ಕಲಬುರಗಿ: ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂಬ ಧ್ಯೇಯೋದ್ದೇಶದಿಂದ ಪ್ರಾರಂಭವಾದ ಶುದ್ಧ ನೀರಿನ ಘಟಕಗಳು ಸದ್ಯ ಜಿಲ್ಲೆಯಲ್ಲಿ ಅರ್ಧದಷ್ಟು ಸ್ಥಗಿತವಾಗಿವೆ. ಈ ಮೂಲಕ ಹಳ್ಳಿಯ ಜನರಿಗೆ ಶುದ್ಧ ಕುಡಿಯುವ ನೀರು ಮತ್ತೆ ಮರೀಚಿಕೆಯಾಗಿದೆ.

ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಮತ್ತು ಸಂಘ– ಸಂಸ್ಥೆಗಳ ಆಶ್ರಯದಲ್ಲಿ ಘಟಕಗಳು ನಿರ್ಮಾಣ ಮಾಡಲಾಗಿದೆ.

469 ಶುದ್ಧ ನೀರಿನ ಘಟಕಗಳಿಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಈವರೆಗೆ 449 ಘಟಕಗಳು ಸ್ಥಾಪಿಸಲಾಗಿದೆ. ಅವುಗಳಲ್ಲಿ 288 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. 161 ಘಟಕಗಳು ಸಂಪೂರ್ಣ ಸ್ಥಗಿತವಾಗಿವೆ.

ರಾಜ್ಯ ಸರ್ಕಾರ ಟೆಂಡರ್ ಮೂಲಕ 262 ಘಟಕ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ 142 ಘಟಕ, ಕೋ–ಆಪರೇಟಿವ್ ಸಂಸ್ಥೆಗಳಿಂದ 30 ಘಟಕ, ಇತರೆ ಸಂಸ್ಥೆಗಳಿಂದ 15 ಘಟಕಗಳು ಸ್ಥಾಪಿಸಲಾಗಿದೆ. ಇದರಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 289 ನಿರ್ವಹಣೆ ಮಾಡುತ್ತಿದ್ದು, ಇದರಲ್ಲಿ 212 ಘಟಕಗಳು ಚಾಲ್ತಿಯಲ್ಲಿವೆ.

ಸದ್ಯ 77 ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ನೂತನ ಘಟಕಗಳಿಗೆ ತಲಾ ₹ 10ರಿಂದ ₹ 14 ಲಕ್ಷ ವೆಚ್ಚ ಮಾಡಲಾಗುತ್ತಿದೆ. 5 ವರ್ಷಗಳ ಕಾಲ ನಿರ್ವಹಣೆ ಮಾಡಬೇಕುಎಂಬ ನಿಯಮವೂ ಇದೆ. ಹಲವಾರು ಪ್ರಕರಣಗಳಲ್ಲಿ ಇದು ಪಾಲನೆಯಾಗುತ್ತಿಲ್ಲ. ಇದರಿಂದ ಘಟಕಗಳು ಸ್ಥಗಿತವಾಗುತ್ತಿವೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರು.

ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಫ್ಲೋರೈಡ್ಯುಕ್ತ ನೀರು ಇರುವುದರಿಂದಲೇ ಹಲವಾರು ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿತ್ತು. ಸ್ಥಗಿತವಾಗಿರುವುದರಿಂದ ಮತ್ತೆ ಕೊಳಚೆ ನೀರು ಕುಡಿಯುವಂತಾಗಿದೆ. ಇದರಿಂದ ಸಾರ್ವಜನರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಫ್ಲೋರೈಡ್ ನೀರಿನಿಂದ ಹಲವು ಮಕ್ಕಳಿಗೆ ರೋಗಗಳು ಹರಡುತ್ತಿವೆ ಎನ್ನುತ್ತಿದ್ದಾರೆ ಗ್ರಾಮದ ಮುಖಂಡರು.

ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಹಲವಾರು ಗ್ರಾಮಗಳಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆ ಇರುತ್ತವೆ. ಕಾರ್ಯನಿರ್ವಹಿಸುವ ನಿಖರವಾದ ಅಂಕಿ ಅಂಶ ಸಿಗುವುದು ಕಷ್ಟ. ಏಜನ್ಸಿಗಳ ಅವಧಿಯೂ ಮುಗಿಯಲು ಬಂದಿದೆ ಎಂದು ಹೇಳಿದರು.

ಚಿಂಚೋಳಿಯಲ್ಲಿ 52 ಘಟಕಗಳು ಸ್ಥಗಿತ

ಚಿಂಚೋಳಿ ತಾಲ್ಲೂಕಿನಲ್ಲಿ ನಿರ್ಮಾಣ ಮಾಡಲಾದ 106 ಶುದ್ಧ ನೀರಿನ ಘಟಕಗಳಲ್ಲಿ 54 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು 52 ಘಟಕಗಳು ಸ್ಥಗಿತವಾಗಿವೆ. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚಿಂಚೋಳಿ ಶಾಸಕ ಅವಿನಾಶ ಜಾಧವ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.

ಶುದ್ಧ ನೀರಿನ ಘಟಕಗಳ ಖಾಸಗಿ ಏಜೆನ್ಸಿ ಅವಧಿ ಮುಗಿದಲ್ಲಿ ಗ್ರಾಮ ಪಂಚಾಯಿತಿಗೆ ವರ್ಗಾವಣೆಯಾದ ನಂತರ ಅವುಗಳ ನಿರ್ವಹಣೆಗೆ ಮಾಸಿಕ ₹3,000 ಅನುದಾನ ನೀಡುವುದಾಗಿ ಸಚಿವರು ಉತ್ತರಿಸಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಶುದ್ಧ ನೀರಿನ ಘಟಕ ನಿರ್ವಹಣೆಗೆ ಖಾಸಗಿ ಸಂಸ್ಥೆಗಳಿಗೆ ವಹಿಸಿದರೆ ಇನ್ನೂ ಹಲವೆಡೆ ಗ್ರಾಮ ಪಂಚಾಯಿತಿಗಳೇ ಅವುಗಳ ನಿರ್ವಹಣೆ ಮಾಡುತ್ತಿವೆ.
ಇಲ್ಲಿ ಅವುಗಳ ಲೋಪದಿಂದ ಘಟಕಗಳು ಕಾರ್ಯನಿರ್ವವಹಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ಅಫಜಲಪುರ: 40 ಘಟಕಗಳು ಬಂದ್

ತಾಲ್ಲೂಕಿನಲ್ಲಿ ಸ್ಥಾಪಿಸಲಾದ 65ರಲ್ಲಿ 25 ಘಟಕಗಳು ಮಾತ್ರ ಚಾಲ್ತಿಯಲ್ಲಿವೆ. 40 ಘಟಕಗಳು ಬಂದ್ ಆಗಿವೆ. ಈ ಕುರಿತು ಕಳೆದ ಮೂರು ವರ್ಷಗಳಿಂದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಮತ್ತು ಕೆಡಿಪಿ ಸಭೆಯಲ್ಲಿ ಚರ್ಚೆಯಾದರು ಸಹ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ.

ತಾಲ್ಲೂಕಿನ ಶಿರವಾಳ, ಬಳೂರಗಿ, ಮಾಶಾಳ, ಮಲ್ಲಾಬಾದ, ನಂದರ್ಗಿ ಗ್ರಾಮಗಳು ಸೇರಿದಂತೆ 40 ಘಟಕಗಳು ಕೆಟ್ಟು ನಿಂತಿವೆ. ತಾಲ್ಲೂಕಿನ ದೊಡ್ಡ ಗ್ರಾಮವಾದ ಮಾಶಾಳದಲ್ಲಿ ತಲಾ ₹19 ಲಕ್ಷ ವೆಚ್ಚದಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕವನ್ನು ಮಂಜೂರು ಮಾಡಲಾಗಿತ್ತು. ಆದರೆ ನಿರ್ವಹಣೆ ಇಲ್ಲದೇ ಅವು ಹಾಳಾಗಿವೆ. ಕೊಳವೆ ಬಾವಿಗಳಲ್ಲಿ ಪ್ಲೋರೈಡ್ ಅಂಶ ಇರುವದರಿಂದ ಜನರಿಗೆ ಕಿಡ್ನಿ ಸಮಸ್ಯೆ, ಮೊಳಕಾಲು ಸಮಸ್ಯೆ ಬರುತ್ತಿವೆ ಎಂದು ಮಾಶಾಳ ಗ್ರಾಮಸ್ಥರು ಹೇಳುತ್ತಾರೆ.

