ಕಲಬುರಗಿ: ‘ವಕ್ಫ್ ಮಂಡಳಿಯು ರೈತರ ಜಮೀನು, ಮಠ–ಮಂದಿರಗಳ ಆಸ್ತಿಯನ್ನು ತನ್ನದು ಎಂದು ನಮೂದು ಮಾಡಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ವಕ್ಫ್ ಮಂಡಳಿ ತನ್ನದು ಎನ್ನುತ್ತಿರುವ ಆಸ್ತಿಯನ್ನು ಹಿಂದಕೆ ಕೊಡದೆ ಇದ್ದರೆ ಸ್ವಾಮೀಜಿಗಳ ನೇತೃತ್ವದಲ್ಲಿ ರಕ್ತಕ್ರಾಂತಿ ಆದೀತು’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು.
.ವಕ್ಫ್ ವಿರುದ್ಧ ರಾಜಕೀಯ ಪ್ರೇರಿತ ಆರೋಪ: ಮುಷ್ತಾಕ್ ಹೆನ್ನಾಬೈಲ್.
ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರು ಜಮೀನು, ಮಠ–ಮಂದಿರಗಳಿಗೆ ಸೇರಿದ ಆಸ್ತಿಗಳು ಏಕಾಏಕಿ ಬದಲಾಗುತ್ತದೆ ಎಂದರೆ ಏನರ್ಥ? ರಾಜ್ಯದ ಎಲ್ಲ ಸಮುದಾಯಗಳ ಸ್ವಾಮೀಜಿಗಳು ರೈತರ ಪರವಾಗಿ ಹೋರಾಟಕ್ಕೆ ಇಳಿದಿದ್ದಾರೆ. ಆದಷ್ಟು ಬೇಗ ವಕ್ಫ್ ಮಂಡಳಿ ಹಾಗೂ ವಕ್ಫ್ ಕಾಯ್ದೆಯನ್ನು ರದ್ದು ಮಾಡಬೇಕು’ ಎಂದರು.

‘ಮುಸ್ಲಿಮರ ಬಗ್ಗೆ ಪ್ರೀತಿ ಇರಿಸಿಕೊಂಡ ಸಚಿವರು ತಮ್ಮ ಆಸ್ತಿಯನ್ನು ಮಾರಾಟ ಮಾಡಿ ದಾನ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ರೈತರು ಜಮೀನು, ದೇವಸ್ಥಾನಗಳ ಆಸ್ತಿ ಕೊಡಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಸಾಧು–ಸಂತರು ಒಟ್ಟಾಗಿ ಹೋಗುತ್ತಿರುವುದನ್ನು ರಾಜ್ಯ ಸರ್ಕಾರ ಗಮನಿಸಬೇಕು. ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದರು.
.ಪಹಣಿಯಲ್ಲಿ ವಕ್ಫ್ ಹೆಸರಿಗೆ ಆಕ್ರೋಶ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರೈತ ಸಂಘ.
‘ವಕ್ಫ್ ಆಸ್ತಿಯನ್ನು ಮಲ್ಲಿಕಾರ್ಜುನ ಖರ್ಗೆ, ಖಮರುಲ್ ಇಸ್ಲಾಂ, ಸಿ.ಎಂ. ಇಬ್ರಾಹಿಂ, ರಹೀಂ ಖಾನ್ ಸೇರಿದಂತೆ ಹಲವು ಹಿರಿಯ ರಾಜಕಾರಣಿಗಳು ಲೂಟಿ ಮಾಡಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆ ಪರಿಶೀಲನೆಯ ಸಂಸತ್ತಿನ ಜಂಟಿ ಸದನ ಸಮಿತಿಯ ಮುಂದೆ ಅನ್ವರ್ ಮಾಣಿಪ್ಪಾಡಿ ವರದಿ ಇರಿಸಿ ಚರ್ಚೆ ಮಾಡಿದರೆ ಎಲ್ಲರದ್ದೂ ಹೊರಗಡೆ ಬರುತ್ತದೆ’ ಎಂದರು.

‘ಸಿಎಂ ಸಿದ್ದರಾಮಯ್ಯ ಅವರು ಕೇಸರಿ, ಕುಂಕುಮ ಕಂಡರೆ ಮೈಮೇಲೆ ಭೂತ ಬಂದಂತೆ ಆಡುತ್ತಿದ್ದರು. ಈಗ ಚಾಮುಂಡಿ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸಿ ಕುಂಕುಮ ಹಚ್ಚಿಕೊಳ್ಳುತ್ತಿದ್ದಾರೆ. ದೇವರ ಮೇಲೆ ಗೌರವ, ನಂಬಿಕೆ ಇದ್ದರೇ ವಕ್ಫ್ ಆಸ್ತಿಯನ್ನು ಹಿಂದೂಗಳಿಗೆ ಕೊಡಬೇಕು’ ಎಂದು ಹೇಳಿದರು.
.1974ರ ಗೆಜೆಟ್ ರದ್ದು ಪಡಿಸಲು ಆಗ್ರಹ: ಬಿಜೆಪಿಯಿಂದ ವಕ್ಫ್ ವಿರುದ್ಧ ಪ್ರತಿಭಟನೆ.
ಸಿದ್ದರಾಮಯ್ಯ ಸರ್ಕಾರ ಹೈಕಮಾಂಡ್ಗೆ ಎಟಿಎಂ: ‘ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಕಾಂಗ್ರೆಸ್ನ ಹೈಕಮಾಂಡ್ ಪಾಲಿಗೆ ಎಟಿಎಂ ಇದ್ದಂತೆ. ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆದರೆ ಎಟಿಎಂ ಕೈಬಿಟ್ಟು ಹೋಗುವ ಭಯ ಕಾಡುತ್ತಿದೆ. ಹೀಗಾಗಿ, ರಾಜೀನಾಮೆ ಪಡೆಯದೆ ಕಳ್ಳಾಟ ಆಡುತ್ತಿದ್ದಾರೆ’ ಎಂದು ಟೀಕಿಸಿದರು
.ತ್ರಿಮೂರ್ತಿ ಶಿವಾಚಾರ್ಯರ ಪಾದಯಾತ್ರೆ: ಮಠದ ಪಹಣಿಯಿಂದ ವಕ್ಫ್ ಹೆಸರು ಡಿಲೀಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.