ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಇತ್ತೀಚೆಗೆ ಕಳವು ಪ್ರಕರಣಗಳು ಹೆಚ್ಚಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಕಳೆದ ಹಲವು ವರ್ಷಗಳಿಂದ ಕಳವು ಪ್ರಕರಣಗಳು ಕಡಿಮೆಯಾಗಿದ್ದವು. ಇದೀಗ ಇದ್ದಕ್ಕಿದ್ದಂತೆ ಹೆಚ್ಚಾಗಿವೆ. ಅದರಲ್ಲೂ ಕಳೆದ ಒಂದು ವಾರಗಳಿಂದ ಏಳನೇ ಹೊಸಕೋಟೆ, ಕಂಬಿಬಾಣೆ ವ್ಯಾಪ್ತಿಯಲ್ಲಿ ಹೆಚ್ಚು ಕಳ್ಳತನದ ಪ್ರಕರಣಗಳು ನಡೆದಿವೆ. ರಾತ್ರಿ ಗಸ್ತನ್ನು ಪೊಲೀಸರು ಹೆಚ್ಚಿಸಬೇಕು ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಹೆಚ್ಚಾಗಿ ಅಳವಡಿಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಸದ್ಯ, ಇರುವ ಸಿಸಿಟಿವಿಗಳು ಸಾಕಾಗುತ್ತಿಲ್ಲ. ರಸ್ತೆಗಳಲ್ಲಿ, ವೃತ್ತಗಳಲ್ಲಿ, ಆಯಾಕಟ್ಟಿನ ಜಾಗಗಳಲ್ಲಿ ಗ್ರಾಮ ಪಂಚಾಯಿತಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಪೊಲೀಸರೇ ಹೇಳುತ್ತಾರೆ.

ಸಮೀಪದ ಅತ್ತೂರು ನಲ್ಲೂರುವಿನ ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಧ್ಯರಾತ್ರಿ ಕಳ್ಳತನವಾಗಿದೆ.

ಮಧ್ಯರಾತ್ರಿ ವೇಳೆ ಶಾಲೆಯ ಮುಖ್ಯಶಿಕ್ಷಕರ ಕೊಠಡಿಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ₹ 2 ಸಾವಿರ ನಗದು ಹಣವನ್ನು ಅಪಹರಿಸಿದರು ಮಾತ್ರವಲ್ಲ, ತರಗತಿಯ ಕೊಠಡಿಗಳ ಬೀಗವನ್ನೂ ಮುರಿದಿದ್ದಾರೆ. ಅಲ್ಲದೇ ಮುಖ್ಯ ಶಿಕ್ಷಕರಕೊಠಡಿಯಿಂದ ಟೇಬಲ್ ಬಟ್ಟೆಯನ್ನು ಹೊರತಂದು ವರಾಂಡದಲ್ಲಿ ಮಲಗಿ ಹೋಗಿರುವ ಕುರುಹುಗಳೂ ಕಂಡು ಬಂದಿದೆ.

ಶಾಲೆಯ ಅಕ್ಷರ ದಾಸೋಹ ಅಡುಗೆ ಕೋಣೆಯ ಬೀಗ ಮುರಿಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಶಾಲಾ ಮುಖ್ಯೋಪಾದ್ಯಾಯನಿ ನಯನಾ ಅವರು ದೂರು ನೀಡಿದ ಮೇರೆಗೆ ಸುಂಟಿಕೊಪ್ಪ ಪಿಎಸ್ಐಗಳಾದ ಚಂದ್ರಶೇಖರ್, ಭಾರತಿ, ಹಾಗೂ ಸಿಬ್ಬಂದಿಗಳು ಹಾಗೂ ಶ್ವಾನದಳ ತಂಡದವರು ಸ್ಥಳಕ್ಕೆ ಆಗಮಿಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಮೀಪದ ಉಪ್ಪುತೋಡು ತೋಟದ ಕಾರ್ಮಿಕರ ಮನೆಗೆ ಕಳ್ಳರು ನುಗ್ಗಿದ್ದು, ಯಾವುದೇ ಬೆಲೆಬಾಳುವ ವಸ್ತುಗಳು ಸಿಗದೇ ವಾಪಾಸ್ ಹೋಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ಸಮೀಪದ ಭೂತನಕಾಡು ತೋಟದ ಕಾರ್ಮಿಕ ರಾಜೇಶ್ ಎಂಬುವವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಿಚ್ಚಿಟ್ಟಿದ್ದ ಪ್ಯಾಂಟ್ನಿಂದ ₹ 5 ಸಾವಿರ ನಗದು ಹಾಗೂ ₹ 25 ಸಾವಿರ ಬೆಲೆಬಾಳುವ ಮೊಬೈಲ್ ಅನ್ನು ಕಳ್ಳರು ಅಪಹರಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ 2 ದಿನಗಳ ಹಿಂದೆ ಏಳನೇ ಹೊಸಕೋಟೆಯ ಶಭರಿ ಹೋಟೆಲ್ನಲ್ಲಿಯೂ ಕಳ್ಳತನವಾಗಿತ್ತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಿಎಸ್ಐ ಚಂದ್ರಶೇಖರ್, ‘ಈ ಕಳ್ಳತನವನ್ನು ನೋಡಿದಾಗ ಒಬ್ಬನೇ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಶೀಘ್ರದಲ್ಲಿ ಕಳ್ಳರನ್ನು ಸೆರೆ ಹಿಡಿಯಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.