ಗೋಣಿಕೊಪ್ಪಲು: ಉತ್ತರಾಖಂಡ ರಾಜ್ಯದ ರಾಣಿಭಾಗ್ನ 81 ಯು.ಕೆ ಬೆಟಾಲಿಯನ್ ಎನ್ ಸಿಸಿ ಬಾಗೆಶ್ವರ್ ನವರು ಆಯೋಜಿಸಿದ್ದ ಏಕ್ ಭಾರತ್, ಶ್ರೇಷ್ಠ ಭಾರತ್ ಎನ್ಸಿಸಿ ಶಿಬಿರದಲ್ಲಿ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿದ್ದಾರೆ.

ಉತ್ತರಾಖಂಡ ಮತ್ತು ಕರ್ನಾಟಕ, ಗೋವಾ ಡೈರೆಕ್ಟರೇಟ್ನ 600 ಕೆಡೆಟ್ ಗಳು ಭಾಗವಹಿಸಿದ್ದರು. ಡೆಹ್ರಾಡೂನ್ ಗ್ರೂಪ್ ಕಮಾಂಡರ್ ಬ್ರಿಗೇಡಿಯರ್ ನಿತೀಶ್ ಬಿಸ್ಟ್, 81 ಯು.ಕೆ ಬೆಟಾಲಿಯನ್ನ ಕಮಾಂಡಿಂಗ್ ಆಫೀಸರ್ ಕರ್ನಲ್ ಸತ್ಯೇಂದ್ರ ತ್ರಿಪಾಠಿ, ಸುಬೇದಾರ್ ಮೇಜರ್ ವಿಕ್ರಮ್ ಕುಮಾರ್ ಶ್ರೇಷ್ಠ ನೇತೃತ್ವದಲ್ಲಿ ಶಿಬಿರ ಆಯೋಜನೆಗೊಂಡಿತ್ತು.

ಉತ್ತರಾಖಂಡ ಮತ್ತು ಕರ್ನಾಟಕ, ಗೋವಾ ಡೈರೆಕ್ಟರೇಟ್ನ ಎನ್ಸಿಸಿ ಕೆಡೆಟ್ಗಳು ಸಾಂಸ್ಕೃತಿಕ, ಕ್ರೀಡೆ, ಆಹಾರ ವಿನಿಮಯ, ಟ್ರಕಿಂಗ್, ಭಾಷಾ ಸಂವಾದ, ಚರ್ಚಾ ಸ್ಪರ್ಧೆ, ಕ್ವಿಜ್ ಮೊದಲಾದ ಕಾರ್ಯಕ್ರಮಗಳು ಜರುಗಿದವು.

ಶಿಬಿರದ ಉತ್ತಮ ನಿರೂಪಣೆಗಾಗಿ ಕೆ.ಆರ್. ಮನ ಚಿನ್ನದ ಪದಕ ಗಳಿಸಿದರು. ವಾಲಿಬಾಲ್ನಲ್ಲಿ ಕೆ.ಎಸ್.ದೀಪಾ, ಬಿ.ಜೆ.ಮೇಷ ಮುತ್ತಮ್ಮ ಬೆಳ್ಳಿ ಪದಕ ಗಳಿಸಿದರು. ಎಂ.ಜೆ.ನಿರೀಕ್ಷಾ ನೀಲಮ್ಮ, ಶಾನ್ ತೇಜಸ್, ಸಜನ್ ಸೋಮಣ್ಣ ಪ್ರಶಂಸೆಗೆ ಪಾತ್ರರಾದರು.

ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಐ.ಡಿ.ಲೇಪಾಕ್ಷಿ ಮಾರ್ಗದರ್ಶಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.