ಕಲಬುರಗಿ: ನಗರದ ಪಿಡಿಎ ಸ್ಯಾಕ್ ಕಟ್ಟಡದಲ್ಲಿ ಸೋಮವಾರ ಆಯೋಜಿಸಿದ್ದ ‘ಕಲ್ಯಾಣ ಕರ್ನಾಟಕ ಸ್ಟಾರ್ಟ್ಅಪ್ ಸಮಾವೇಶ’ ಯುವಸಮೂಹದ ಮನಸ್ಸುಗಳಲ್ಲಿ ಸ್ಟಾರ್ಟ್ಅಪ್ ಉದ್ಯಮದ ಆಲೋಚನೆಗೆ ಉತ್ತೇಜನ ನೀಡಿತು.

ಆಡಿಟೋರಿಯಂ ಪ್ರಾಂಗಣದಲ್ಲಿ ಸ್ಥಾಪಿಸಿದ್ದ ಸ್ಟಾರ್ಟ್ಅಪ್ ಮಳಿಗೆಗಳು ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ಮತ್ತು ಪ್ರಾತ್ಯಕ್ಷಿಕೆ ಮಾಹಿತಿ ನೀಡಿದರೆ, ಆಡಿಟೋರಿಯಂ ಒಳಗಡೆ ಮೈಂಡ್ಸೆಟ್ ಕೋಚ್ ಭಾಷಣ, ಸ್ಟಾರ್ಟ್ಅಪ್ ಸಾಧಕರೊಂದಿಗೆ ಸಂವಾದ, ಉದ್ಯಮಿಗಳ ಪ್ರೇರಣಾದಾಯಕ ಮಾತುಗಳು ಸಾಧನೆಯ ಹೆಜ್ಜೆಗೆ ಅಡಿಪಾಯದಂತಿದ್ದವು.

ಎಚ್ಕೆಇ ಸಂಸ್ಥೆಯ ಪಿಡಿಎ ಎಂಜಿನಿಯರಿಂಗ್ ಕಾಲೇಜು ಹಾಗೂ ಸ್ಟಾರ್ಟ್ಅಪ್ ಸ್ಪಾರ್ಕ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಈ ಸಮಾವೇಶದಲ್ಲಿ 20ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಆಧುನಿಕತೆಗೆ ಅವಶ್ಯವಿರುವ ತಂತ್ರಜ್ಞಾನ, ಕೃಷಿ, ಆಹಾರ, ಆರೋಗ್ಯ ವಿಷಯಗಳ ಮೇಲೆ ಅವು ಬೆಳಕು ಚೆಲ್ಲಿದವು.

ಮಳಿಗೆಗಳಲ್ಲಿ ವಾಯು ಮಾಲಿನ್ಯ ತಡೆಗೆ ‘ಇ ಟಚ್ ಗೇರ್ ಸೈಕಲ್’ ಪ್ರಸ್ತುತವೆನಿಸಿತು. ‘ಸೈಕಲ್ಗಳು ಬ್ಯಾಟರಿ ಚಾಲಿತವಾಗಿದ್ದು, ಕಿ.ಮೀ ಮೈಲೇಜ್ನಂತೆ ದರ ಇವೆ’ ಎಂದು ಇ–ಮೈಲೇಜ್ ಸಿಇಒ ಬಸವರೆಡ್ಡಿ ಎಸ್.ಮಾಡಗಿ ತಿಳಿಸಿದರು.

ರಾಯಚೂರಿನ ‘ಸೀಡ್ ವೂಂಬ್’ ಪ್ರಯೋಗ ಎಲ್ಲರನ್ನೂ ಆಕರ್ಷಿಸಿತು. ‘ಎಲ್ಲ ವಿಧದ ಲಕ್ಷಾಂತರ ಸಸಿಗಳು ಮತ್ತು ಗಿಡಗಳನ್ನು ಬೆಳೆಸಲು ಪ್ರದೇಶವಾರು ಮಣ್ಣು, ವಾತಾವರಣ ಅಧ್ಯಯನ ಮಾಡಿ ಸೀಡ್ ವೂಂಬ್ (ಬೀಜಗರ್ಭ) ಕೊಡುತ್ತೇವೆ. ಇದಕ್ಕೆ ಗುಂಡಿ ತೋಡಿ ಮುಚ್ಚಬೇಕಿಲ್ಲ. ನೆಲದ ಮೇಲಿಟ್ಟರೆ ಬೇರು ಬಿಟ್ಟುಕೊಂಡು ತಾನೇ ಬೆಳೆಯುತ್ತದೆ’ ಎಂದು ಸಂಸ್ಥೆಯ ನಾಗವೇಣಿ ಆಸ್ಪಲ್ಲಿ ತಿಳಿಸಿದರು. ಪೇಟೆಂಟ್ ಕಾರಣ ಬೀಜಗರ್ಭ ತಯಾರಿಕೆಯ ವಿಧಾನವನ್ನು ಅವರು ಬಿಟ್ಟುಕೊಡಲಿಲ್ಲ.