ಯಡ್ರಾಮಿ ತಾಲ್ಲೂಕಿನಲ್ಲಿ 21 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ ಎರಡು ಮೂರು ಘಟಕಗಳು ಬಿಟ್ಟು ಯಾವುದೇ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಶುದ್ಧ ಕುಡಿಯುವ ನೀರಿಗೆ ಈ ಭಾಗದ ಬಹುತೇಕ ಜನರು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಮನವಿ ಕೊಟ್ಟರು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅಲ್ಲಿನ ಗ್ರಾಮಸ್ಥರು.

ಕಮಲಾಪುರ ಪಟ್ಟಣದಲ್ಲಿನ ಶುದ್ಧ ನೀರಿನ ಘಟಕ ಸ್ಥಾಪಿಸಿ 7 ವರ್ಷಗಳೇ ಕಳೆದಿವೆ. ಇದುವರೆಗೂ ಹನಿ ನೀರು ಸಾರ್ವಜನಿಕರಿಗೆ ದೊರಕಿಲ್ಲ.ಕುರಿಕೋಟಾ, ಮಹಾಗಾಂವ ಕ್ರಾಸ್, ಡೊಂಗರಗಾಂವ, ಮಳಸಾಪುರ, ಮರಮಂಚಿ, ಮರಮಂಚಿ ತಾಂಡಾ, ಸೊಂತನಲ್ಲಿ 2, ಹರ್ಜಿನಾಯಕ ತಾಂಡಾ, ಕಾಳಮಂದರ್ಗಿ ಸೇರಿದಂತೆ ಬಹುತೇಕ ಕಡೆ ಸ್ಥಾಪಿಸಿದ ತಿಂಗಳಲ್ಲೆ ಸ್ಥಗಿತಗೊಂಡಿವೆ.

ಚಿತ್ತಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿರುವ 70 ಶುದ್ಧ ನೀರಿನ ಘಟಕಗಳಲ್ಲಿ ಕೇವಲ 40 ಮಾತ್ರ ಚಾಲನೆಯಲ್ಲಿದ್ದು ಉಳಿದ 30 ಘಟಕಗಳು ಸ್ಥಗಿತವಾಗಿವೆ. ತಾಲ್ಲೂಕಿನ ಇಟಗಾ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಶುದ್ಧ ನೀರಿನ ಘಟಕ 6 ವರ್ಷಗಳಿಂದ ಪಾಳು ಬಿದ್ದಿದೆ. ‘ಅನುದಾನ ದೊರೆತ ತಕ್ಷಣ ಕಾಮಗಾರಿ ಕೈಗೊಂಡು ನೀರಿನ ಘಟಕ ಪ್ರಾರಂಭಿಸಿ ಜನರಿಗೆ ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂರಕ ಮಾಹಿತಿ:
ಶಿವಾನಂದ ಹಸರಗುಂಡಗಿ, ಜಗನ್ನಾಥ ಶೇರಿಕಾರ, ಮಲ್ಲಿಕಾರ್ಜುನ್ ಎ.ಎಚ್., ಮಂಜುನಾಥ್ ದೊಡ್ಡಮನಿ, ತೀರ್ಥಕುಮಾರ್ ಬೆಳಕೋಟಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.