ಗೋಣಿಕೊಪ್ಪಲು: ಹಾಂಗ್‌ಕಾಂಗ್‌ನಲ್ಲಿ ಜ. 21ರಂದು ನಡೆಯಲಿರುವ 19ನೇ ಏಷ್ಯನ್ ಮ್ಯಾರಥಾನ್ ಚಾಂಪಿಯನ್ ಷಿಪ್‌ನಲ್ಲಿ ಭಾರತವನ್ನು ಟಿ.ಶೆಟ್ಟಿಗೇರಿಯ ಅಪ್ಪಚಂಗಡ ಬಿ.ಬೆಳ್ಳಿಯಪ್ಪ ಅವರು ಪ್ರತಿನಿಧಿಸಲಿದ್ದಾರೆ.

ಪುರುಷರ ವಿಭಾಗದಲ್ಲಿ ಭಾರತವನ್ನು ಕೇವಲ ಇಬ್ಬರು ಸ್ಪರ್ಧಿಗಳು ಮಾತ್ರ ಪ್ರತಿನಿಧಿಸುತ್ತಿದ್ದು, ರಾಜ್ಯದ ಬೆಳ್ಳಿಯಪ್ಪ ಅವರೊಂದಿಗೆ ಉತ್ತರಾಖಂಡದವರು ಸೇರಿದ್ದಾರೆ.

ಕಳೆದ ವರ್ಷ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮ್ಯಾರಥಾನ್‌ನಲ್ಲಿ ಬೆಳ್ಳಿಯಪ್ಪ ಬೆಳ್ಳಿ ಪದಕ ಪಡೆದು ಏಷ್ಯನ್ ಮ್ಯಾರಥಾನ್ ಚಾಂಪಿಯನ್ ಷಿಪ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದರು.

ಭಾರತೀಯ ಸೇನೆಯಲ್ಲಿರುವ ಇವರು ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿದ್ದು ಊಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ಪೊನ್ನಂಪೇಟೆಯ ಟಿ.ಶೆಟ್ಟಿಗೇರಿ ಗ್ರಾಮದ ಅಪ್ಪಚಂಗಡ ಬೋಪಯ್ಯ ಹಾಗೂ ರೋಜಾ ದಂಪತಿ ಪುತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.