ಚಿಂಚೋಳಿ: ಬೀದರ್ ಜಿಲ್ಲೆಯ ಚಿಟ್ಟಗುಪ್ಪ ತಾಲ್ಲೂಕಿನ ನಿರ್ಣಾ–ವಾಡಿ ಗ್ರಾಮದ ರೈತ ಮಲ್ಲಿಕಾರ್ಜುನ ರಾಜಗಿರಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದನ್ನು ಖಂಡಿಸಿ ಕರ್ನಾಟಕ ಪ್ರದೇಶ(ಗೊಂಡ) ಕುರುಬರ ಸಂಘದ ಆಶ್ರಯದಲ್ಲಿ ಸಮಾಜದ ಪ್ರಮುಖರು ಶುಕ್ರವಾರ ಪ್ರತಿಭಟನೆ ನಡೆಸಿದರು. ರೈತನ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರ ಧನ ಕೊಡಬೇಕು ಹಾಗೂ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.

ಚಿಂಚೋಳಿ ತಹಶೀಲ್ದಾರ್ ವೆಂಕಟೇಶ ದುಗ್ಗನ ಅವರ ಮೂಲಕ ಗೃಹ ಮಂತ್ರಿಗಳಿಗೆ ಹಾಗೂ ಈಶಾನ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಸಂಘದ ಚಿಂಚೋಳಿ ತಾಲ್ಲೂಕು ಅಧ್ಯಕ್ಷ ಹಣಮಂತ ಕೆ. ಪೂಜಾರಿ, ಕಾಳಗಿ ತಾಲ್ಲೂಕು ಅಧ್ಯಕ್ಷ ರೇವಣಸಿದ್ದಪ್ಪ ಅಣಕಲ ಮುಖಂಡರಾದ ಗೋಪಾಲ್ ಎಂ.ಪಿ. ಗಾರಂಪಳ್ಳಿ, ಸೋಮಶೇಖರ್ ಕರಕಟ್ಟಿ, ರೇವಣಸಿದ್ದಪ್ಪ ಮೋತಕಪಳ್ಳಿ, ರಾಜಕುಮಾರ್ ಕನಕಪುರ, ಮೌನೇಶ್ ಮುಸ್ತಾರಿ, ರಾಜಕುಮಾರ ಚತ್ರಸಾಲ, ಸೂರ್ಯಕಾಂತ ಪೂಜಾರಿ, ಬಾಬುರಾವ ಸಿರೋಳ್ಳಿ, ಅಂಜಪ್ಪ ಕಲ್ಲೂರು, ನಾಗಪ್ಪ ಪೂಜಾರಿ, ರವೀಂದ್ರ ಅಣವಾರ, ಸುರೇಶ ಪೂಜಾರಿ, ವೀರಶೆಟ್ಟಿ ಮಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.