ಮಡಿಕೇರಿ: ಮನೋಬಲ, ಶ್ರಮ ಹಾಗೂ ಬುದ್ದಿವಂತಿಕೆಯಿಂದ ಯಶಸ್ಸು ಸಾಧ್ಯ ಎಂದು ಕೊಡಗು ವಿದ್ಯಾಲಯದ ಆಡಳಿತಾಧಿಕಾರಿ ಹಾಗೂ ಎನ್ಸಿಸಿಯ 19ನೇ ಕರ್ನಾಟಕ ಬೆಟಲಿಯನ್ನ ಎಸ್.ಶ್ರೀನಿವಾಸ್ ಹೇಳಿದರು.

ಕೊಡಗು ವಿದ್ಯಾಲಯ ಶಾಲೆಯಲ್ಲಿ ಬುಧವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾಲಾ ವಿದ್ಯಾರ್ಥಿ ನಾಯಕರ ಕರ್ತವ್ಯಗಳ ಕುರಿತು ಮಾತನಾಡಿದ ಅವರು, ‘ನೀವು ನಾಯಕತ್ವ ವಹಿಸಿರುವಾಗ, ಮಾನಸಿಕ ನಿರ್ಬಂಧಗಳನ್ನು ತೆಗೆದುಹಾಕಿ, ಬಲಿಷ್ಠ ಮನೋಬಲ ಮತ್ತು ಶ್ರಮಪೂರ್ಣ ಬುದ್ಧಿವಂತಿಕೆಯ ಸಂಯೋಜನೆಯಿಂದ ಯಶಸ್ಸನ್ನು ಸಾಧಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ವೇಳೆ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ಗಳನ್ನು ಪ್ರದಾನ ಮಾಡಲಾಯಿತು. ಶಾಲಾ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರಾ ಮತ್ತು ಆಡಳಿತ ವ್ಯವಸ್ಥಾಪಕ ಪಿ.ರವಿ ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.