಾನ ಸಂಚಾರ ಆರಂಭಿಸಲಿದೆ.

ಇದರಿಂದಾಗಿ ಕಲ್ಯಾಣ ಕರ್ನಾಟಕವನ್ನು ದೇಶದ ವಾಣಿಜ್ಯ ರಾಜಧಾನಿಯೊಂದಿಗೆ ಸಂಪರ್ಕಿಸಬೇಕೆನ್ನುವ ಈ ಭಾಗದ ಉದ್ಯಮಿಗಳ ಬೇಡಿಕೆ ಈಡೇರಿದಂತಾಗಿದೆ. ಇದೇ 18ರಿಂದ ಬುಕಿಂಗ್ ಆರಂಭಗೊಳ್ಳಲಿದೆ.

ಮಾ 25ರಿಂದ ನಿತ್ಯ ಬೆಳಿಗ್ಗೆ 7.20ಕ್ಕೆ ಮುಂಬೈನಿಂದ ಹೊರಡುವ 70 ಸೀಟುಗಳ ವಿಮಾನ (9I 665) ಬೆಳಿಗ್ಗೆ 9ಕ್ಕೆ ಕಲಬುರ್ಗಿಗೆ ಬಂದಿಳಿಯಲಿದೆ. ಬೆಳಿಗ್ಗೆ 9.25ಕ್ಕೆ ಕಲಬುರ್ಗಿಯಿಂದ ಹೊರಡುವ ವಿಮಾನ (9I 666) ಬೆಳಿಗ್ಗೆ 10.55ಕ್ಕೆ ಮುಂಬೈ ತಲುಪಲಿದೆ.

ಬುಕಿಂಗ್ ಹಾಗೂ ಇತರ ವಿವರಗಳಿಗಾಗಿ www.airindia.in ವೆಬ್‌ಸೈಟ್ ಸಂಪರ್ಕಿಸಬಹುದು ಎಂದು ಅಲಯನ್ಸ್ ಏರ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಉಪೇಂದ್ರ ಸಿಂಗ್ ತಿಳಿಸಿದ್ದಾರೆ.

ಅಲಯನ್ಸ್ ಏರ್ ಈಗಾಗಲೇ ಕಲಬುರ್ಗಿ –ಬೆಂಗಳೂರು ಮಧ್ಯೆ ವಿಮಾನಯಾನ ಸೇವೆ ಒದಗಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.