ಕಲಬುರಗಿ: ನಗರದ ಕೋಟೆಯೊಳಗಿರುವ ಬಹಮನಿ ಸುಲ್ತಾನರ ಕಾಲದ ಜಾಮಿಯಾ ಮಸೀದಿ ಮಳೆ ಬಂದಾಗ ಸೋರುತ್ತಿದೆ. ಇದರಿಂದ ಕೆಲ ಕಮಾನುಗಳ ಮೇಲ್ಭಾಗ ಪಾಚಿಗಟ್ಟಿವೆ. ಕೆಲವೆಡೆ ಗೋಡೆಯ ಗಚ್ಚು ಕಿತ್ತು ಬೀಳುತ್ತಿದೆ.

1367ರಲ್ಲಿ ಪರ್ಷಿಯನ್ ವಾಸ್ತುಶಿಲ್ಪ ಶೈಲಿಯಲ್ಲಿ ಜಾಮಿಯಾ ಮಸೀದಿಯನ್ನು ನಿರ್ಮಿಸಲಾಗಿದೆ. ಒಂದನೇ ಮೊಹಮ್ಮದ್ ಷಾ ಇದನ್ನು ನಿರ್ಮಿಸಿದ್ದು, ಪರ್ಷಿಯನ್ ಖ್ಯಾತ ವಾಸ್ತುಶಿಲ್ಪಕಾರ ರಫಿ ಖಾಜ್ವಿನ್ ಇದರ ವಿನ್ಯಾಸಕಾರ. ದಕ್ಷಿಣ ಭಾರತದಲ್ಲಿ ಮೊದಲ ಮಸೀದಿ ಎಂಬ ಹೆಗ್ಗಳಿಕೆ ಕೂಡ ಇದಕ್ಕಿದೆ. ಇದರಲ್ಲಿ ಒಂದು ಬಾರಿಗೆ 5,000 ಜನ ಪ್ರಾರ್ಥನೆ ಮಾಡಬಹುದು.

‘10–12 ವರ್ಷಗಳ ಹಿಂದೆ ಗುಮ್ಮಟಗಳ ಒಳಭಾಗ ದುರಸ್ತಿ ಮಾಡಲಾಗಿತ್ತು. ಇಷ್ಟೊಂದು ಪ್ರಮಾಣದಲ್ಲಿ ಮಳೆ ನೀರು ಸೋರಿಕೆಯಾಗಿರುವುದು ಇದೇ ಮೊದಲು. ಕೆಲವೆಡೆ ಪಾಚಿಗಟ್ಟಿ ಹಸಿರುಬಣ್ಣಕ್ಕೆ ತಿರುಗಿದೆ’ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದರು.

‘ಬಾಲ್ಯದ ದಿನಗಳನ್ನು ಜಾಮಿಯಾ ಮಸೀದಿಯಲ್ಲಿ ಆಟ ಆಡುತ್ತಾ ಕಳೆದಿದ್ದೇನೆ. ಪ್ರತಿದಿನ ನೂರಾರು ಪ್ರವಾಸಿಗರು ಬರುತ್ತಾರೆ. ಐತಿಹಾಸಿಕವಾದ ಈ ತಾಣವನ್ನು ಅಧಿಕಾರಿಗಳು ದುರಸ್ತಿ ಕೈಗೊಳ್ಳುವ ಮೂಲಕ ಸಂರಕ್ಷಣೆಗೆ ಮುಂದಾಗಬೇಕು’ ಎಂದು ನಗರದ ನಿವಾಸಿ ಅಬ್ದುಲ್ ಗಫೂರ್ ಸಗ್ರಿ ಟೇಲರ್ ಒತ್ತಾಯಿಸುತ್ತಾರೆ.

‘ಜಾಮಿಯಾ ಮಸೀದಿಯಲ್ಲಿ ಪ್ರಶಾಂತವಾದ ವಾತಾವರಣ ಇದೆ. ಬೇಸಿಗೆಯಲ್ಲೂ ತಂಪಾದ ಗಾಳಿ ಬೀಸುತ್ತದೆ. ಹಾಗಾಗಿ, ಮುಸ್ಲಿಮರಷ್ಟೇ ಅಲ್ಲದೇ ಬೇರೆಬೇರೆ ಸಮುದಾಯಗಳ ವಿದ್ಯಾರ್ಥಿಗಳು ಕೂಡ ಇಲ್ಲಿ ಓದಲು ಬರುತ್ತಾರೆ’ ಎಂದು ಅವರು ಹೇಳುತ್ತಾರೆ.