ರೈತರಿಗಾಗಿ ಪ್ರಾಚೀನ ಟೆಕ್ನವರು ಕೃಷಿ ಉತ್ಪನ್ನ ಮಾರಾಟ, ಖರೀದಿ ಸೇರಿದಂತೆ ಕೃಷಿಗೆ ಸಂಬಂಧಿತ ಸಂಪೂರ್ಣ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಸಿಗುವಂತೆ ‘ಫಾರ್ಮರ್ ಟೆಕ್ ಸ್ಟೋರ್’ ಆ್ಯಪ್ ಅಭಿವೃದ್ಧಿಪಡಿಸಿದ್ದನ್ನು ವಿವರಿಸಿದರು.

ಸಿಯಾಕಾನ್ ಚಿಪ್ ಟೆಕ್ನಾಲಜೀಸ್ನ ಸಂಜಯ ಬಿರಾದಾರ, ‘ಮೊಬೈಲ್ ಚಿಪ್ ವಿನ್ಯಾಸ ಸಿದ್ಧಪಡಿಸುವ ಜೊತೆಗೆ ಅಭ್ಯರ್ಥಿಗಳಿಗೆ ಸ್ಥಳೀಯವಾಗಿ ತರಬೇತಿಯನ್ನೂ ನೀಡುತ್ತೇವೆ’ ಎಂದು ಹೇಳಿಕೊಂಡರು. ‘ಕಲಬುರಗಿಯಲ್ಲೇ ಅನಿಮೇಷನ್ ತರಬೇತಿ ನೀಡಿ 15 ಸೆಕ್ಟರ್ಗಳಲ್ಲಿ ಉದ್ಯೋಗ ದೊರಕಿಸಿಕೊಡುತ್ತೇವೆ’ ಎಂದು ಅರಿನಾ ಎನಿಮೇಷನ್ನ ಪ್ರಕಾಶ ಕುಲಕರ್ಣಿ ಭರವಸೆ ನೀಡುತ್ತಿದ್ದರು.

‘ಸ್ಟ್ರಾಮ್ಪಲ್ಸ್’ ಎಲೆಕ್ಟ್ರಿಕ್ ಚಾರ್ಜರ್ ಸ್ಥಳೀಯವಾಗಿ ಸಿದ್ಧಪಡಿಸಿ ಅಮೆಜಾನ್ ಸೇರಿದಂತೆ ಅಂತರ್ಜಾಲ ತಾಣಗಳಲ್ಲಿ ಮಾರಾಟ ಮಾಡುತ್ತಿರುವುದು ತಿಳಿದುಬಂತು.

‘ನಾವು ಸಿದ್ಧಪಡಿಸಿದ ‘ಕಾರ್ಡಿಯಾ ಬೀ’ 12 ಲೀಡ್ ಇಸಿಜಿ ಸಾಧನ ಕೇವಲ 6 ಸೆಕೆಂಡ್ಗಳಲ್ಲಿ ಹೃದಯ ಸಮಸ್ಯೆಗಳನ್ನು ಪತ್ತೆ ಹಚ್ಚುತ್ತದೆ’ ಎಂದು ಆಕ್ಲಿಡ್ ಕಂಪನಿಯ ಹೊನ್ನಕಿರಣಗಿಯ ಶಿವಕುಮಾರ ಮುಸವಳಗಿ ತಿಳಿಸಿದರು.

ಸುರಪುರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ಮಾರ್ಟ್ ಡೋರ್, ಗ್ಯಾಸ್ ಲೀಕ್ ಮತ್ತು ತೂಕ ಪರಿಶೀಲನೆ ಡಿವೈಸ್, ವಾಹನಗಳ ಅಂತರ ಎಚ್ಚರಿಕೆ ಸಾಧನ, ಮೊಬೈಲ್ ಅಪ್ಲಿಕೇಷನ್ನಿಂದ ಸಸ್ಯಗಳ ರೋಗ ಪತ್ತೆ ವಿಧಾನವನ್ನು ಪ್ರದರ್ಶಿಸಿದರು.

ವಿ.ಜಿ. ಮಹಿಳಾ ಕಾಲೇಜಿನವರು ‘ಸಹರಾ ಫಾರ್ಮಾ’ ಯೋಜನೆ ಹಾಗೂ ಸಿರಿಧಾನ್ಯ ಮತ್ತು ಬೇಳೆಕಾಳು ಆಹಾರ ಪ್ಯಾಕೇಟ್ ಮಾಹಿತಿ ನೀಡಿದರು. ಎನ್.ವಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಚರ್ಮದ ನೈಸರ್ಗಿಕ ಆರೈಕೆ ಉತ್ಪನ್ನಗಳು ಮತ್ತು ಎಗ್ಆ್ಯಂಟಿಕ್ ಜವಾರಿ ಕೋಳಿ ಮೊಟ್ಟೆ ಮಾರಾಟದ ಸ್ಟಾರ್ಟ್ಅಪ್ ಮಾಹಿತಿ ಹಂಚಿಕೊಂಡರು.

ಪಿಡಿಎ ಕಾಲೇಜಿನ ‘ಸೈಫರ್’ ಸೆಕ್ಯುರಿಟಿ ಆ್ಯಪ್, ವಿದ್ಯಾರ್ಥಿ ಮಾರ್ಗದರ್ಶಿ ‘ಆಯುಡ್’ ಸಾಫ್ಟ್ವೇರ್, ಬೆಂಗಳೂರಿನ ಮಧುಪುಷ್ಪ ಟೆಕ್ನಾಲಜೀಸ್ನ ತರಬೇತಿ ಮತ್ತು ಉದ್ಯೋಗ, ಸ್ಟೆಪ್ರೋಚ್ನ ಮಳೆನೀರು ಕೊಯ್ಲು, ‘ಭಾಗವತ್’ನ ಆಹಾರ ಪದಾರ್ಥ, ದೇವಾನಂದ ಸುಜುಕಿ ಬೈಕ್ಗಳು, ವಾಲಿ ಗ್ರೂಪ್, ಫರಹತಾಬಾದ್ನ ‘ಕುಸುಂಬಾ’ ಕುಸುಬಿ ಮತ್ತು ಶೇಂಗಾ ಎಣ್ಣೆ, ಕರ್ನಾಟಕ ಬ್ಯಾಂಕ್ ಮಳಿಗೆಗಳೂ ಗಮನ ಸೆಳೆದವು.

‘ನೌಕರಿನೇ ಬೇಕೆಂದು ಕುಳಿತುಕೊಳ್ಳಬೇಡಿ’

‘ವಿದ್ಯಾಭ್ಯಾಸ ಮುಗಿದ ಮೇಲೆ ನೌಕರಿನೇ ಬೇಕೆಂದು ಕುಳಿತುಕೊಳ್ಳಬಾರದು. ಇಂಥ ಸಮಾವೇಶ ಮತ್ತು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಉದ್ಯಮ ಆರಂಭಿಸಬೇಕು’ ಎಂದು ಶಾಸಕ ಅಲ್ಲಂಪ್ರಭು ಪಾಟೀಲ ಹೇಳಿದರು.

