ಮಡಿಕೇರಿ: ‘ಮೌಢ್ಯಕ್ಕೆ ಒಳಗಾಗದೇ ಅಪಸ್ಮಾರ (ಮೂರ್ಛೆರೋಗ) ಕಾಯಿಲೆಗೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಾಮಾನ್ಯ ವೈದ್ಯಕೀಯ ವಿಭಾಗದ ಮುಖ್ಯ ವೈದ್ಯಾಧಿಕಾರಿ ಡಾ.ಚೇತನ್ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮ, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯಿಂದ ಬುಧವಾರ ನಡೆದ ರಾಷ್ಟ್ರೀಯ ಅಪಸ್ಮಾರ (ಮೂರ್ಛೆರೋಗ) ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಫಿಟ್ಸ್ ಅಥವಾ ಮೂರ್ಛೆರೋಗವು ಆನುವಂಶೀಯತೆ ಹಾಗೂ ಅನಾರೋಗ್ಯಕರ ಜೀವನಶೈಲಿಯಿಂದ ಬರುತ್ತದೆ. ಬಾಯಿಯಲ್ಲಿ ನೊರೆ ಬರುವುದು, ದೀರ್ಘವಾದ ಸ್ನಾಯು ಸೆಳೆತದಂತಹ ಲಕ್ಷಣಗಳು ಬಂದ ಕೂಡಲೇ ಮೌಢ್ಯಕ್ಕೆ ಒಳಗಾಗದೇ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದ ಕೊಡಗು ಜಿಲ್ಲಾ ಸಂಯೋಜಕ ಆರ್.ವಿಕ್ರಂ ಮಾತನಾಡಿ, ‘ಅಪಸ್ಮಾರಕ್ಕೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಉಚಿತವಾದ ಥೆರಪಿಗಳು ದೊರೆಯುತ್ತವೆ. ವೈದ್ಯರು ಹೇಳಿದ ಎಲ್ಲ ಔಷಧಗಳನ್ನೂ ಕರಾರುವಕ್ಕಾಗಿ ತೆಗೆದುಕೊಳ್ಳುವುದರಿಂದ ರೋಗವನ್ನು ಗುಣಪಡಿಸಬಹುದು’ ಎಂದು ತಿಳಿಸಿದರು.

ಸಂಸ್ಥೆಯ ಆಡಳಿತಾಧಿಕಾರಿಗಳಾದ ರೋಹಿಣಿ, ಡಾ.ಅಜಯ್, ಭೌತಚಿಕಿತ್ಸಕರಾದ ಡಾ.ಕ್ರಿಸ್ಟಿ ಜೋಸ್, ಶುಶ್ರೂಷಾಧಿಕಾರಿ ಧೃತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.