ಕಲಬುರಗಿ: ಪೊಲೀಸ್ ಇಲಾಖೆಯ ಈಶಾನ್ಯ ವಲಯ ವಿಭಾಗದಲ್ಲಿ ಆಂತರಿಕ ಭದ್ರತಾ ವಿಭಾಗದ ಡಿವೈಎಸ್ಪಿಯಾಗಿರುವ ಕೆ. ಬಸವರಾಜ ಅವರನ್ನು ಕೇಂದ್ರ ಗೃಹ ಸಚಿವರ ದಕ್ಷತಾ ಪದಕಕ್ಕೆ ಆಯ್ಕೆ ಮಾಡಲಾಗಿದೆ.

1999ರಲ್ಲಿ ಪಿಎಸ್ಐ ಹುದ್ದೆಯ ಮೂಲಕ ಇಲಾಖೆಗೆ ಸೇರ್ಪಡೆಯಾದ ಬಸವರಾಜ ಅವರು 2007ರಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗೆ ಮುಂಬಡ್ತಿ ಪಡೆದರು. ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಸಿಪಿಐ ಆಗಿ ಕಾರ್ಯನಿರ್ವಹಿಸಿದ ಬಳಿಕ 2015ರ ನವೆಂಬರ್ನಲ್ಲಿ ಡಿವೈಎಸ್ಪಿ ಹುದ್ದೆಗೆ ಬಡ್ತಿ ಪಡೆದು ಕಲಬುರಗಿ ರೈಲ್ವೆ ಉಪವಿಭಾಗ, ಶಹಾಬಾದ್ ಉಪವಿಭಾಗ, ಚಿಂಚೋಳಿ ಉಪವಿಭಾಗ, ಬಳ್ಳಾರಿ ಉಪವಿಭಾಗ ಹಾಗೂ ಈಶಾನ್ಯ ವಲಯದ ಐಜಿಪಿ ಕಚೇರಿಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ತನಿಖಾ ಕೌಶಲ್ಯ, ವೈಜ್ಞಾನಿಕ ಸಾಧನಗಳ ಬಳಕೆ, ವಿಧಿ ವಿಜ್ಞಾನ ಉಪಕರಣಗಳ ಸಮರ್ಪಕ ಬಳಕೆ ಮಾಡುವ ಮೂಲಕ ಕೊಲೆ ಪ್ರಕರಣ, ಕಳ್ಳತನ ಪ್ರಕರಣ ಹಾಗೂ ಸಂತ್ರಸ್ತರನ್ನು ರಕ್ಷಣೆ ಮಾಡುವ ಮೂಲಕ ಸಾಧನೆ ಮಾಡಿದ್ದರು. 2017ರಲ್ಲಿ ಕುಖ್ಯಾತ ದರೋಡೆಕೋರರನ್ನು ಬಂಧಿಸಿ ₹ 30,15,998 ಮೌಲ್ಯದ 1283 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು. ಒಟ್ಟಾರೆ 102 ಸ್ವತ್ತಿನ ಕಳ್ಳತನ ಪ್ರಕರಣವನ್ನು ಭೇದಿಸಿದ್ದರು.

ಬಸವರಾಜ ಅವರು ಇಲ್ಲಿಯವರೆಗೆ 8 ನಗದು ಬಹುಮಾನ, 33 ಪ್ರಶಂಸೆ, ಮೆಚ್ಚುಗೆ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.