ಯಡ್ರಾಮಿ: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸಕಾಲಕ್ಕೆ ಮಳೆ ಕೈಕೊಟ್ಟಿದ್ದರಿಂದ ಕೆಲವು ರೈತರು ಸಂಕಷ್ಟ ಎದುರಿಸಿದರೆ ಇನ್ನೂ ಕೆಲ ರೈತರು ಕಾಲುವೆ ನೀರು ನಂಬಿಕೊಂಡು ಕೃಷಿ ಮಾಡುತ್ತಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಅಂತಹವರ ಸಾಲಿನಲ್ಲಿ ಯಡ್ರಾಮಿ ಪಟ್ಟಣದ ರೈತರೊಬ್ಬರು ಎರಡೂವರೆ ಎಕರೆಯಲ್ಲಿ ಲಕ್ಷಗಳ ಆದಾಯ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಯಡ್ರಾಮಿ ಪಟ್ಟಣದ ಚನ್ನಬಸಪ್ಪ ನಿಂಗಣ್ಣ ಅವರು ಎರಡೂವರೆ ಎಕರೆಯಲ್ಲಿ ಬದನೆಕಾಯಿ, ಮೆಣಸಿನಕಾಯಿ, ಟೊಮೆಟೋ, ಹತ್ತಿ, ಹೆಬ್ಬೆವು, ಮಾಗಡಿ ಬೆಳೆ ಬೆಳೆದಿದ್ದು ಇದಕ್ಕೆ 90 ಸಾವಿರ ಖರ್ಚು ಮಾಡಿದ್ದಾರೆ. ಈಗ ಅವರು ಆ ಬೆಳೆಗಳ ಒಟ್ಟು ಆದಾಯ ಸುಮಾರು ₹ ಲಕ್ಷದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಜಮೀನನಲ್ಲಿ ಸ್ವಂತ ಬಾವಿ ಇದ್ದರೂ ಅದಕ್ಕೆ ವಿದ್ಯುತ್ ಸಂಪರ್ಕ ಇಲ್ಲದೆ ಇರುವುದರಿಂದ ಡೀಸೆಲ್ ಎಂಜಿನ್ ಮೂಲಕ ಹೊಲಕ್ಕೆ ನೀರಾಯಿಸುತ್ತಾರೆ. ಯಡ್ರಾಮಿ ಕೆಇಬಿಗೆ ಅನೇಕ ಬಾರಿ ಮನವಿ ನೀಡಿದ್ದರೂ ಅವರು ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ಡೀಸೆಲ್‌ಗೆ ಹಣ ಸುರಿಯುವಂತಾಗಿದೆ. ಅವರು ವಿದ್ಯುತ್ ಕಲ್ಪಿಸಿದರೆ ತುಂಬಾ ಅನುಕೂಲವಾಗುತ್ತದೆ ಎನ್ನುತ್ತಾರೆ ಈ ರೈತ.

ಯಡ್ರಾಮಿ ವಿದ್ಯುತ್ ಇಲಾಖೆಯ ಎಇಇ ಮತ್ತು ಜೆಇ ಅವರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ಕಲಬುರಗಿ ವಿದ್ಯುತ್ ಇಲಾಖೆಗೆ ಕರೆ ಮಾಡಿದಾಗ ಅಲ್ಲಿನ ಸಿಬ್ಬಂದಿ ರೈತರ ನಂಬರ್ ತೆಗೆದುಕೊಂಡು ಅವರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.

ಜೇರಟಗಿಯಿಂದ ಸಸಿ ತರಿಸಿಕೊಳ್ಳಲಾಗಿದೆ. ಗೊಬ್ಬರ, ಕಳೆನಾಶಕ, ಕುಂಟೆ ಹೊಡೆಯುವುದು, ಆಳು ಹಿಡಿದು ಒಟ್ಟು 90 ಸಾವಿರ ಖರ್ಚು ಮಾಡಿದ್ದೇನೆ. ಹೆಚ್ಚು ಆದಾಯದ ನಿರೀಕ್ಷೆ ಇದೆ. ಕಳೆದ ವರ್ಷ ಹತ್ತಿ, ಜೋಳ ಹಾಕಿದ್ದರೂ ಅಷ್ಟು ಲಾಭದಾಯಕ ಕಂಡು ಬರದ ಕಾರಣ ಈ ವರ್ಷ ಬೆಳೆ ಬದಲಿಸಿದ್ದೇನೆ ಎನ್ನುತ್ತಾರೆ ರೈತ ಚನ್ನಬಸಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.