ಸ್ಟಾರ್ಟ್ಅಪ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ‘ವಿದ್ಯಾರ್ಥಿಗಳಲ್ಲಿ ಜ್ಞಾನ ಇರುತ್ತದೆ. ಆದರೆ ಮೂಲಸೌಲಭ್ಯ ಆರ್ಥಿಕ ಸಮಸ್ಯೆ ಪ್ರೋತ್ಸಾಹದ ಕೊರತೆಯಿಂದ ಉದ್ಯಮ ಸ್ಥಾಪನೆಗೆ ಮುಂದಾಗುವುದಿಲ್ಲ. ಪರಣತಿ ಹೊಂದಿದವರು ಕೆಐಡಿಬಿಯಲ್ಲಿ ಖಾಲಿ ಇರುವ ಸೈಟ್ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಎಚ್ಕೆಇ ಸಂಸ್ಥೆಯ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಮಾತನಾಡಿ ‘ಯಾವುದೇ ಕೆಲಸ ಆರಂಭಿಸಬೇಕಾದರೆ ಮೊದಲು ಕಠಿಣವೆನಿಸುತ್ತದೆ. ನಾರಾಯಣಮೂರ್ತಿ ಎಲಾನ್ ಮಸ್ಕ್ ನಂತಹವರು ಚಿನ್ನದ ಚಮಚ ಹಿಡಿದು ಹುಟ್ಟಿದವರಲ್ಲ. ಸಾಕಷ್ಟು ಏಳುಬೀಳುಗಳೊಂದಿಗೆ ಸಾಧನೆ ಮೆರೆದವರು’ ಎಂದರು.

ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ ಮಾತನಾಡಿ ‘ನಮ್ಮ ಭಾಗದಲ್ಲಿ ಸ್ಟಾರ್ಟ್ಅಪ್ ಉದ್ಯಮ ಸಬ್ಸಿಡಿಗೋಸ್ಕರ ಎಂಬಂತಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಎಚ್ಕೆಇ ಉಪಾಧ್ಯಕ್ಷ ರಾಜಾ ಭೀಮಳ್ಳಿ ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ ಡಾ.ಶರಣಬಸಪ್ಪ ಹರವಾಳ ಅನಿಲಕುಮಾರ ಪಟ್ಟಣ ಬಸವರಡ್ಡಿ ಎಸ್.ಮಾಡಗಿ ಪ್ರಾಚಾರ್ಯ ಸಿದ್ದರಾಮ ಪಾಟೀಲ ಎಸ್.ಆರ್.ಹೊಟ್ಟಿ ಭಾರತಿ ಹರಸೂರ ಹಾಜರಿದ್ದರು.

‘ಸ್ಟಾರ್ಟ್ಅಪ್ ಮಾಡುವಾಗ ನೀವೊಬ್ಬರೆ’

‘ಯಾವುದೇ ಸ್ಟಾರ್ಟ್ಅಪ್ ಆರಂಭಿಸುವಾಗ ನೀವೊಬ್ಬರೆ ಇರ್ತೀರಿ. ಆರಂಭಿಸಿ ಮುನ್ನಡೆದಾಗ ಎಲ್ಲರೂ ಜೊತೆಯಾಗುತ್ತಾರೆ’ ಎಂದು ಮೈಂಡ್ಸೆಟ್ ಕೋಚ್ ಮಹೇಶ್ ಮಾಶಾಳ ಹೇಳಿದರು.

‘ನಿಮ್ಮೆಲ್ಲರ ಕಡೆ ಶಕ್ತಿ ಇದೆ. ಅದನ್ನು ಜಗತ್ತಿಗೆ ಪರಿಚಯಿಸಿ. ಎಷ್ಟೋ ಜನ ಈ ಜಗತ್ತಿನಲ್ಲಿ ಹುಟ್ಟಿ ಹುಟ್ಟಲಾರದೆ ಸತ್ತು ಹೋಗುತ್ತಾರೆ. ತಾಯಿ ಗರ್ಭದಿಂದ ಜನಿಸಿದ ನರೇಂದ್ರ ಜಗತ್ತಿಗೆ ಸ್ವಾಮಿ ವಿವೇಕಾನಂದರಾಗಿ ಜನ್ಮತಾಳಿದರು. ಮೋಹನ್ದಾಸ ಅವರು ಗಾಂಧೀಜಿಯಾಗಿ ಮರುಹುಟ್ಟು ಪಡೆದರು. ಅವರಂತೆಯೇ ನಾವು ಕೂಡ ಎರಡನೇ ಹುಟ್ಟು ಪಡೆದುಕೊಳ್ಳಬೇಕು’ ಎಂದು ಪ್ರೇರಣಾದಾಯಕ ಮಾತುಗಳನ್ನಾಡಿದರು.

ನಂತರ ಯುವ ಉದ್ಯಮಿಗಳೊಂದಿಗೆ ಸಂವಾದ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.