ಕಲಬುರಗಿ: ಭೀಮಾನದಿ ಬ್ಯಾರೇಜ್ ಸೊಬಗು, ಸನ್ನತಿ ಶ್ರೀಮಂತಿಕೆ, ಕಮಲಾಪುರದ ಕೆಂಪುಬಾಳೆ, ತೊಗರಿ ಬಟ್ಟಲು...

ಇವೆಲ್ಲವೂ ಮೇ 7ರಂದು ನಡೆಯುವ ಕಲಬುರಗಿ ಜಿಲ್ಲೆಯಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಮತ ಚಲಾಯಿಸಲು ಬರುವ ಮತದಾರರನ್ನು ಸ್ವಾಗತಿಸಲು ಸಜ್ಜಾಗಿವೆ!

ಮತದಾರರನ್ನು ಆಕರ್ಷಿಸಲು ಹಾಗೂ ಸ್ಥಳೀಯ ಶ್ರೀಮಂತಿಕೆ ಸಾರಲು ಜಿಲ್ಲಾ ಸ್ವೀಪ್ ಸಮಿತಿಯು ಕಲಬುರಗಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೊಂದೊಂದು ವಿಷಯಾಧಾರಿತ ಮತಗಟ್ಟೆಗಳನ್ನು ಸ್ಥಾಪಿಸಿದೆ.

ಅಫಜಲಪುರದಲ್ಲಿ ಭೀಮಾ ನದಿ ಬ್ಯಾರೇಜ್ ಹಾಗೂ ಕಬ್ಬಿನ ಗದ್ದೆ ಚಿತ್ತಾರವುಳ್ಳ ಮತಗಟ್ಟೆ ಮತದಾರರನ್ನು ಸ್ವಾಗತಿಸಲಿದೆ. ಜೇವರ್ಗಿಯಲ್ಲಿ ಸ್ಥಳೀಯ ಪ್ರಮುಖ ಬೆಳೆಗಳ ಹಸುರಿನ ವೈಭವ ಮತದಾರರ ಕಣ್ಣಿಗೆ ತಂಪು ನೀಡಲಿದೆ. ಚಿತ್ತಾಪುರದ ಗುಂಡಗರ್ತಿಯಲ್ಲಿ ಸನ್ನತಿಯ ಶ್ರೀಮಂತಿಕೆ ಬಿಂಬಿಸುವ ವಿಶೇಷ ಮತಗಟ್ಟೆ ಮತದಾರರನ್ನು ಸೆಳೆಯಲಿದೆ. ಸೇಡಂನಲ್ಲಿ ಪ್ರಖ್ಯಾತ ಸಿಮೆಂಟ್ ಕಾರ್ಖಾನೆಗಳ ವೈಭವವನ್ನು ಮೈವೆತ್ತ ಮತಗಟ್ಟೆ ಚುನಾವಣಾ ಹಬ್ಬಕ್ಕೆ ರಂಗು ತುಂಬಲಿದೆ.

ಇನ್ನು, ಕಾಳಗಿಯಲ್ಲಿ ವನ್ಯಜೀವಿಗಳ ಲೋಕದ ಚಿತ್ತಾರ ಮತಗಟ್ಟೆ ಅಂದ ಹೆಚ್ಚಿಸಲಿದೆ. ಆಳಂದದಲ್ಲಿ ಕಮಲಾಪುರದ ಕೆಂಪುಬಾಳೆ ವೈಭವ ಮತಗಟ್ಟೆಯಲ್ಲಿ ಕಾಣಸಿಗಲಿದೆ. ಕಲಬುರಗಿ ದಕ್ಷಿಣ ಮತಕ್ಷೇತ್ರದ ಜಿಲಾನಾಬಾದ್ ಮತಗಟ್ಟೆ ಪರಿಸರ ಜಾಗೃತಿ ಸಾರಲು ಸಜ್ಜಾದರೆ, ಕಲಬುರಗಿ ಉತ್ತರ ಮತಕ್ಷೇತ್ರ ವ್ಯಾಪ್ತಿಯ ವಿವೇಕಾನಂದ ನಗರ ಮತಗಟ್ಟೆಯಲ್ಲಿ ಕಸ ನಿರ್ವಹಣೆ ‘3ಆರ್’ ಸೂತ್ರದ (ರೆಡ್ಯುಸ್, ರಿಯೂಸ್, ರಿಸೈಕಲ್) ಪಾಠ ಹೇಳಲಿದೆ. ಇನ್ನು ಕಲಬುರಗಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ಮೋಘಾ(ಕೆ) ಮತಗಟ್ಟೆಯು ಈ ನೆಲದ ಧಾನ್ಯ ತೊಗರಿ ವೈಭವವನ್ನು ಸಾರಲಿದೆ.

ಜಿಲ್ಲೆಯಲ್ಲಿ ಈ ಮತಗಟ್ಟೆಗಳನ್ನು ಅಂದಗಾಣಿಸುವ ಕೆಲಸ ಭರದಿಂದ ಸಾಗಿದ್ದು, ಕೆಲವು ಈಗಾಗಲೇ ಪೂರ್ಣಗೊಂಡಿವೆ. ಇನ್ನೂ ಕೆಲವು ಸೋಮವಾರದ ಹೊತ್ತಿಗೆ ಸಿಂಗಾರಗೊಳ್ಳಲಿವೆ.

ಮಾತ್ರವಲ್ಲ, ಮತಗಟ್ಟೆಯ ಗೋಡೆಗಳಿಗೆ ಮತದಾನ ಜಾಗೃತಿ ಹಾಗೂ ಆಯಾ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳು ಹಾಗೂ ಘೋಷ ವಾಕ್ಯಗಳನ್ನು ಬರೆದು ವಿಶೇಷವಾಗಿ ಸಿಂಗರಿಸುವ ಕಾರ್ಯ ನಡೆಯುತ್ತಿದ್ದು, ಮತದಾನದ ದಿನ ಮತದಾರರನ್ನು ಸೆಳೆಯಲು ಸಜ್ಜಾಗುತ್ತಿವೆ.

ಪ್ರತಿ ಕ್ಷೇತ್ರದಲ್ಲಿ 8 ಮತಗಟ್ಟೆ

ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಎಂಟು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಂದು ವಿಷಯಾಧಾರಿತ(ಥೀಮ್) ಮತಗಟ್ಟೆ ಒಂದು ಯುವ ಮತಗಟ್ಟೆ ಒಂದು ಅಂಗವಿಕಲ ಸ್ನೇಹಿ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಇದರೊಂದಿಗೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಸಖಿ ಮತಗಟ್ಟೆಗಳು ಇರಲಿವೆ. ಸಖಿ ಮತಗಳಲ್ಲಿ ಮಹಿಳೆಯರು ಚುನಾವಣಾ ಕಾರ್ಯ ನಿರ್ವಹಿಸಲಿದ್ದಾರೆ. ಯುವ ಮತಗಟ್ಟೆಯಲ್ಲಿ ಯುವಜನರಿಗೆ ಆದ್ಯತೆ ನೀಡಲು ಅಂಗವಿಕಲ ಸ್ನೇಹಿ ಮತಗಟ್ಟೆಯಲ್ಲಿ ಅಂಗವಿಕಲ ಸಿಬ್ಬಂದಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ’ ಎಂದು ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.