ಕಾಣದ ಫಲಕ: ಜಾಮಿಯಾ ಮಸೀದಿ ಮುಂಭಾಗದಲ್ಲಿ ಅಳವಡಿಸಿದ್ದ ಇತಿಹಾಸ ಸಾರುವ ಫಲಕ ಕಾಣಿಸಲಿಲ್ಲ. ‘ಸಂರಕ್ಷಿತ ಸ್ಮಾರಕ’ ಹಾಳು ಮಾಡಬೇಡಿ ಎಂಬ ಸೂಚನಾ ಫಲಕಗಳು ಮಾತ್ರ ಕಂಡುಬರುತ್ತಿವೆ. ಇವುಗಳ ಜೊತೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣ (ಎಎಸ್ಐ) ಅಧಿಕಾರಿಗಳು ಇತಿಹಾಸದ ಫಲಕ ಕೂಡ ಅಳವಡಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗುಜರಾತ್ನಿಂದ ಬಂದಿದ್ದ ಕುಟುಂಬ ಮನವಿ ಮಾಡಿತು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಭಾರತೀಯ ಸರ್ವೇಕ್ಷಣಾ ಇಲಾಖೆಯ ಸಹಾಯಕ ಸರ್ವೇಕ್ಷಣಾಧಿಕಾರಿ ವಿನಾಯಕ ಶಿರಹಟ್ಟಿ, ‘ಜಾಮಿಯಾ ಮಸೀದಿ ಬಗ್ಗೆ ಇತಿಹಾಸ ಸಾರುವ ಫಲಕವನ್ನು ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಮಾಡಿಸಲಾಗುತ್ತಿದ್ದು, ಶೀಘ್ರ ಅಳವಡಿಸಲಾಗುವುದು’ ಎಂದರು.

‘ಜಾಮಿಯಾ ಮಸೀದಿಯಲ್ಲಿ ನೆಲದಿಂದ 3–4 ಅಡಿವರೆಗೆ ಪ್ಲಾಸ್ಟಿಂಗ್ ಉದುರಿಬಿದ್ದಿತ್ತು. ಕಳೆದ ವರ್ಷ ಗಾರೆ, ಗಚ್ಚಿನಿಂದ ಪ್ಲಾಸ್ಟರ್ ಮಾಡಲಾಗಿದೆ. ಈ ವರ್ಷ ಆರ್ಥಿಕ ಸಮಸ್ಯೆಯಾಗಿದ್ದು, ಇನ್ನೂ ಅನುದಾನ ಬಂದಿಲ್ಲ’ ಎಂದು ಮಾಹಿತಿ ನೀಡಿದರು.

ಜಾಮಿಯಾ ಮಸೀದಿ ಮೇಲ್ಗಡೆ ಮಳೆ ನೀರು ಸೋರದಂತೆ ದುರಸ್ತಿಗಾಗಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ತಕ್ಷಣ ಕಾಮಗಾರಿ ಕೈಗೊಳ್ಳಲಾಗುವುದು
ವಿನಾಯಕ ಶಿರಹಟ್ಟಿ ಸಹಾಯಕ ಸರ್ವೇಕ್ಷಣಾಧಿಕಾರಿ ಎಎಸ್ಐ

ಜಾಮಿಯಾ ಮಸೀದಿ ಏಷ್ಯಾದಲ್ಲಿಯೇ ಅತಿ ದೊಡ್ಡದು. ದುರಸ್ತಿ ಮಾಡದಿದ್ದರೆ ಇಡೀ ಕಟ್ಟಡ ಹಾಳಾಗುವ ಸಂಭವವಿದ್ದು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು
ರೆಹಮಾನ್ ಪಟೇಲ್ ಸಂಶೋಧಕ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.